Advertisement

ಉಡುಪಿ: ಕೋವಿಡ್‌- 19 ಶಂಕಿತ ಮೂವರು ಆಸ್ಪತ್ರೆಗೆ

11:49 AM Apr 03, 2020 | Sriram |

ಉಡುಪಿ: ಕೋವಿಡ್‌- 19 ಸೋಂಕು ಲಕ್ಷಣ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಗುರುವಾರ ಮೂವರು ಐಸೋಲೇಶನ್‌ ವಾರ್ಡ್‌ಗೆ ದಾಖಲಾಗಿದ್ದಾರೆ. ಈ ಪೈಕಿ ಒರ್ವ ಮಹಿಳೆ ಹಾಗೂ ಪುರುಷನಿಗೆ ಉಸಿರಾಟದ ಸಮಸ್ಯೆ ಇದೆ. ಓರ್ವ ಮಹಿಳೆಗೆ ಕೋವಿಡ್‌- 19 ಸೋಂಕು ಲಕ್ಷಣವಿದೆ.

Advertisement

ಗುರುವಾರ ಸೋಂಕು ಶಂಕಿತರು 6, ಕೋವಿಡ್‌- 19  ಸಂಪರ್ಕದ ನಾಲ್ವರ ಸಹಿತ ಒಟ್ಟು
10 ಮಂದಿಯ ಗಂಟಲು ದ್ರವದ ಮಾದರಿ ಯನ್ನು ಸಂಗ್ರಹಿಸಲಾಗಿದೆ. ಈ ಹಿಂದಿನ 21 ವರದಿಗಳು ನೆಗೆಟಿವ್‌ ಬಂದಿವೆ. ಒಟ್ಟು 122 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 17 ಮಂದಿ 28 ದಿನಗಳ ಹೋಂ ಕ್ವಾರಂಟೈನ್‌ ಪೂರೈಸಿದ್ದರೆ 90 ಮಂದಿ 14 ದಿನಗಳ ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ.

ಐಸೋಲೇಶನ್‌ ವಾರ್ಡ್‌ನಿಂದ 11 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 181 ಮಂದಿಯ ಮಾದರಿಗಳನ್ನು ಕಳುಹಿಸಲಾಗಿದ್ದು 158 ವರದಿಗಳು ನೆಗೆಟಿವ್‌ ಆಗಿದೆ. ಮೂವರ ವರದಿ ಪಾಸಿಟಿವ್‌ ಬಂದಿದೆ. 20 ಮಂದಿಯ ವರದಿ ಬರಲು ಬಾಕಿಯಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ ಯಲ್ಲಿ ಸಾಮಾನ್ಯ ರೀತಿಯ ಶೀತ, ಜ್ವರ ಲಕ್ಷಣ ದಂತಹ ಪ್ರಕರಣಗಳು ಕಂಡುಬಂದರೆ ಪ್ರತ್ಯೇಕ ಚಿಕಿತ್ಸೆ ಒದಗಿಸುವಂತೆ ತಿಳಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಉಡುಪಿ: 14 ವಾಹನ ವಶಕ್ಕೆ
ಉಡುಪಿ: ಲಾಕ್‌ಡೌನ್‌ ನಿಯಮ ಉಲ್ಲಂಘನೆ ಕಾರಣಕ್ಕೆ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 14 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಲ್ಪೆಯಲ್ಲಿ 11, ನಗರ ಪೊಲೀಸ್‌ ಠಾಣೆಯಲ್ಲಿ 2, ಸಂಚಾರ ಠಾಣೆಯಲ್ಲಿ 1 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next