Advertisement
ಇತ್ತೀಚೆಗೆ ಸ್ವತ್ಛ ನಾಗರಪಂಚಮಿ ಅಭಿಯಾನ ಯಶಸ್ವಿಯಾಗಲು ಜನರು ಸಂಪೂರ್ಣ ಸಹಕಾರ ನೀಡಿದ್ದರು. ಅದೇ ಮಾದರಿಯಲ್ಲಿ ಸ್ವತ್ಛತೆ ಉದ್ದೇಶದಿಂದ ಗಣೇಶ ಚತುರ್ಥಿ ಅಭಿಯಾನವನ್ನು ಕೈಗೊಳ್ಳಲಾಗಿದೆ.
Related Articles
ನಗರಸಭೆ-ಉದಯವಾಣಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸ್ವತ್ಛತಾ ಅಭಿಯಾನಕ್ಕೆ ಜನರ ಸಂಪೂರ್ಣ ಸಹಕಾರದ ಅಗತ್ಯವಿದೆ. ಸಾರ್ವಜನಿಕ ಗಣೇಶೋತ್ವವ ಸಮಿತಿ ಆಚರಣೆ ಕೇಂದ್ರಗಳಿಗೆ ನಗರಸಭೆ ವತಿಯಿಂದ ಡಸ್ಟ್ ಬಿನ್, ಚೀಲಗಳನ್ನು ವ್ಯವಸ್ಥೆ ಮಾಡಿಕೊಟ್ಟು ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಅನ್ನ ಸಂತರ್ಪಣೆ ದಿನ ಎಲ್ಲಿಯೂ ತ್ಯಾಜ್ಯ ಎಸೆಯಬಾರದು. ಆಹಾರ ತ್ಯಾಜ್ಯ ವಿಲೇವಾರಿಗೆ ನಗರಸಭೆ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ನಗರಸಭೆ ಸಿಬಂದಿಗೆ ನಿರ್ದೇಶನ ನೀಡಲಾಗಿದೆ.
– ಪ್ರಭಾಕರ ಪೂಜಾರಿ, ಅಧ್ಯಕ್ಷರು, ರಾಯಪ್ಪ, ಪೌರಾಯುಕ್ತರು, ಉಡುಪಿ ನಗರಸಭೆ
Advertisement
ಜನಜಾಗೃತಿಯನ್ನೂ ರೂಪಿಸಲಿದ್ದೇವೆನಾಗರಪಂಚಮಿ ಹಬ್ಬದಂದು ಸ್ವತ್ಛತೆಗೆ ಆದ್ಯತೆ ನೀಡಿದಂತೆ ಗಣೇಶೋತ್ಸವ ಸಂದರ್ಭದಲ್ಲಿಯೂ ಸ್ವತ್ಛ ಪುರಸಭೆಯಾಗಿ ರೂಪುಗೊಳ್ಳಲು ಆದ್ಯತೆ ನೀಡುತ್ತೇವೆ. ಸಮಿತಿಗಳು ಸಂಪರ್ಕಿಸಿದಲ್ಲಿ ಹಸಿ ಕಸ, ಒಣ ಕಸ ವಿಲೇವಾರಿಗೆ ಉಪಕರಣಗಳನ್ನು ಪೂರೈಸುವುದರ ಜತೆ ಜನಜಾಗೃತಿಯನ್ನೂ ರೂಪಿಸಲಿದ್ದೇವೆ.
– ಹರಿಣಾಕ್ಷಿ ದೇವಾಡಿಗ, ಅಧ್ಯಕ್ಷರು, ನಾಗರಾಜ್ ಸಿ., ಮುಖ್ಯಾಧಿಕಾರಿಗಳು, ಕಾಪು ಪುರಸಭೆ ಪ.ಪಂ. ಕಚೇರಿಯನ್ನು ಸಂಪರ್ಕಿಸಬಹುದು
ಸಾಲಿಗ್ರಾಮ ಪಟ್ಟಣ ಪಂಚಾಯತ್ ಕೆಲವು ವರ್ಷಗಳಿಂದ ತ್ಯಾಜ್ಯ ವಿಲೇವಾರಿಗೆ ವಿಶೇಷ ಗಮನ ಕೊಡುತ್ತಿದೆ. ಈ ವರ್ಷವೂ ಗಣೇಶೋತ್ಸವ ಸಮಿತಿಗಳಿಗೆ ಡಸ್ಟ್ಬಿನ್, ಚೀಲಗಳನ್ನು ಪೂರೈಸುತ್ತೇವೆ. ಈ ಕುರಿತು ಸಮಿತಿಗಳು ಪ.ಪಂ. ಕಚೇರಿಯನ್ನು ಸಂಪರ್ಕಿಸಬಹುದು.
– ಸುಕನ್ಯಾ ಶೆಟ್ಟಿ, ಅಧ್ಯಕ್ಷರು, ಶಿವ ನಾಯ್ಕ, ಮುಖ್ಯಾಧಿಕಾರಿಗಳು, ಸಾಲಿಗ್ರಾಮ ಪ.ಪಂ.