Advertisement
ಭಾರೀ ಮಳೆಯಾದ ಅನಂತರ ಕಿನ್ನಿಮುಲ್ಕಿ, ಜೋಡುಕಟ್ಟೆ, ಡಯಾನಾ ಸರ್ಕಲ್, ಸಹಿತ ನಗರದ ಎಲ್ಲ ವಾರ್ಡ್‌ಗಳ ರಸ್ತೆಯಲ್ಲೂ ಹೊಂಡಗಳು ಗೋಚರಿಸುತ್ತಿವೆ. ಸಣ್ಣಗಾತ್ರದ ಹೊಂಡಗಳೇ ಮುಂದೆ ಹಿರಿದಾಗುತ್ತಾ ಅಪಾಯವನ್ನು ಆಹ್ವಾನಿಸುತ್ತಿದೆ.
ರಸ್ತೆಯಲ್ಲಿರುವ ಹೊಂಡ-ಗುಂಡಿಗಳಿಗೆ ಕಡಿವಾಣ ಹಾಕಬೇಕಿದ್ದರೆ ನಗರದ ರಸ್ತೆಗಳಿಗೆ ಕಾಂಕ್ರೀಟ್ ಹಾಕುವುದೊಂದೇ ಸದ್ಯಕ್ಕೆ ಪರಿಹಾರವಾಗಲಿದೆ. ಚಿಟಾ³ಡಿ ಬಳಿಯ ಮತ್ತೂಂದು ರಸ್ತೆ ವಿಸ್ತರಣೆಯು ಕಳಪೆ ಸ್ಥಿತಿಯಲ್ಲಿದ್ದು, ಹಲವಾರು ಗುಂಡಿಗಳು ಬಿದ್ದಿವೆ.
Related Articles
Advertisement
ನಗರದೊಳಗೂ ಹೊಂಡ-ಗುಂಡಿಗಳುಉಡುಪಿ ನಗರದೊಳಗೂ ಹೊಂಡ-ಗುಂಡಿಗಳು ಕಾಣಸಿಗುತ್ತವೆ. ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲೂ ಹೊಂಡ-ಗುಂಡಿಗಳಿಗೇನೂ ಕೊರತೆ ಇಲ್ಲ. ಆದರೆ ಇದನ್ನು ಸರಿಯಾಗಿ ನಿರ್ವಹಿಸುವವರ ಕೊರತೆ ಕಾಡುತ್ತಿದೆ. ಮಳೆಗಾಲ ದಲ್ಲಿನ ಹೊಂಡಗಳಲ್ಲಿ ನೀರು ನಿಲ್ಲುವುದರಿಂದ ಸವಾರರ ಗಮನಕ್ಕೆ ಬಾರದೆ ಅವಘಡಗಳು ನಡೆ ಯುವಂತಹ ಘಟನೆಗಳೂ ನಡೆಯುತ್ತಿವೆ. ಕಳಪೆ ಗುಣಮಟ್ಟ
ಉಡುಪಿ ನಗರಸಭೆ ಮಾಡಿದ ಪ್ಯಾಚ್‌ವರ್ಕ್‌ಗಳು ಮಳೆಗಾಲದಲ್ಲಿ ಎಲ್ಲ ಎದ್ದು ಹೋಗಿವೆ. ರಸ್ತೆಗಳ ಈ ದುಃಸ್ಥಿತಿಗೆ ಕಳಪೆ ಕಾಮಗಾರಿಗಳೇ ಕಾರಣ. ನಗರಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಗುಂಡಿಗಳ ಕೇಂದ್ರ
ಕರಾವಳಿ ಬೈಪಾಸ್
ನಗರಕ್ಕೆ ಸಂಪರ್ಕಿಸುವ ಕರಾವಳಿ ಬೈಪಾಸ್ ವಾಹನ ಸವಾರರನ್ನು ಹೊಂಡಗಳಿಂದ ಸ್ವಾಗತಿಸುತ್ತದೆ. ಇದು ಅತ್ಯಂತ ಅಪಾಯಕಾರಿ ಸ್ಥಳವಾದರೂ ಹೊಂಡ-ಗುಂಡಿಗಳಿರುವ ಕಾರಣ ವಾಹನಗಳಿಗೆ ತನ್ನಿಂತಾನೇ ಬ್ರೇಕ್ ಬೀಳುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪತ್ರಿಕೆಗಳಲ್ಲಿ ಎಚ್ಚರಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಆಶ್ಚರ್ಯ ಉಂಟುಮಾಡುತ್ತಿದೆ. ನಷ್ಟ ಪರಿಹಾರದ ಅಂದಾಜು
ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಉಂಟಾದ ನಷ್ಟವನ್ನು ಅಧಿಕಾರಿಗಳು ಅಂದಾಜು ಮಾಡುತ್ತಿದ್ದಾರೆ. ನಗರದ ರಸ್ತೆ ವಿಸ್ತರಣೆಯನ್ನು ಸರಿಪಡಿಸಲು ಗಮನಹರಿಸಲಾಗುವುದು. ಟೆಂಡರ್ ಪ್ರಕ್ರಿಯೆ ನಡೆದು ರಸ್ತೆ ದುರಸ್ತಿ ಕಾರ್ಯವನ್ನು ಆದ್ಯತೆಯ ಆಧಾರದ ಮೇಲೆ ಕೈಗೊಳ್ಳಲಾಗುವುದು.
-ಆನಂದ್ ಕಲ್ಲೋಳಿಕರ್,
ಪೌರಾಯುಕ್ತರು, ಉಡುಪಿ ನಗರಸಭೆ