Advertisement

ಉಡುಪಿ ನಗರಕ್ಕೆ ಇಂದೂ ನೀರಿಲ್ಲ !

02:10 AM May 07, 2019 | Team Udayavani |

ಉಡುಪಿ: ಬಜೆ ಸಮೀಪದ ಭಂಡಾರಿಬೆಟ್ಟು ಪ್ರದೇಶದಲ್ಲಿ ಸೋಮವಾರ ನೀರೆತ್ತುವಿಕೆ (ಡ್ರೆಜ್ಜಿಂಗ್‌)ಪ್ರಕ್ರಿಯೆ ಆರಂಭಗೊಂಡಿದೆ. ಅಲ್ಲಲ್ಲಿ ಹಳ್ಳಗಳಲ್ಲಿ ತುಂಬಿ
ಕೊಂಡಿರುವ ನೀರನ್ನು ಪಂಪ್‌ಗ್ಳ ಮೂಲಕ ಜಾಕ್‌ವೆಲ್‌ (ನೀರೆತ್ತುವ ಸ್ಥಳ)ಗೆ ಹಾಯಿಸಿಕೊಂಡು ನೀರು ಸರಬರಾಜು ಮಾಡಬೇಕಾಗಿದೆ.

Advertisement

ಈ ಪ್ರಕ್ರಿಯೆಗೆ ಕಾಲಾವಕಾಶ ಬೇಕಿರುವು ದರಿಂದ ಮಂಗಳವಾರವೂ ನಗರಕ್ಕೆ ನೀರು ಸರಬರಾಜು ಇರುವುದಿಲ್ಲ. ಬುಧವಾರದಿಂದ ಸರಬರಾಜು ಪ್ರಾರಂಭಿಸಲು ಪ್ರಯತ್ನಿಸಲಾ ಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ರಾತ್ರಿ ವರೆಗೂ ಕಾರ್ಯಾಚರಣೆ
ಹಳ್ಳಗಳಿಂದ ನೀರೆತ್ತುವ ಪ್ರಕ್ರಿಯೆ ರವಿವಾರ ಆರಂಭ ವಾಗಬೇಕಿತ್ತು. ಆದರೆ ಕಾರಣಾಂತರ ಗಳಿಂದ ಆರಂಭವಾಗಿಲ್ಲ. ಬಳಿಕ ಸೋಮವಾರ ಮುಂಜಾನೆ ಆರಂಭಿಸುವುದು ಎಂದು ನಿರ್ಧರಿಸಲಾಯಿತು. ಅದೂ ನಡೆಯಲಿಲ್ಲ. ಗುತ್ತಿಗೆದಾರ ಹಾಗೂ ನಗರಸಭೆಯ ಹಣಕಾಸು ವಿಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಒಟ್ಟು 4 ದೋಣಿಗಳಲ್ಲಿ ಪಂಪ್‌ಗ್ಳನ್ನಿರಿಸಿ ನೀರೆತ್ತಲು ತೀರ್ಮಾನಿಸಿದ್ದು, ಸೋಮವಾರ ಸಂಜೆ 6 ಗಂಟೆಗೆ 2 ದೋಣಿಗಳು ಆಗಮಿಸಿದವು. ಮತ್ತೆರಡು ದೋಣಿಗಳು ಬಂದ ಅನಂತರ ಕಾಮಗಾರಿ ಆರಂಭಿಸುತ್ತೇವೆ ಎಂದು ಆಯುಕ್ತರು ಸೂಚಿಸಿದರು. ಕೊನೆ ಕ್ಷಣದಲ್ಲಿ ನಗರಸಭೆ ಅಧಿಕಾರಿಗಳು ಎಚ್ಚೆತ್ತಿರುವುದು ಇಷ್ಟೆಲ್ಲ ಗೊಂದಲ ಸೃಷ್ಟಿಗೆ ಕಾರಣವಾಯಿತು.

ಉದಯವಾಣಿ ತಿಂಗಳ
ಹಿಂದೆಯೇ ಎಚ್ಚರಿಸಿತ್ತು
ನಗರದಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆಯ ಬಗ್ಗೆ ಉದಯವಾಣಿ ತಿಂಗಳ ಹಿಂದೆಯೇ (ಮಾ. 23) ವರದಿ ಪ್ರಕಟಿಸಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೆ 2018ರಲ್ಲಿ ಮಳೆ ಸುರಿದಂತೆ ಈ ಬಾರಿಯೂ ಮಳೆ ಸುರಿಯಬಹುದು ಎಂದು ಕಾದು ಕುಳಿತದ್ದೇ ಪರಿಸ್ಥಿತಿ ಬಿಗಡಾಯಿಸಲು ಕಾರಣ.

ಸರ್ವ ಪ್ರಯತ್ನ
ಹೂಳೆತ್ತುವಿಕೆ ಪ್ರಕ್ರಿಯೆ ಅಥವಾ ಟೆಂಡರ್‌ ಅಥವಾ ನೀರು ಒದಗಿಸುವ ಅನ್ಯ ಸಾಧ್ಯತೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿರುತ್ತದೆ. ಮಂಗಳವಾರದಿಂದ ನೀರು ಪೂರೈಸಲು ಪ್ರಯತ್ನಿಸಿದೆವು. ಆಗಲಿಲ್ಲ. ಸೋಮವಾರ ಮಧ್ಯರಾತ್ರಿವರೆಗಾದರೂ ನಿಂತು ಬುಧವಾರ ದಿಂದ ನೀರು ಪೂರೈಸಲು ಪ್ರಯತ್ನಿಸುತ್ತೇವೆ.
– ಆನಂದ್‌ ಕಲ್ಲೋಳಿಕರ್‌, ಪೌರಾಯುಕ್ತರು, ಉಡುಪಿ ನಗರಸಭೆ

Advertisement

ಹಿಂದೆಯೇ ಆಗ್ರಹಿಸಿದ್ದೆ
ಶೀರೂರು ಮತ್ತು ಪುತ್ತಿಗೆ ಮಠದ ಬಳಿಯ ಅಣೆಕಟ್ಟು ಪ್ರದೇಶದಲ್ಲಿ 1 ತಿಂಗಳಿಗೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ನೀರಿನ ಪಂಪಿಂಗ್‌ ಮಾಡಬೇಕು ಎಂದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದ್ದೇನೆ. ಆದರೆ ದಿನದೂಡುತ್ತಿದ್ದಾರೆ. ಕನಿಷ್ಠ ಟ್ಯಾಂಕರ್‌ ಮೂಲಕವಾದರೂ ನೀರು ಪೂರೈಕೆಗೆ ಅನುಮತಿ ನೀಡಬಹುದಿತ್ತು. ಆ ಕೆಲಸವೂ ನಡೆದಿಲ್ಲ.
– ಕೆ.ರಘುಪತಿ ಭಟ್‌, ಶಾಸಕರು

ಮಾರ್ಗದರ್ಶನ ನೀಡಲಾಗಿದೆ
ಬಜೆಯಲ್ಲಿ ಡ್ರೆಜ್ಜಿಂಗ್‌ (ನೀರು ಹಾಯಿಸುವುದು) ಆರಂಭವಾಗಿದೆ. ಶೀಘ್ರದಲ್ಲಿ ನೀರು ಲಭಿಸಲಿದೆ. ಒಂದು ವಾರಕ್ಕೆ ಸಾಕಾಗುವಷ್ಟು ಇದರಿಂದ ನೀರು ದೊರೆಯಲಿದೆ. ನಾನು ಕೂಡ ಬಜೆ ಅಣೆಕಟ್ಟು ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿದ್ದೇನೆ. ಈಗಾಗಲೇ ಸೂಕ್ತ ನಿರ್ದೇಶನ ನೀಡಿದ್ದೇನೆ.
-ಹೆಪ್ಸಿಬಾ ರಾಣಿ ಕೊರ್ಲಪಾಡಿ, ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next