Advertisement

Udupi ನಗರಸಭೆ ಸದಸ್ಯನಿಂದ ದಂಪತಿ ಮೇಲೆ ಹಲ್ಲೆ, ದೂರು

12:26 AM May 13, 2024 | Team Udayavani |

ಉಡುಪಿ: ಜಾಗದ ವಿಚಾರದ ತಕರಾರಿಗೆ ಸಂಬಂಧಿಸಿ ದಂಪತಿಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರ ಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಸೇರಿದಂತೆ ಇತರ 6 ಮಂದಿ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಕಕ್ಕುಂಜೆಯ ಸವಿತಾ ಅವರು ತಮಗಾದ ಹಲ್ಲೆ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಪ್ರಕರಣದ ವಿವರ: ಸವಿತಾ ಹಾಗೂ ಬಾಲಕೃಷ್ಣ ಶೆಟ್ಟಿ ಅವರಿಗೆ ಸುಮಾರು 4 ವರ್ಷಗಳಿಂದ ಸವಿತಾ ಅವರ ಮನೆ ಜಾಗ ಹಾಗೂ ಸವಿತಾ ಅವರ ಪತಿಯ ಗ್ಯಾರೇಜ್‌ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನ್ಯಾಯಾಲಯದಲ್ಲಿದೆ.

ಈ ನಡುವೆ ಮೇ 10ರಂದು ಬೆಳಗ್ಗೆ ಹಾಗೂ ಮದ್ಯಾಹ್ನದ ವೇಳೆ 2 ಬಾರಿ ಬಾಲಕೃಷ್ಣ ಶೆಟ್ಟಿ ಇತರ ಆರೊಪಿಗಳೊಂದಿಗೆ ಸವಿತಾ ಅವರ ಪತಿಯ ಗ್ಯಾರೇಜ್‌ನ ಬಳಿ ಹೋಗಿ ಮಣಿಪಾಲ ಠಾಣೆಯಲ್ಲಿ ದಾಖಲಿಸಿದ ಕೇಸ್‌ ಅನ್ನು ವಾಪಸ್‌ ಪಡೆಯುವಂತೆ ಹಾಗೂ ಇಲ್ಲದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದರು.

ಆ ಬಳಿಕ ಸಂಜೆ ವೇಳೆ ಸವಿತಾ ಅವರು ಅವರ ಪತಿ ಮತ್ತು ಮಕ್ಕಳೊಂದಿಗೆ ಕಕ್ಕುಂಜೆ ನಾರಾಯಣ ನಗರದಲ್ಲಿರುವ ಗ್ಯಾರೇಜ್‌ನ ಬಳಿ ಹೋಗಿದ್ದಾಗ ಆರೋಪಿ ಬಾಲಕೃಷ್ಣ ಶೆಟ್ಟಿ ಇತರ 29 ಜನರೊಂದಿಗೆ ಗ್ಯಾರೇಜ್‌ ಬಳಿ ಸ್ಟೀಲ್‌ ರಾಡ್‌ ಅನ್ನು ಹಿಡಿದುಕೊಂಡು ಅಕ್ರಮ ಕೂಟ ಸೇರಿ ನಿಂತುಕೊಂಡಿದ್ದರು. ಈ ಬಗ್ಗೆ ಸವಿತಾ ಅವರ ಪತಿ ಪ್ರಶ್ನಿಸಿದಾಗ ನಾವು ಗ್ಯಾರೇಜ್‌ ಕೀಳಲು ನಿಂತುಕೊಂಡಿದ್ದೇವೆ ಎಂದು ಹೇಳಿ ಹಲ್ಲೆ ಮಾಡಿದ್ದು ಈ ವೇಳೆ ತಡೆಯಲು ಹೋದ ಸವಿತಾ ಹಾಗೂ ಅವರ ಪತಿಗೆ ಬಾಲಕೃಷ್ಣ ಶೆಟ್ಟಿ, ರಕ್ಷಿತಾ ಶೆಟ್ಟಿ, ರಾಜು, ಗಿರೀಶ್‌ ಅವರು ಸ್ಟೀಲ್‌ ರಾಡ್‌ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸವಿತಾ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next