Advertisement

ಉಡುಪಿ –ಚಿಕ್ಕಮಗಳೂರು: ಪ್ರಬಲ ಅಭ್ಯರ್ಥಿಗಳು, ಹೆಚ್ಚು ಮತದಾರರು

05:12 PM Apr 01, 2019 | keerthan |

ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಮತದಾರರ ಪಾಲು ಮಾತ್ರ ಹೆಚ್ಚಲ್ಲ, ಅಭ್ಯರ್ಥಿಗಳೂ ಹೆಚ್ಚು.

Advertisement

ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 14,94,444. ಈ ಪೈಕಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 7,68,231 ಇದ್ದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 7,26,213 ಮತದಾರರಿದ್ದಾರೆ. ಮತಗಟ್ಟೆಗಳು ಮಾತ್ರ ಉಡುಪಿ ಜಿಲ್ಲೆಗಿಂತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿಗೆ ಇವೆ. ಉಡುಪಿ ಜಿಲ್ಲೆಯಲ್ಲಿ 865 ಮತಗಟ್ಟೆಗಳು, ಚಿಕ್ಕಮಗಳೂರು ಜಿಲ್ಲೆಯಲ್ಲಿ 972 ಇವೆ.

ಈ ಬಾರಿ 12 ಅಭ್ಯರ್ಥಿಗಳು ಕಣ ದಲ್ಲಿದ್ದರೆ ಇವರಲ್ಲಿ 6 ಮಂದಿ ಉಡುಪಿ ಜಿಲ್ಲೆಯವರು. ಶೋಭಾ ಅವರನ್ನು ದ.ಕ. ಜಿಲ್ಲೆಯವರೆಂದು ಪರಿಗಣಿಸಿದರೆ ಒಟ್ಟು 7 ಮಂದಿ ಉಡುಪಿ ಜಿಲ್ಲೆಯವರು, 5 ಮಂದಿ ಚಿಕ್ಕಮಗಳೂರು ಜಿಲ್ಲೆಯವರು. ಉಡುಪಿ ತಾಲೂಕಿನವರಾದ ಪ್ರಮೋದ್‌ ಮಧ್ವರಾಜ್‌ (ಜೆಡಿಎಸ್‌-ಕಾಂಗ್ರೆಸ್‌), ಪಿ. ಗೌತಮ್‌ ಪ್ರಭು (ಶಿವಸೇನೆ), ಸುರೇಶ ಕುಂದರ್‌ (ಉ. ಪ್ರ.ಪಾರ್ಟಿ), ಶೇಖರ ಹಾವಂಜೆ (ಆರ್‌ಪಿಐ), ಅಮೃತ್‌ ಶೆಣೈ (ಪಕ್ಷೇತರ) ಹಾಗೂ ಕಾಪು ತಾಲೂಕಿನ ಅಬ್ದುಲ್‌ ರೆಹಮಾನ್‌ ಉಡುಪಿ ಜಿಲ್ಲೆಯ ಅಭ್ಯರ್ಥಿಗಳು. ಚಿಕ್ಕಮಗಳೂರು ತಾಲೂಕಿನ ಪಿ. ಪರಮೇಶ್ವರ (ಬಿಎಸ್‌ಪಿ), ವಿಜಯಕುಮಾರ್‌ (ಸಿಪಿಐ ಎಂಎಲ್‌ ರೆಡ್‌ಸ್ಟಾರ್‌); ನರಸಿಂಹರಾಜಪುರ ತಾಲೂಕಿನ ಎಂ.ಕೆ. ದಯಾನಂದ (ಪ್ರೌಟೆಸ್ಟ್‌ ಸರ್ವ ಸಮಾಜ), ಕೆ.ಪಿ. ಪ್ರಕಾಶ್‌; ಮೂಡಿಗೆರೆ ತಾಲೂಕಿನ ಎಂ.ಕೆ. ಗಣೇಶ ಚಿಕ್ಕಮಗಳೂರು ಜಿಲ್ಲೆಯವರು. ಪ್ರಬಲ ಪೈಪೋಟಿ ಒಡ್ಡಬಲ್ಲ ಅಭ್ಯರ್ಥಿಗಳು ಚಿಕ್ಕಮಗಳೂರು ಜಿಲ್ಲೆಯ ಮೂಲದಿಂದ ಕಂಡುಬರುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next