ಉಡುಪಿ: ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಹಿರಿಯ ನಾಗರಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಡಿ. 5ರಂದು ರಾತ್ರಿ ನಗರದ ಕಡಿಯಾಳಿಯಲ್ಲಿ ನಡೆದಿದೆ.
ಮಂಗಳೂರು ನೋಂದಣಿ ಸ್ವಿಫ್ಟ್ ಕಾರು ಮಣಿಪಾಲದಿಂದ ಉಡುಪಿ ಕಡೆಗೆ ಮುಖ್ಯ ರಸ್ತೆಯಲ್ಲಿ ತೆರಳುತ್ತಿತ್ತು. ಕಡಿಯಾಳಿ ಬಳಿ ತಲುಪಿದಾಗ ಅವಘಡ ಸಂಭವಿಸಿದೆ.
ಅತೀ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ದಿಢೀರ್ ಬ್ರೇಕ್ ಹಾಕಿದ್ದರಿಂದ ರಸ್ತೆ ಬದಿಗೆ ಬಂದು ಪಲ್ಟಿಯಾಗಿದೆ.
ಈ ವೇಳೆ ರಸ್ತೆ ಬದಿ ದ್ವಿಚಕ್ರ ವಾಹನದ ಬಳಿಯಲ್ಲಿ ನಿಂತಿದ್ದ ಹಿರಿಯ ನಾಗರಿಕರಿಗೆ ಮತ್ತು ಮತ್ತೂಂದು ಕಾರಿಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.