Advertisement
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಪ್ರೇರಣೆ ನೀಡು ತ್ತಿರುವ ಕಾಂಗ್ರೆಸ್ ಸರಕಾರದ ನಡೆಯನ್ನು ವಿರೋಧಿಸಿ ಬಿಜೆಪಿ, ಆರ್‌ಎಸ್‌ಎಸ್, ಹಿಂದೂ ಜಾಗರಣ ವೇದಿಕೆ, ಬಜರಂಗ ದಳ ಜಂಟಿಯಾಗಿ ಜು. 13ರ ಮಧ್ಯಾಹ್ನ 2.30ಕ್ಕೆ ಬಸ್ ನಿಲ್ದಾಣ ಬಳಿ ಬೃಹತ್ ಪ್ರತಿಭಟನ ಸಭೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಶಾಸಕ ಸುನೀಲ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಶರತ್ ಕೊಲೆ ನಡೆದು ಐದು ದಿನ ಕಳೆದರೂ ಇನ್ನೂ ಯಾರನ್ನು ಕೂಡ ಬಂಧಿಸಿಲ್ಲ. ಸ್ಥಳೀಯರು ಕೆಲವರನ್ನು ಗುರುತಿ ಸಿದರೂ ಸಹ ಯಾವೊಬ್ಬ ಆರೋಪಿಯ ವಿರುದ್ಧವೂ ದೂರು ದಾಖಲಿಸಿಲ್ಲ. ಹಿಂದೂ ಸಂಘಟನೆಗಳ ನಾಯಕರು, ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸಲು ಸಿಎಂ, ಸಚಿವರು ಪೊಲೀಸರಿಗೆ ನಿರ್ದೇಶನ ನೀಡುತ್ತಾರೆ. ಹಿಂದೂ ನಾಯಕರಾದ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‌ವೆಲ್, ಹರೀಶ್ ಪೂಂಜಾ ಅವರ ಮನೆಗೆ ರಾತೋರಾತ್ರಿ ಪೊಲೀಸ್ ದಾಳಿ ನಡೆಸುತ್ತಾರೆ. ಆ ಮೂಲಕ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಸ್ಲಿಮರ ಓಲೈಕೆಗೆ ಮುಂದಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪ್ರೇರಿತ ಸಂಘರ್ಷ
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಕಾಂಗ್ರೆಸ್ ಪ್ರೇರಿತ ವಾಗಿದ್ದು, ಮುಂದಿನ ಅಸೆಂಬ್ಲಿ ಚುನಾವಣೆ ಯಲ್ಲಿ ಅವರಿಗೆ ಇದುವೇ ಮುಳುವಾಗಲಿದೆ ರಾಜ್ಯ ಕಾರ್ಯಕಾರಿಣಿ ಸದಸ್ಯ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಪ್ರತಿಪಾದಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಆರಗ ಜ್ಞಾನೇಂದ್ರ, ನಾಯಕರಾದ ಯಶ್‌ಪಾಲ್ ಸುವರ್ಣ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಪ್ರಭಾಕರ ಪೂಜಾರಿ, ಪ್ರವೀಣ್ ಕುಮಾರ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.
Related Articles
ಅಹಿತಕರ ಘಟನೆಗಳು ನಡೆಯುತ್ತಿರು ವುದು ಬಂಟ್ವಾಳದಲ್ಲಿ. ಆದರೆ ಬೆಳ್ತಂಗಡಿ,ಸುಳ್ಯ, ಪುತ್ತೂರು ಸಹಿತ ಇಡೀ ದ.ಕ. ಜಿಲ್ಲೆ ಯಲ್ಲಿ ನಿಷೇಧಾಜ್ಞೆ ಏಕೆ? ಎಸ್‌ಡಿಪಿಐ ಪರ್ಯಾಯ ಶಕ್ತಿಯಾಗಿ ಬೆಳೆಯಬಹುದು ಎನ್ನುವ ಕಾರಣದಿಂದ ಸಚಿವರಾದ ರಮಾನಾಥ ರೈ ಹಾಗೂ ಯು. ಟಿ. ಖಾದರ್ ಅವರು ರಾಜಕೀಯ ಲಾಭಕ್ಕಾಗಿ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿ ದ್ದಾರೆ ಎಂದು ಮಟ್ಟಾರು ಆರೋಪಿಸಿದರು.
Advertisement
“ನರ್ಮ್: ವಿರೋಧವಿಲ್ಲ’ಉಡುಪಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ನರ್ಮ್ ಬಸ್‌ಗೆ ಬಿಜೆಪಿ ಯಾವತ್ತೂ ವಿರೋಧ ಮಾಡಿಲ್ಲ. ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಎರಡೂ ಇರಲಿ. ಕೋರ್ಟಿಗೆ ಅರ್ಜಿ ಹಾಕಿದವರಲ್ಲಿ ಶೇ. 90ರಷ್ಟು ಮಂದಿ ಕಾಂಗ್ರೆಸ್ಸಿಗರೇ. 3 ತಿಂಗಳ ಹಿಂದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಲ್ಲಿ ನರ್ಮ್ ಬಸ್ ಬೇಡ ಎಂದು ಮನವಿ ಸಲ್ಲಿಸಲು ತೆರಳಿದ ನಿಯೋಗದಲ್ಲಿ ಸಂಸದ ಆಸ್ಕರ್ ಫೆರ್ನಾಂಡಿಸ್, ಶಾಸಕ ಅಭಯಚಂದ್ರ ಜೈನ್, ರಾಜವರ್ಮ ಬಲ್ಲಾಳ್ ಸಹಿತ ಅನೇಕ ಕಾಂಗ್ರೆಸ್ ನಾಯಕರಿದ್ದರು ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದರು.