Advertisement

ಉಡುಪಿ ಸೇತುವೆ, ರಸ್ತೆ ಕಾಮಗಾರಿಗೆ 24.10 ಕೋ. ರೂ. ಮಂಜೂರು

12:09 PM Feb 25, 2017 | Team Udayavani |

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 2016-17ನೇ ಸಾಲಿನಲ್ಲಿ ಅಪೆಂಡಿಕ್ಸ್‌-ಇ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ ಕಾಮಗಾರಿಗಳಿಗೆ 24.10 ಕೋ. ರೂ. ಅನುದಾನ ಮಂಜೂರಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಸ್ತೆ, ಸೇತುವೆ ನಿರ್ಮಾಣಕ್ಕೆ 21 ಕೋ. ರೂ. ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಹಂತ 3ರ ಅಡಿ ಚೇರ್ಕಾಡಿ ಗ್ರಾ.ಪಂ. ವ್ಯಾಪ್ತಿಯ ಕನ್ನಾರು ಗುಡ್ಡೆಯಿಂದ ಬೆನೆಗಲ್‌ ವರೆಗೆ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3.10 ಕೋ. ರೂ. ಅನುದಾನ ಮಂಜೂರಾಗಿದೆ ಎಂದರು.

Advertisement

ಮಂಜೂರಾದ ಕಾಮಗಾರಿಗಳು:

– ಕೆಮ್ಮಣ್ಣು ಗ್ರಾ. ಪಂ. ತಿಮ್ಮಣ್ಣಕುದ್ರು ಸೇತುವೆ ನಿರ್ಮಾಣ-5 ಕೋ. ರೂ.

– ಅಂಬಾಗಿಲು- ಮಣಿಪಾಲ- ಉದ್ಯಾವರ ರಸ್ತೆ ಚತುಷ್ಪಥ (ಅಂಬಾಗಿಲು- ಪೆರಂಪಳ್ಳಿ-ಮಣಿಪಾಲ ರಸ್ತೆ) – 5 ಕೋ. ರೂ.

– ಮಣಿಪಾಲ- ಉದ್ಯಾವರ- ಮಲ್ಪೆ-ಡಕ್ಟ್ ಮತ್ತು ವಿಭಜಕ ನಿರ್ಮಾಣ-1 ಕೋ. ರೂ.

Advertisement

– ಕೆಂಜೂರು-ನಾಲ್ಕೂರು -ಶಿರೂರು ರಸ್ತೆ ಅಭಿವೃದ್ಧಿ-2 ಕೋ. ರೂ.

– ಆರೂರು-ಬೊಳಾ¾ರು- ಕೊಳಲಗಿರಿ ರಸ್ತೆ ಅಭಿವೃದ್ಧಿ-2 ಕೋ. ರೂ.

– ಪೆರಂಪಳ್ಳಿ ಪಾಸ್‌ಕುದ್ರು ಬಳಿ ಸೇತುವೆ ನಿರ್ಮಾಣ-4 ಕೋ. ರೂ.

– ಬ್ರಹ್ಮಾವರ-ಜನ್ನಾಡಿ  (ಬ್ರಹ್ಮಾವರ- ಬಾಕೂìರು) ರಸ್ತೆ ಅಭಿವೃದ್ಧಿ – 2 ಕೋ. ರೂ.

ಮೀನುಗಾರಿಕೆಗೆ ಶೇ. 2 ಬಡ್ಡಿ ದರದ ಗರಿಷ್ಠ ಸಾಲ
ಮೀನುಗಾರ ಮಹಿಳೆಯರಿಗೆ ಶೇ. 2ರ ಬಡ್ಡಿ ದರದಲ್ಲಿ 50,000 ರೂ. ಬ್ಯಾಂಕ್‌ಗಳ ಮೂಲಕ ಮೀನುಗಾರಿಕೆ ಇಲಾಖೆಯಿಂದ ಸಾಲನೀಡಲಾಗುತ್ತದೆ. ಸಾಲದ ಮೇಲಿನ ಉಳಿಕೆಯ ಶೇ. 10ರಷ್ಟು ಬಡ್ಡಿದರವನ್ನು ಸರಕಾರ ಭರಿಸುತ್ತದೆ. 2012-13ಕ್ಕೆ ಕೇವಲ 2.77 ಕೋಟಿ ರೂ. ವಿತರಣೆ ಮಾಡಲಾಗಿದೆ. ಈಗಿನ ಸರಕಾರ 10,780 ಫ‌ಲಾನುಭವಿಗಳಿಗೆ 6.55 ಕೋಟಿ  ರೂ. ಬಡ್ಡಿ ಸಬ್ಸಿಡಿಗೆ ವ್ಯಯಿಸಿದೆ. ಈ ಆರ್ಥಿಕ ವರ್ಷಕ್ಕೆ 1 ಕೋಟಿ  ರೂ., 5.96 ಕೋಟಿ ರೂ. ಮುಖ್ಯಮಂತ್ರಿ ಹೆಚ್ಚುವರಿಯಾಗಿ ನೀಡಿದ್ದಾರೆ. 2012-13ರಿಂದ 2016-17 ರ ವರೆಗಿನ ಅವಧಿಗೆ ಈ ಯೋಜನೆಯಡಿ ಉಡುಪಿ ಜಿಲ್ಲೆಗೆ ಶೇ. 3ರ ಹಾಗೂ ಶೇ. 2ರ ಬಡ್ಡಿ ದರದಲ್ಲಿ É 27,785 ಫ‌ಲಾನುಭವಿಗಳಿಗೆ ಒಟ್ಟು ಹೆಚ್ಚಿನ ಬಡ್ಡಿ ವ್ಯತ್ಯಾಸದ ಸಹಾಯಧನ ರೂ. 13.51 ಕೋ. ರೂ. ಅನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಮಂಜೂರು ಮಾಡಿದೆ ಎಂದು ಪ್ರಮೋದ್‌ ಮಧ್ವರಾಜ್‌ ಅವರು  ಹೇಳಿದರು.

ಕರ್ನಾಟಕ ನಂ. 1: ಮೀನು
ಗಾರಿಕಾ ಯಾಂತ್ರೀಕೃತ ದೋಣಿಗಳು ಬಳಸುವ ಡೀಸೆಲ್‌ಗೆ ಸಬ್ಸಿಡಿ ನೀಡುವಲ್ಲಿ ಕರ್ನಾಟಕ ನಂ. 1 ಸ್ಥಾನದಲ್ಲಿದೆ. ಹಿಂದೆ
7 ರೂ. ಇದ್ದ ಸಬ್ಸಿಡಿ ದರವನ್ನು 9.40 ರೂ.ಗೆ ಏರಿಸಲಾಗಿದೆ. 100 ಕೋ. ರೂ. ಬಜೆಟ್‌ನಲ್ಲಿ ಮೀಸಲಿರಿಸಲಾಗಿತ್ತಾ ದರೂ ನನ್ನ ಕೋರಿಕೆ ಮೇರೆಗೆ ಮತ್ತೆ 20 ಕೋ. ರೂ. ಹೆಚ್ಚುವರಿಯಾಗಿ ಡೀಸೆಲ್‌ ಸಬ್ಸಿಡಿಗೆ ಹಣವನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ ಎಂದು ಪ್ರಮೋದ್‌ ಹೇಳಿದರು.

ಸಬ್ಸಿಡಿ ನೇರ ಖಾತೆಗೆ: 2016-17 ನೇ ಸಾಲಿನಲ್ಲಿ ಯಾಂತ್ರೀಕೃತ ದೋಣಿಗಳು ಉಪಯೋಗಿಸುವ ಡೀಸೆಲ್‌ ಮೇಲಿನ ಮಾರಾಟ ಕರವನ್ನು ಮರುಪಾವತಿ ರೂಪದಲ್ಲಿ ನೇರವಾಗಿ ದೋಣಿ ಮಾಲಕರ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ಮೀನುಗಾರಿಕೆ ದೋಣಿಗಳಿಗೆ ಮಾರಾಟ ತೆರಿಗೆ ಮರುಪಾವತಿ ಎನ್ನುವ ಯೋಜನೆಯನ್ನು 2015-16ನೇ ಸಾಲಿನಿಂದ ಜಾರಿಗೆ ತರಲಾಗಿದೆ. 2016-17 ನೇ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ ಸೆಪ್ಟಂಬರ್‌-2016ರ ಅಂತ್ಯದವರೆಗೆ 728 ಯಾಂತ್ರೀಕೃತ ದೋಣಿಗಳಿಗೆ 21.07 ಕೋ. ರೂ. ಡೀಸೆಲ್‌ ಮಾರಾಟಕರ ಸಹಾಯಧನವನ್ನು ದೋಣಿ ಮಾಲಕರ ನೇರ ಖಾತೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಅಕ್ಟೋಬರ್‌ 2016ರಿಂದ ಜನವರಿ-2017ರ ವರೆಗೆ 738 ಯಾಂತ್ರೀಕೃತ ದೋಣಿಗಳಿಗೆ 18.39 ಕೋ. ರೂ. ಸಹಾಯಧನವನ್ನು ದೋಣಿ ಮಾಲಕರಿಗೆ ನೀಡುವಂತೆ ಪ್ರಸ್ತಾವನೆಯನ್ನು ಮೀನುಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ. 2016-17ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್‌-2016ರ ಅಂತ್ಯದ ವರೆಗೆ 1,547 ಯಾಂತ್ರೀಕೃತ ದೋಣಿಗಳಿಗೆ 47.83 ಕೋ ರೂ. ಡೀಸೆಲ್‌ ಮಾರಾಟ ಕರ ಸಹಾಯಧನ ನೀಡಲಾಗಿದೆ. ಮಾತ್ರವಲ್ಲದೆ ನವೆಂಬರ್‌-2016ರಿಂದ ಜನವರಿ 2017ರ ವರೆಗೆ 1,513 ಯಾಂತ್ರೀಕೃತ ದೋಣಿಗಳಿಗೆ 23.66 ಕೋ. ರೂ. ಸಹಾಯಧನವನ್ನು ದೋಣಿ ಮಾಲಕರಿಗೆ ನೀಡುವಂತೆ ಪ್ರಸ್ತಾವನೆಯನ್ನು ಮೀನುಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next