Advertisement
ಉಡುಪಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆ ಹಾಗೂ ಶಾಂತಿಯುತ ಜನಜೀವನಕ್ಕೆ ತೊಂದರೆಯಾಗಬಾರದೆನ್ನುವ ನಿಟ್ಟಿನಲ್ಲಿ ಸೆ. 5ರ ಬೆಳಗ್ಗೆ ಗಂಟೆ 6ರಿಂದ ಸೆ. 9ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಡೆಸುವುದನ್ನು ಅಥವಾ ಯಾವುದೇ ಬೈಕ್ ರ್ಯಾಲಿ ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಉಡುಪಿ: ಮಂಗಳೂರು ಚಲೋಗೆ ಸಂಬಂಧಿಸಿ ಬಿಜೆಪಿ ಯುವ ಮೋರ್ಚಾ ರಾಲಿಯ ಮಾರ್ಗ, ಸಂಖ್ಯೆಯ ನಿರೀಕ್ಷೆ, ವಸತಿ ವ್ಯವಸ್ಥೆಗಳ ಬಗ್ಗೆ ಉಡುಪಿ ಜಿಲ್ಲಾ ಎಸ್ಪಿಯವರಿಗೆ ಸೋಮವಾರ ವಿವರಣೆ ನೀಡಲಾಗಿದೆ.
Related Articles
Advertisement
ಹುಬ್ಬಳ್ಳಿ, ಶಿವಮೊಗ್ಗದಿಂದ ಆಗಮಿಸುವ ಬೈಕ್ ರಾಲಿ ಸೆ. 6-7ರಂದು ಉಡುಪಿ ಜಿಲ್ಲೆಯಲ್ಲಿ ಸಂಚರಿಸಿ ಮಂಗಳೂರಿಗೆ ತೆರಳುವ ಕಾರ್ಯಕ್ರಮವಿದೆ ಎಂದಿದ್ದಾರೆ.
ರಾಲಿಗೆ ಕಾರ್ಕಳದಿಂದ 1,000 ಬೈಕ್ಕಾರ್ಕಳ: ಮಂಗಳೂರು ಚಲೋ ಕಾರ್ಯಕ್ರಮದಲ್ಲಿ ಕಾರ್ಕಳದಿಂದ 1,000 ಬೈಕ್‌ಗಳಲ್ಲಿ ಕಾರ್ಯಕರ್ತರು ಭಾಗವಹಿಸುವರೆಂದು ಬಿಜೆಪಿ ತಿಳಿಸಿದೆ. ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಬೆ„ಕ್ ರಾಲಿಗೆ ಯುವ ಮೋರ್ಚಾ ಸಿದ್ಧ ಎಂದು ತಾಲೂಕು ಯುವಮೋರ್ಚಾ ಅಧ್ಯಕ್ಷ ಕರುಣಾಕರ ಎಸ್. ಕೋಟ್ಯಾನ್, ಬಿಜೆಪಿ ನಗರಾಧ್ಯಕ್ಷ ಆರ್. ಅನಂತ ಕೃಷ್ಣ ಶೆಣೆ„ ತಿಳಿಸಿದ್ದಾರೆ.
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸೆ.6ರ ಸಂಜೆ 4 ಗಂಟೆಗೆ ಕಾರ್ಕಳ ಪ್ರವೇಶಿಸಲಿದ್ದಾರೆ. ಹೆಬ್ರಿ ಶಕ್ತಿ ಕೇಂದ್ರದ ಕಾರ್ಯಕರ್ತರು 1,000 ಬೈಕ್‌ಗಳಲ್ಲಿ ಶಿವಮೊಗ್ಗದಿಂದ ಬಂದ ಕಾರ್ಯಕರ್ತರನ್ನು ಬರಮಾಡಿಕೊಂಡು ಹೆಬ್ರಿಯ ಬಸ್‌ಸ್ಟಾಂಡ್‌ನಲ್ಲಿ ಸಭೆ ನಡೆಸಲಿದ್ದಾರೆ. ಕಾರ್ಕಳದಲ್ಲಿ ಶಿವಮೊಗ್ಗದ ಕಾರ್ಯಕರ್ತರು ವಾಸ್ತವ್ಯ ಹೂಡಲಿದ್ದು ಸೆ. 7ರಂದು ಬೆಳಗ್ಗೆ 8.30ಕ್ಕೆ ವಿವಿಧ ಗ್ರಾಮಗಳಿಂದ 1,000 ಬೆ„ಕ್‌ಗಳಲ್ಲಿ ಕಾರ್ಯಕರ್ತರು ಕಾರ್ಕಳ ಬಸ್‌ಸ್ಟಾಂಡ್‌ನಲ್ಲಿ ಪ್ರತಿಭಟನ ಸಭೆಯನ್ನು ನಡೆಸಿ ಶಿವಮೊಗ್ಗದ ಕಾರ್ಯಕರ್ತರೊಂದಿಗೆ ಮೂಡಬಿದಿರೆಯ ಮೂಲಕ ಮಂಗಳೂರಿಗೆ ತೆರಳಲಿದ್ದಾರೆ ಎಂದವರು ತಿಳಿಸಿದ್ದಾರೆ. ರಾಲಿಗೆ ಅವಕಾಶ ಬೇಡ:ಯುವ ಕಾಂಗ್ರೆಸ್
ಉಡುಪಿ: ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೆ.5ರಿಂದ ಸೆ. 7ರ ವರೆಗೆ ಜರಗಲಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಅವಕಾಶ ಕೊಡಬಾರದೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿಸಿದೆ.
ಜಿಲ್ಲೆಯ ಜನರು ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದು, ಇಂತಹ ಸಂದರ್ಭದಲ್ಲಿ ಜನರಲ್ಲಿ ಕೋಮು ದ್ವೇಷ ಹಾಗೂ ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದೂ ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಉಡುಪಿ ಡಿಸಿ ಹಾಗೂ ಎಸ್‌ಪಿಗೆ ಮನವಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ತಿಳಿಸಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದಲ್ ಅಜೀಜ್, ರವಿಶಂಕರ್ ಶೇರಿಗಾರ್, ಮೊಹ್ಮದ್ ಇಮ್ರಾನ್, ಮೆಲ್ವಿನ್ ಡಿ’ಸೋಜಾ, ಪ್ರಶಾಂತ್ ಪೂಜಾರಿ, ದೀಪಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.