Advertisement

Udupi ಬ್ಯಾಂಕ್‌ ಉದ್ಯೋಗ ಕೊಡಿಸುವುದಾಗಿ ವಂಚನೆ; ಪ್ರಕರಣ ದಾಖಲು

11:43 PM Nov 29, 2023 | Team Udayavani |

ಉಡುಪಿ: ಬ್ಯಾಂಕಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 13 ಲಕ್ಷ ರೂ ಹಣ ಪಡೆದು ವಂಚಿಸಿದ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ವಡ್ಡರ್ಸೆ ನಿವಾಸಿ ಅಜಿತ್‌ ಕುಮಾರ್‌ ಪ್ರಕರಣದ ಆರೋಪಿ.

ಕಿರಿಮಂಜೇಶ್ವರ ನಿವಾಸಿ ಮಹೇಶ್‌ ಕುಮಾರ್‌ (35) ಅವರು ಉದ್ಯೋಗ ನಿರೀಕ್ಷೆಯಲ್ಲಿರುವಾಗ, 2021ನೇ ಸಾಲಿನಲ್ಲಿ ತಂಗಿ ಶೈಲಶ್ರೀ ಅವರಿಂದ ಅಜಿತ್‌ ಕುಮಾರ್‌ ಪರಿಚಯವಾಗಿದ್ದು, ಆತನು ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದೆ, ಬ್ಯಾಂಕಿನಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದು, ಅದರಂತೆ ಆರೋಪಿತನು ಹೇಳಿದಂತೆ ಮಹೇಶ್‌ ಕುಮಾರ್‌ ಅವರ ತಂಗಿ ಶೈಲಶ್ರೀ ಅವರ ಬ್ಯಾಂಕ್‌ ಖಾತೆ ಮತ್ತು ಪೋನ್‌ ಪೇ ಮುಖಾಂತರ 10 ಲಕ್ಷ ರೂ ಹಾಗೂ ನಗದು ರೂಪದಲ್ಲಿ 3ಲಕ್ಷ ರೂ ಸೇರಿದಂತೆ ಒಟ್ಟು 13 ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದು ದುರುಪಯೋಗಪಡಿಸಿಕೊಂಡು ವಂಚಿಸಿರುವುದಾಗಿ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next