Advertisement

ಉಡುಪಿ: ಬಿಜೆಪಿ ಗೆಲ್ಲಿಸಿದ ಬಬ್ಬುಸ್ವಾಮಿಗೆ ಕೋಲ ಭಾಗ್ಯ! 

12:30 AM Feb 02, 2019 | |

ಉಡುಪಿ: ಎಲ್ಲ ಚುನಾವಣೆಗಳೂ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸಂಕಷ್ಟದ ಕಾಲ. ದೇವರನ್ನು ನಂಬುವುದಿಲ್ಲ ಎನ್ನುವವರೂ ಆಗ ದೈವ-ದೇವರ ಮೊರೆ ಹೋಗುವುದು ಸಾಮಾನ್ಯ. ಅದರಂತೆ ಕಳೆದ ಚುನಾವಣೆ ಸಂದರ್ಭ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಕೊಟ್ಟರೆ ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿ ಸಮೀಪವಿರುವ ಬಬ್ಬುಸ್ವಾಮಿ ಸನ್ನಿಧಿಗೆ ಕೋಲದ ಸೇವೆ ಕೊಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹರಕೆ ಹೊತ್ತರು; ಹರಕೆ ಈಡೇರಿತು. ಇದರ ಅನಂತರದ ಫ‌ಲವೇ ಶುಕ್ರವಾರದಿಂದ ಆರಂಭಗೊಂಡು ಶನಿವಾರ ದವರೆಗೆ ನಡೆಯುವ ಕೋಲ…

Advertisement

ಈ ಬಬ್ಬುಸ್ವಾಮಿ ಸನ್ನಿಧಿಗೆ ಶತಮಾನಗಳ ಇತಿಹಾಸವಿದೆ. ಶ್ರೀಕೃಷ್ಣ ಮಠದ ಕಟ್ಟಿಗೆ ರಥದ ಬಳಿ ಇದು ಇತ್ತು. ಅಲ್ಲಿ ಕೋಲ ಇತ್ಯಾದಿಗಳನ್ನು ನಡೆಸಲು ಸ್ಥಳ ಇಕ್ಕಟ್ಟಾದ ಕಾರಣ ಕಡಿಯಾಳಿಯ ಜೋಡುಕರ್ಮಾರು ಮರದ ಬುಡದಲ್ಲಿ ಪ್ರತಿಷ್ಠಾಪಿಸಲಾಯಿತು. 1946ರಲ್ಲಿ ಅಜ್ಜಂಪಾಡಿ ಜೋಯಿಸರ ನೇತೃತ್ವದಲ್ಲಿ ದಿ| ಓಕುಡೆ ರಾಮ ಭಟ್ಟರು ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ ಕಟ್ಟಿಸಿದರು ಎಂದು ದೈವಸ್ಥಾನದ ವಿಜ್ಞಾಪನೆ ಪತ್ರದಲ್ಲಿ ಮುದ್ರಿಸಲಾಗಿದೆ. ಈ ದೈವಸ್ಥಾನದ ಪೂಜೆಯವರು ಕಟ್ಟಿಗೆ ರಥ ಕೂಡಿಸಲು ಶ್ರೀಕೃಷ್ಣ ಮಠದ ಪರ್ಯಾಯ ಪೂರ್ವಭಾವಿ ಕಟ್ಟಿಗೆ ಮುಹೂರ್ತದಲ್ಲಿ ಹೋಗುವುದು, ವರ್ಷಕ್ಕೆ ಮೂರು ಬಾರಿ ಶ್ರೀಕೃಷ್ಣ ಮಠದಿಂದ ಪೂಜಾ ಸಾಮಗ್ರಿಗಳನ್ನು ದೈವಸ್ಥಾನಕ್ಕೆ ಕೊಡುವ ಸೌಹಾರ್ದ ಸಂಬಂಧ ಮುಂದುವರಿದುಕೊಂಡು ಬರುತ್ತಿದೆ. ಓಕುಡೆ ಮನೆತನದವರು ಕ್ಷೇತ್ರದ ಆಡಳಿತೆದಾರರು.

ಶ್ರೀಕೃಷ್ಣನಿಗೆ  ಬ್ರಹ್ಮರಥೋತ್ಸವ
ಕಾಕತಾಳೀಯವೆಂಬಂತೆ ಶುಕ್ರವಾರವೇ ಶ್ರೀಕೃಷ್ಣ ಮಠದಲ್ಲಿ ಕೆಲವು ಮೋದಿ ಅಭಿಮಾನಿಗಳು ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ್ದಾರೆ. ಮುಂದೆಯೂ ಮೋದಿ ಪ್ರಧಾನಿಯಾಗಬೇಕೆಂದು ಅವರ ಹರಕೆ. ಕೋಲಕ್ಕೆ ಸುಮಾರು 14-15 ಲ.ರೂ. ಖರ್ಚಾಗಬಹುದು ಎಂದು ಸಂಘಟಕರು ಹೇಳಿದ್ದಾರೆ. ಬ್ರಹ್ಮರಥೋತ್ಸವ ಸೇವಾ ಶುಲ್ಕ 20,000 ರೂ. ಕೋಲದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 6,000 ಜನರು ಭೋಜನ ಪ್ರಸಾದ ಸ್ವೀಕರಿಸಿದ್ದೂ ಕೋಲದ ಖರ್ಚಿನ ಬಾಬಿನಲ್ಲಿ ಸೇರಿದೆ. ಕೃಷ್ಣ ಮಠದಲ್ಲಿ ನಿತ್ಯ ನಡೆಯುವ ಭೋಜನಪ್ರಸಾದದ ಖರ್ಚು ಬ್ರಹ್ಮರಥೋತ್ಸವದ ಖರ್ಚಿನಲ್ಲಿ ಸೇರಿಲ್ಲ,

Advertisement

Udayavani is now on Telegram. Click here to join our channel and stay updated with the latest news.

Next