Advertisement

ಉಡುಪಿ: ಆಟೋಯಾನ ದರ ಪರಿಷ್ಕರಣೆ

01:29 AM Feb 07, 2020 | mahesh |

ಉಡುಪಿ: ಜಿಲ್ಲೆಯ ಆಟೋ ಪ್ರಯಾಣ ದರ ಪರಿಷ್ಕರಿಸಲಾಗಿದ್ದು, ಹೆಚ್ಚಳದ ದರ ಎ. 1ರಿಂದ ಅನ್ವಯವಾಗಲಿದೆ. ಈಗಿನ ಕನಿಷ್ಠ ದರ ರೂ. 25ನ್ನು 30 ರೂ.ಗೇರಿಸಲಾಗಿದೆ. ಅನಂತರ ರನ್ನಿಂಗ್‌ ದರವನ್ನು 17 ರೂ.ಗೆ ನಿಗದಿ ಪಡಿಸಲಾಗಿದೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತ ಸಭೆಯಲ್ಲಿ ಈ ತೀರ್ಮಾನ ತಳೆಯಲಾಯಿತು. ಕಡ್ಡಾಯವಾಗಿ ಎಲ್ಲ ಆಟೋಗಳಲ್ಲಿ ಮೀಟರ್‌ ಅಳವಡಿಸಿ ಆ ಪ್ರಕಾರವೇ ಪ್ರಯಾಣಿಕರಿಂದ ದರ ಪಡೆಯಲು ಸಭೆ ನಿರ್ಧರಿಸಿತು.

Advertisement

ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲನೆ ಮಾಡಬೇಕು ಎಂದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಿಂದ ಬರಬೇಡಿ, ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಿರಿ, ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷಾ ಕ್ರಮ ಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಎಂದು ಸೂಚಿಸಿದರು. ಆಟೋ ರಿಕ್ಷಾಗಳ ವಲಯ ನಿಗದಿ ಕುರಿತಂತೆ ಇರುವ ಗೊಂದಲಗಳ ಕುರಿತಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಮತ್ತು ವಿವಿಧ ರಿಕ್ಷಾ ಸಂಘಟನೆಗಳ ಮುಖಂಡರು ಮತ್ತು ಆಟೋ ಚಾಲಕರು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ 2014ರಲ್ಲಿ ಆಟೋ ಪ್ರಯಾಣ ಪರಿಷ್ಕರಿಸಿದ ಅನಂತರ ದರ ಪರಿಷ್ಕರಣೆ ಆಗಿಲ್ಲ. ವಾಹನದ ವಿಮೆ, ಬಿಡಿಭಾಗಗಳ ದರ ಹೆಚ್ಚಳವಾಗಿದ್ದು ಆಟೋ ಪ್ರಯಾಣದ ದರವನ್ನು ಹೆಚ್ಚಿಸುವಂತೆ ಆಟೋ ಚಾಲಕ ಸಂಘಟನೆಗಳ ಮುಖಂಡರು ಮತ್ತು ಚಾಲಕರು ಮನವಿ ಮಾಡಿದ್ದರು.

 1.5 ಕಿ.ಮೀ.ಗೆ ಕನಿಷ್ಠ ದರ 30 ರೂ.
 ಅನಂತರ ಕಿ.ಮೀ.ಗೆ 17 ರೂ.
 ಎ. 1ರಿಂದ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next