Advertisement
ತಂದೆ ನೆನಪಲ್ಲಿ ಕಣ್ಣೀರಾದ ಶಿಲ್ಪಾ ಜಿ.ಪಂ. ಸದಸ್ಯೆ, ಮಾಜಿ ಸಚಿವ ವಸಂತ ವಿ. ಸಾಲ್ಯಾನ್ ಅವರ ಪುತ್ರಿ ಶಿಲ್ಪಾ ಜಿ. ಸುವರ್ಣ ಅವರು ಲಾಲಾಜಿ ಅವರ ಜತೆಗೆ ಮತ ಎಣಿಕೆ ಕೇಂದ್ರದಿಂದ ಹೊರಗೆ ಬರುವ ಸಂದರ್ಭದಲ್ಲಿ ದುಃಖ ತಡೆಯಲಾದರೆ ಅತ್ತು ಬಿಟ್ಟರು. ಅನಂತರ ಕೆಲವು ಹೊತ್ತಿನ ಬಳಿಕ ಸಮಾಧಾನಗೊಂಡ ಶಿಲ್ಪಾ ಅವರನ್ನು ಪ್ರಶ್ನಿಸಿದಾಗ “ಕಾಪುವಿನಲ್ಲಿ ಕಾಂಗ್ರೆಸ್‌ನವರು ನನ್ನ ತಂದೆ ದಿ| ವಸಂತ ವಿ.ಸಾಲ್ಯಾನ್ ಅವರಿಗೆ ಮಾಡಿದ ದ್ರೋಹಕ್ಕೆ ಇಂದು ಕಾಪುವಿನ ಜನತೆ ಸರಿಯಾದ ಉತ್ತರ
ನೀಡಿದ್ದಾರೆ.ಲಾಲಾಜಿ ಗೆಲುವು ಅತ್ಯಂತ ಸಂತಸ ನೀಡಿದೆ’ ಎಂದು ಪ್ರತಿಕ್ರಿಯಿಸಿದರು.
ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಮತ ಎಣಿಕೆ ಕೇಂದ್ರದಲ್ಲಿಯೇ ಇದ್ದ ವಿನಯ ಕುಮಾರ್ ಸೊರಕೆ ಅವರು ಅಲ್ಲಿಂದ ಹೊರ ಹೋಗುವಾಗ ಮಾಧ್ಯಮದವರು ಎದುರಾಗಿ ಪ್ರಶ್ನಿಸಿ ದರೂ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.
ಲೆಕ್ಕಾಚಾರ ತಪ್ಪಿದ್ದೆಲ್ಲಿ ಗೊತ್ತಿಲ್ಲ
ಮತ ಎಣಿಕೆ ಕೇಂದ್ರದಿಂದ ಹೊರಬಂದ ಕಾಂಗ್ರೆಸ್‌ನ ವೆರೋನಿಕಾ ಕರ್ನೇಲಿಯೋ ಅವರು “ನಮಗೆ ಯಾಕೆ ಸೋಲಾಯಿತೆಂದು ಗೊತ್ತಿಲ್ಲ. ಭ್ರಷ್ಟಾಚಾರ ರಹಿತವಾದ ಅಭಿವೃದ್ಧಿ ಕೆಲಸಗಳು ನಡೆದಿವೆ. ಬಹುಶಃ ಹಿಂದುತ್ವದ ಅಲೆಯೇ ಸೋಲಿಗೆ ಕಾರಣವಾಗಿರಬಹುದು’ ಎಂದು ಪ್ರತಿಕ್ರಿಯಿಸಿದರು. ಗೆದ್ದ ಬಳಿಕ ರೋಗಿ ಭೇಟಿ
ಗೆಲುವು ಸಾಧಿಸಿದ ಬಳಿಕ ರಘುಪತಿ ಭಟ್ ಅವರು ಶ್ರೀಕೃಷ್ಣಮಠ, ಮಲ್ಪೆ ವಡಭಾಂಡೇಶ್ವರ ದೇವಸ್ಥಾನಕ್ಕೆ ಹೋದ ಬಳಿಕ ಕಾರ್ಯಕರ್ತ ಪಾರ್ಶ್ವವಾಯುಪೀಡಿತ ಮಲ್ಪೆಯ ಪ್ರಶಾಂತ್ ಭಂಡಾರ್‌ಕರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
Related Articles
ಬಿಜೆಪಿಯ ರಘುಪತಿ ಭಟ್, ಲಾಲಾಜಿ ಮೆಂಡನ್, ಕಾಂಗ್ರೆಸ್‌ನ ರಾಕೇಶ್ ಮಲ್ಲಿ, ವಿನಯಕುಮಾರ್ ಸೊರಕೆ ಅವರು ಬೆಳಗ್ಗೆ 8 ಗಂಟೆಗೇ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್, ಗೋಪಾಲ ಪೂಜಾರಿ, ಗೋಪಾಲ ಭಂಡಾರಿ ಅವರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿರಲಿಲ್ಲ. ಬಿಜೆಪಿಯ ಸುನಿಲ್‌ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿಯವರು ಗೆಲುವಿನ ವಾರ್ತೆ ತಿಳಿಯುತ್ತಲೇ ಕೇಂದ್ರಕ್ಕೆ ಆಗಮಿಸಿದರು.
Advertisement