Advertisement
ಉಡುಪಿ ಬಡಗಬೆಟ್ಟಿನವರಾದ ಸೋಂಕಿತರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್. ಇವರು 31 ಜನರೊಂದಿಗೆ ಕೇರಳದ ತಿರುವನಂತಪುರಕ್ಕೆ ಎಲೆಕ್ಟ್ರಿಕಲ್ ಕೆಲಸಕ್ಕೆ ಹೋಗಿ ವಾಪಸಾಗುವಾಗ ಕೇರಳದಲ್ಲಿ ಕೋವಿಡ್ ಹಾವಳಿ ಜಾಸ್ತಿ ಇತ್ತು. ಹೀಗಾಗಿ ಇವರಿಗೆ ದ.ಕ. ಜಿಲ್ಲೆಯ ತಲಪಾಡಿಯಲ್ಲಿ ಬರಲು ಬಿಡಲಿಲ್ಲ. ಕೊನೆಗೆ ಉಡುಪಿಯಿಂದ ಆ್ಯಂಬುಲೆನ್ಸ್ ಕಳುಹಿಸಿ ತಂಡದಲ್ಲಿದ್ದ ಎಲ್ಲರನ್ನೂ ನೇರವಾಗಿ ಜಿಲ್ಲಾಸ್ಪತ್ರೆಗೆ ಮಾ. 27ರಂದು ಕ್ವಾರಂಟೈನ್‌ನಲ್ಲಿ ದಾಖಲಿಸಲಾಗಿತ್ತು. ಮಾ. 29ರಂದು ಇವರ ಗಂಟಲ ದ್ರವದ ವರದಿ ಪಾಸಿಟಿವ್ ಆಗಿ ಬಂದಿತ್ತು. ಬಳಿಕ ಇವರನ್ನು ಮಣಿಪಾಲ ಆಸ್ಪತ್ರೆಗೂ, ಎ. 1ರಿಂದ ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಗೂ ದಾಖಲಿಸಲಾಯಿತು. ಇತ್ತೀಚೆಗೆ ಇವರ ಗಂಟಲ ದ್ರವ ಮತ್ತೂಮ್ಮೆ ಪಾಸಿಟಿವ್ ಆಗಿ ವರದಿ ಬಂದಿತ್ತು. ಶನಿವಾರ ಎರಡೂ ಗಂಟಲ ದ್ರವ ಪರೀಕ್ಷೆ ನೆಗೆಟಿವ್ ಆಗಿ ಬಂದ ಕಾರಣ ಜಿಲ್ಲಾಡಳಿತ ಅಪರಾಹ್ನ 2.55ಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ 14 ದಿನಗಳ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿತು.
ಶನಿವಾರ ಒಟ್ಟು ಎಂಟು ಮಂದಿಯನ್ನು ಆಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ಸೇರಿಸಲಾಗಿದೆ. ಇವರಲ್ಲಿ ತೀವ್ರ ಉಸಿರಾಟ ಸಮಸ್ಯೆಯ ನಾಲ್ವರು ಪುರುಷರು, ಕೊರೊನಾ ಶಂಕಿತ ಒಬ್ಬ ಪುರುಷ, ಫೂÉ é ಜ್ವರದ ಇಬ್ಬರು ಪುರುಷರು, ಓರ್ವ ಮಹಿಳೆ ಇದ್ದಾರೆ. ಪ್ರಸ್ತುತ 56 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ಶನಿವಾರ ಒಂಬತ್ತು ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು ಇದುವರೆಗೆ 213 ಮಂದಿ ಬಿಡುಗಡೆಗೊಂಡಿದ್ದಾರೆ.
Related Articles
ಶನಿವಾರ 231 ಜನರು ನೋಂದಣಿ ಮಾಡಿ ಕೊಂಡಿದ್ದು 116 ಮಂದಿ 28 ದಿನ ಗಳ, 76 ಜನರು 14 ದಿನಗಳ ನಿಗಾ ಪೂರೈಸಿದ್ದಾರೆ. 488 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಶನಿವಾರ ನಾಲ್ವರು ಆಸ್ಪತ್ರೆ ಕ್ವಾರಂಟೈನ್‌ಗೆ ಸೇರಿದ್ದು ಪ್ರಸ್ತುತ 36 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.
Advertisement