Advertisement

ಉಭಯ ಜಿಲ್ಲೆಗಳಲ್ಲಿ “ಕಂದಾಯ ದಾಖಲೆ ಮನೆ ಬಾಗಿಲಿಗೆ’ಕಾರ್ಯಕ್ರಮಕ್ಕೆ ಚಾಲನೆ

01:11 AM Mar 13, 2022 | Team Udayavani |

ಮೂಡುಬಿದಿರೆ: ಯಾವುದೇ ಭ್ರಷ್ಟಾಚಾರಕ್ಕೆ ಎಡೆ ಕೊಡದೆ, ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಮೂಲದಾಖಲೆಗಳನ್ನು ಸರಿಪಡಿಸಿ ಮನೆ ಮನೆಗೆ ತೆರಳಿ ತಲುಪಿಸುವ ಸರಕಾರದ ಕೆಲಸ ಕ್ರಾಂತಿಕಾರಕ ಎಂದು ಜಿಲ್ಲಾ ಸಚಿವ ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಂದಾಯ ಇಲಾಖೆಯ “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಅವರು ಮೂಡುಬಿದಿರೆ ತಾಲೂಕಿನ ಪಡು ಮಾರ್ನಾಡು ಗ್ರಾ.ಪಂ. ವ್ಯಾಪ್ತಿಯ ಮೂಡುಮಾರ್ನಾಡು ಬ್ರಹ್ಮ ಮುಗೇರ್ಕಳ ದೈವಸ್ಥಾನದ ಬಳಿ ಚಾಲನೆ ನೀಡಿ ಮಾತನಾಡಿದರು.

ಗ್ರಾಮಲೆಕ್ಕಗರು, ಪಿಡಿಒಗಳ ಸಹಿತ ಅಧಿಕಾರಿ ವರ್ಗದವರು ಜತೆಯಾಗಿ ಕೆಲಸ ಮಾಡುವುದರಿಂದ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ಜನರಿಗೆ ತಮ್ಮ ಆರ್‌ಟಿಸಿ ಯಾರ ಹೆಸರಿನಲ್ಲಿದೆ ಎಂಬುದು ಗೊತ್ತಿರು ವುದಿಲ್ಲ, ಅದನ್ನು ಬದಲಾವಣೆ ಮಾಡಿ ಕೊಳ್ಳಬೇಕೆಂಬುದು ತಿಳಿದಿರುವುದಿಲ್ಲ ಅಥವಾ ನ್ಯಾಯಾಲಯ ದಲ್ಲಿದೆಯೋ ಎಂದು ಗಮನಕ್ಕೆ ಬಂದಿರುವುದಿಲ್ಲ. ಅದ ಕ್ಕಾ ಗಿಯೇ ಸಾರ್ವಜನಿಕರಿಗೆ ತಿಳಿಸಿ, ಸರಿಪಡಿಸಿ ಮನೆ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡ ಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿ ಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.

ಜಿಲ್ಲಾಧಿಕಾರಿ ಗರಂ
ಪಂಚಾಯತ್‌ಗಳಿಂದ, ಗ್ರಾಮಕರಣಿಕರಿಂದ ಕಿರುಕುಳ ಅನುಭವಿಸುತ್ತಿರುವ, ಸಮಸ್ಯೆಗಳು ಬಗೆಹರಿ ಯದ ಬಗ್ಗೆ ಸಾರ್ವಜನಿಕರು ಡಿ.ಸಿ. ಗಮನಕ್ಕೆ ತಂದಾಗ ಗರಂ ಆದ ಅವರು, ಸ್ಥಳೀಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಜನರು ನಮ್ಮನ್ನು ಸಂಪರ್ಕಿ ಸಬೇಕಾದ ಅಗತ್ಯ ಇರುವುದಿಲ್ಲ. ಸಮಸ್ಯೆ ಬಗೆಹರಿ ಸಲು ಅ ಧಿಕಾರಿಗಳು ಏಕೆ ಪ್ರಯತ್ನಿಸುತ್ತಿಲ್ಲವೆಂದು ತಹಶೀಲ್ದಾರ್‌ ಅವರನ್ನು ಪ್ರಶ್ನಿಸಿದರು. ಬಡವರನ್ನು ಗುರುತಿಸಿ ಜಾಗ, ನಿವೇಶನ, ಹಕ್ಕುಪತ್ರ ಕೊಡಿ ಎಂದು ಸೂಚಿಸಿದರು.

Advertisement

ಇತಿಹಾಸ ನಿರ್ಮಾಣ: ನಳಿನ್‌
ಬಂಟ್ವಾಳ: ಕಂದಾಯ ಇಲಾಖೆಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ರಾಜ್ಯ ಸರಕಾರವು ಅನುಷ್ಠಾನಗೊಳಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡುವ ಕಾರ್ಯ ಮಾಡಿದ್ದು, ಮುಂದಿನ ಮೂರು ತಿಂಗಳಲ್ಲಿ ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ದಾಖಲೆ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಅವರು ಶನಿವಾರ ಬಂಟ್ವಾಳದ ಅಮ್ಮುಂಜೆ ಗ್ರಾಮದಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಈ ಯೋಜನೆಯ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕ ರಾಜೇಶ್‌ ನಾೖಕ್‌ ಹಾಗೂ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಅವರು ನಿಯೋಜಿತ ಮನೆಗಳಿಗೆ ತೆರಳಿ ದಾಖಲೆಗಳನ್ನು ಹಸ್ತಾಂತರಿಸಿದರು. ಶಿರಸ್ತೇದಾರ್‌ ನರೇಂದ್ರನಾಥ ಮಿತ್ತೂರು, ಕಂದಾಯ ನಿರೀಕ್ಷಕ ವಿಜಯ್‌, ಗ್ರಾಮಕರಣಿಕ ಪ್ರಶಾಂತ್‌, ಗ್ರಾಮ ಸಹಾಯಕ ರೂಪೇಶ್‌ ಪಾಲ್ಗೊಂಡಿದ್ದರು.

ಪ್ರಾಮಾಣಿಕ ಕಾರ್ಯನಿರ್ವಹಣೆ ಅಗತ್ಯ
ಉಡುಪಿ: ಸಾರ್ವಜನಿ ಕರಿಗೆ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಮಧ್ಯ ವರ್ತಿಗಳ ಹಾವಳಿ ಇಲ್ಲದೆ ಸಕಾಲದಲ್ಲಿ ಸಮರ್ಪಕ ವಾಗಿ ಒದಗಿಸುವ ಮೂಲಕ ಕಂದಾಯ ಸಮಸ್ಯೆಗಳನ್ನು ಸಮರ್ಪಕ ರೀತಿಯಲ್ಲಿ ಬಗೆಹರಿಸಲು ಅಧಿಕಾರಿಗಳು ಪ್ರಾಮಾಣಿಕ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಕೆ.ರಘುಪತಿ ಭಟ್‌ ಹೇಳಿದರು.

“ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಯಡಿ ಶನಿವಾರ ತೆಂಕನಿಡಿಯೂರು ಗ್ರಾ. ಪಂ.ವ್ಯಾಪ್ತಿ ಯಲ್ಲಿನ ರೈತರ ಮನೆಗೆ ತೆರಳಿ ದಾಖಲೆ ವಿತರಿಸಿ ಅನಂತರ ನಡೆದ ಸಭಾ ಕಾರ್ಯ  ಕ್ರಮ ಉದ್ಘಾಟಿಸಿ ಅವರು ಮಾತನಾ ಡಿದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡು ವುದರ ಮೂಲಕ ಸಾರ್ವಜನಿಕರಿಗೆ ಸರಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳನ್ನು ಉತ್ತಮ ರೀತಿಯಲ್ಲಿ ತಲುಪಿಸಬೇಕು ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಪಡೆ
ಯಲು ಸಾರ್ವಜನಿಕರು ನಿಗದಿತ ಶುಲ್ಕ ಪಾವತಿ ಮತ್ತು ಕಾಯುವ ಪರಿಸ್ಥಿತಿ ಇತ್ತು. ಆದರೆ ಈ ಯೋಜನೆಯ ಮೂಲಕ ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಟ್ಲಾಸ್‌/ ಹಿಸ್ಸಾ ಸ್ಕೆಚ್‌ಗಳನ್ನು ಉಚಿತವಾಗಿ ತಲುಪಿಸಲಾಗುತ್ತಿದೆ. ಈಗ ನೀಡಲಾಗುತ್ತಿರುವ ದಾಖಲಾತಿಗಳಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಸಹ ಅವಕಾಶವಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತೆಂಕನಿಡಿಯೂರು ಗ್ರಾ. ಪಂ. ಅಧ್ಯಕ್ಷೆ ಗಾಯತ್ರಿ ಸುರೇಶ್‌, ಉಪಾಧ್ಯಕ್ಷ ಅರುಣ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.ಉಡುಪಿ ತಹಶೀಲ್ದಾರ್‌ ಅರ್ಚನಾ ಭಟ್‌ ಸ್ವಾಗತಿಸಿದರು. ಪ್ರಶಾಂತ್‌ ಶೆಟ್ಟಿ ಹಾವಂಜೆ ವಂದಿಸಿ, ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next