Advertisement
ರಾಜ್ಯದಲ್ಲೇ ಪ್ರಥಮ ಸ್ಥಾನ ದಲ್ಲಿರುವ ಉಡುಪಿ ಜಿಲ್ಲೆ, ಆ ಸಾಧನೆಯನ್ನು ಉಳಿಸಿಕೊಂಡು, ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳಲು ಈ ಯೋಜನೆ ಜಾರಿಗೊಳಿಸುತ್ತಿದೆ.
Related Articles
ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಎಸೆಸೆಲ್ಸಿ ವಿದ್ಯಾರ್ಥಿಗಳಿಗೂ ಶಾಲೆಯಿಂ ದಲೇ ಇ-ಮೇಲ್ ಅಕೌಂಟ್ ತೆರೆದು ಕೊಡಲಾಗುತ್ತಿದೆ. ಈ ಇ-ಮೇಲ್‌ಗೆ ಶಾಲೆಯಿಂದ ಕಲಿಕೆಗೆ ಸಂಬಂಧಿಸಿದ ವೀಡಿಯೋಗಳನ್ನು ಕಳಿಸಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದದ್ದನ್ನು ಡೌನ್‌ಲೋಡ್ ಮಾಡಿಕೊಂಡು ಅಧ್ಯಯನ ಮಾಡಬಹುದು.
Advertisement
ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಕ್ಕೆ ವಿದ್ಯಾರ್ಥಿಗಳು ರಜೆ ಮಾಡುವುದು ಸಹಜ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ಹಿನ್ನಡೆಯಾಗಬಾರದು ಎಂದು ಆ ದಿನದ ವೀಡಿಯೋ ಪಾಠವನ್ನು ವಿದ್ಯಾರ್ಥಿಗೆ ಇ-ಮೇಲ್ ಮಾಡಲಾಗುತ್ತದೆ. ಅನಿವಾರ್ಯ ಕಾರಣದಿಂದ ಶಾಲೆಗೆ ಹೋಗದವರು , ತರಗತಿ ಶಿಕ್ಷಣದಿಂದ ವಂಚಿತರಾಗದೇ ಇರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎನ್ನುತ್ತಾರೆ ಅಧಿಕಾರಿಗಳು. ಆಫ್ ಲೈನ್ ಆ್ಯಂಡ್ ಆನ್ ಲೈನ್
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಬೋಧಿಸುವ ಜತೆಗೆ ವಿಷಯ ತಜ್ಞರ ವಿಡಿಯೋ ತರಗತಿಗಳು ಶೈಕ್ಷಣಿಕ ವರ್ಷ ಪೂರ್ತಿ ಸಿಗಲಿವೆ. ಇದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಈಗಾಗಲೇ ವಿಷಯ ತಜ್ಞರಿಂದ ಆಯಾ ವಿಷಯದ ಪಾಠಗಳನ್ನು ಚಿತ್ರೀಕರಿಸಲಾಗಿದೆ. ಶಾಲೆಯಲ್ಲಿ ಶಿಕ್ಷಕರು ಒಂದೊಂದು ಪಾಠ ಮುಗಿಸುತ್ತಿದ್ದಂತೆ ಅಥವಾ ವಾರಾಂತ್ಯದಲ್ಲಿ ವೀಡಿಯೋ ತರಗತಿಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ . ಯಾವುದೇ ಸಂಶಯಗಳಿದ್ದರೂ ಅಲ್ಲಿಯೇ ಬಗೆಹರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳಿಸಲು ಹಂತಹಂತ ವಾಗಿ ಕೆಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಎಲ್ಲ ಶಾಲೆಗಳಲ್ಲೂ ವಿಶೇಷ ತರಗತಿ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ವೀಡಿಯೋ ಆಧಾ ರಿತ ಕಲಿಕೆಯನ್ನೂ ಕೈಗೊಳ್ಳಲಾಗುತ್ತಿದೆ.
– ಕೆ. ಗಣಪತಿ, ಡಿಡಿಪಿಐ, ಉಡುಪಿ – ರಾಜು ಖಾರ್ವಿ ಕೊಡೇರಿ