Advertisement
ತಡರಾತ್ರಿ ವರೆಗೂ ನಿರಂತರ ಗಸ್ತಿನಲ್ಲಿದ್ದ ಪೊಲೀಸರು ಸಮಯ ಮೀರಿ ವಹಿವಾಟು ನಡೆಸುತ್ತಿದ್ದ ಅಂಗಡಿ, ಹೊಟೇಲ್, ಬಾರ್, ಪಬ್ ಮಾಲಕರಿಗೆ ಸರಿಯಾದ ಸಮಯಕ್ಕೆ ಮುಚ್ಚುವಂತೆ ಎಚ್ಚರಿಕೆ ನೀಡಿದ್ದಾರೆ. ಸಣ್ಣಪುಟ್ಟ, ಅಂಗಡಿ ಮಾಲಕರು ಪೊಲೀಸರು ನಮಗೆ ಮಾತ್ರ ಎಚ್ಚರಿಕೆ ನೀಡಿದ್ದಾರೆ. ಸಮಯ ಮೀರಿ ನಡೆಯುತ್ತಿದ್ದ ಹೊಟೇಲ್, ಪಬ್-ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸಣ್ಣಪುಟ್ಟ ಹೊಟೇಲ್ ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಇತ್ತೀಚೆಗೆ ನಾಗಸಾಧುಗಳ ವೇಷದಲ್ಲಿರುವರು ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ವಿಚಿತ್ರ ರೀತಿಯಲ್ಲಿ ಉಪಟಳ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ದಢೂತಿ ದೇಹ, ಮುಖಕ್ಕೆ ಬೂದಿ ಮೆತ್ತಿಕೊಂಡು, ವಿಕಾರ ರೀತಿಯಲ್ಲಿ ಜಡೆಯನ್ನು ಬಿಟ್ಟ ನಾಗಾಸಾಧುಗಳಂತೆ ತೋರುವ ವ್ಯಕ್ತಿಗಳು ಕಾರಿನಲ್ಲಿ ಆಗಮಿಸಿ ಅಂಗಡಿ ಎದುರು ನಿಲ್ಲಿಸಿ ಅಂಗಡಿ ಒಳಗೆ ನುಗ್ಗಿ ತಮಗೆ ಅಗತ್ಯ ಇರುವ ಸಾಮಗ್ರಿಗಳನ್ನು ತೆಗೆದುಕೊಂಡು ಹಣವನ್ನು ವಾಪಸು ನೀಡದೆ ಹಿಂದಿರುಗುವ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.
Related Articles
Advertisement
ಉಡುಪಿ, ಮಣಿಪಾಲ ಪರಿಸರದಲ್ಲಿ ಈ ರೀತಿ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಪೊಲೀಸರು ಇಂಥವರ ಬಗ್ಗೆ ನಿಗಾ ವಹಿಸುವಂತೆ ಆಗ್ರಹಿಸಿದ್ದಾರೆ.