Advertisement

Udupi; ದೇಶದ್ರೋಹಿ ಕೂಗಿನ ವಿರುದ್ಧ ಎಬಿವಿಪಿ ಪ್ರತಿಭಟನೆ

08:06 PM Feb 28, 2024 | Team Udayavani |

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ ಸಯ್ಯದ್ ನಾಸಿರ್ ಹುಸೇನ್ ಅನುಯಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲಾಯಿತು.

Advertisement

ತಾಲೂಕು ಸಂಚಾಲಕರಾದ ಅಜಿತ್ ಜೋಗಿ ಮಾತನಾಡಿ ಪಾಪೀ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶ ದ್ರೋಹಿಗಳು ಪಾಕಿಸ್ತಾನಕ್ಕೆ ಹೋಗಲಿ ಎಂದರು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ ದೇಶದ್ರೋಹಿ ಹೇಳಿಕೆ ನೀಡಿದ ಬೆಂಬಲಿಗರನ್ನು ಪೋಷಿಸುತ್ತಿರುವ ನಾಸಿರ್ ಹುಸೇನ್ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದಂತೆ ತಡೆಹಿಡಿಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ ನಗರ ಸಹಕಾರ್ಯದರ್ಶಿ ಕಾರ್ತಿಕ್ ಮತ್ತು ಭಾವನಾ, ನಗರ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ ಕೆ, ನಗರ ಹೋರಾಟ ಪ್ರಮುಖ್ ಭೂಷಣ್ ಮತ್ತು ಪ್ರಮುಖರಾದ ಕಿಶೋರ್, ಸುಚಿತಾ, ನವೀನ್, ಸ್ವಸ್ತಿಕ್, ಪ್ರಶ್ಮಾ, ಮನೀಶ್ ಭಾಗವಹಿಸಿದರು ನಗರ ಸಂಪರ್ಕ ಪ್ರಮುಖ್ ರವಿಚಂದ್ರ ಹೋರಾಟ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next