Advertisement
ಸಾವಿನ ಸಂಖ್ಯೆ 14ಕ್ಕೇರಿಕೆಜಿಲ್ಲೆಯಲ್ಲಿ ಗುರುವಾರ ರಾತ್ರಿ ಮತ್ತೂಂದು ಸಾವು ಸಂಭವಿಸಿದೆ. 63 ವರ್ಷ ಪ್ರಾಯದ ಕುಂದಾಪುರ ಕೋಣಿ ನಿವಾಸಿ ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೃತಪಟ್ಟ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇವರ ಅಂತ್ಯಕ್ರಿಯೆ ಶುಕ್ರವಾರ ಉಡುಪಿಯಲ್ಲಿ ನಡೆಯಿತು. ಇದುವರೆಗೆ ಒಟ್ಟು 14 ಮಂದಿ ಕೊರೊನಾ ಪಾಸಿಟಿವ್‌ನಿಂದ ಮೃತಪಟ್ಟಿದ್ದಾರೆ. ಕೇರಳದ ಯುವಕನ ಸಾವಿನ ಪ್ರಕರಣ ಇದರಲ್ಲಿ ಸೇರಿಲ್ಲ.
ತೆಂಕನಿಡಿಯೂರು, ಮೂಡ ನಿಡಂಬೂರಿನಲ್ಲಿ ತಲಾ 3, ಶಿವಳ್ಳಿಯಲ್ಲಿ 7, ಅಲೆವೂರಿನಲ್ಲಿ 2, ಕೊರಂಗ್ರಪಾಡಿ, ಬಡಾನಿಡಿಯೂರು, ಉದ್ಯಾವರದಲ್ಲಿ ತಲಾ ಒಂದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಉಡುಪಿ ಹಳೆ ತಾಲೂಕು ಕಚೇರಿ ಸಮೀಪದ ಒಂದು ರೆಸ್ಟೋರೆಂಟ್, ಒಂದು ಹೊಟೇಲ್‌ನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ 81 ಕಡೆ ಸೀಲ್‌ಡೌನ್ ಮಾಡಲಾಗಿದೆ.
Related Articles
ಪಡುಬಿದ್ರಿ: ಪಡುಬಿದ್ರಿ ವ್ಯಾಪ್ತಿಯಲ್ಲಿ ಶುಕ್ರವಾರ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಡಾ ಗ್ರಾಮದ 60 ವರ್ಷದ ಪುರುಷ, ಉಚ್ಚಿಲದ 63 ವರ್ಷದ ಮಹಿಳೆ ಮತ್ತು 37 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಡ್ಪಾಲು ಗ್ರಾಮದ 33 ವರ್ಷದ ಪುರುಷ, ಪಡುಬಿದ್ರಿ ಕೆಳಗಿನ ಪೇಟೆಯ 36 ವರ್ಷದ ಪುರುಷ, ಉಚ್ಚಿಲದ 29 ವರ್ಷದ ಪುರುಷ ಮತ್ತು ಪಾದೆಬೆಟ್ಟುವಿನ 50 ವರ್ಷದ ಪುರುಷರಿಗೂ ಪಾಸಿಟಿವ್ ಬಂದಿದೆ. ಆದರೆ ರೋಗ ಲಕ್ಷಣಗಳಿಲ್ಲದ ಕಾರಣ ಮನೆಯಲ್ಲಿ ಐಸೊಲೇಶನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
Advertisement