Advertisement

ಉಡುಪಿ: ಮತ್ತೆ 16 ಮಂದಿ ಆಸ್ಪತ್ರೆಗೆ

02:45 AM Mar 23, 2020 | Sriram |

ಉಡುಪಿ: ಕೋವಿಡ್‌ 19 ರೋಗ ಲಕ್ಷಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಈ ಪೈಕಿ ಜಪಾನ್‌,ಜೀನತ್‌ (ಸೌದಿ),ಸೌದಿ ಅರೇಬಿಯಾ, ಸಿಂಗಾಪುರ, ಅಬುಧಾಬಿ, ಮಸ್ಕತ್‌ಗಳಿಂದ ಬಂದ 6 ಮಂದಿ, ಮುಂಬಯಿ 3, ತೆಲಂಗಾಣದಿಂದ ಒಬ್ಬರು, ಇತರ 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಡುಪಿಯಲ್ಲಿ 11, ಕುಂದಾಪುರದಲ್ಲಿ 2 ಹಾಗೂ ಕಾರ್ಕಳದಲ್ಲಿ 3 ಮಂದಿ ರವಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶನಿವಾರದವರೆಗೆ ಕೋವಿಡ್‌ 19 ರೋಗ ಲಕ್ಷಣ ಇರುವವರನ್ನು ಮಾತ್ರ ಚಿಕಿತ್ಸೆಗೆ ಒಳಪಡಿಸಲಾಗುತ್ತಿತ್ತು. ಈಗ ತೀವ್ರ ಉಸಿರಾಟದ ಸಮಸ್ಯೆ ಇರುವವರನ್ನೂ ಚಿಕಿತ್ಸೆಗೆ ಒಳಪಡಿಸಲಾಗುತ್ತಿರುವುದರಿಂದ ಶಂಕಿತರ ಪ್ರಕರಣ ಒಮ್ಮೆಲೆ ಹೆಚ್ಚಾಗಿದೆ. ರವಿವಾರದ 16 ಮಂದಿಯ ಪಟ್ಟಿಯಲ್ಲಿ ಆರು ಮಂದಿ ಇಲ್ಲಿಯೇ ಇದ್ದು ತೀವ್ರ ಉಸಿರಾಟದ ಸಮಸ್ಯೆ ಇರುವವರು. ಇವರಲ್ಲಿ ಪುರುಷರು ನಾಲ್ವರು, ಮಹಿಳೆಯರು ಇಬ್ಬರು. ವಿದೇಶ ಗಳಿಂದ ಬಂದ ಎಲ್ಲ ಆರು ಜನರಿಗೆ ಕೋವಿಡ್‌ 19 ಶಂಕೆಗಳಿವೆ. ಇವರಲ್ಲಿ ನಾಲ್ವರು ಪುರುಷರು, ಇಬ್ಬರು ಮಹಿಳೆಯರು. ಇವರಲ್ಲಿ ಸಿಂಗಾಪುರದಿಂದ ಬಂದವರು ನೇರ ಕೊರೊನಾ ಸಂತ್ರಸ್ತರಲ್ಲ. ಇವರು ಕೊರೊನಾ ರೋಗ ಲಕ್ಷಣ ಇರುವವರ ಸಂಪರ್ಕ ಹೊಂದಿದವರು. ಮುಂಬಯಿ, ತೆಲಂಗಾಣದಿಂದ ಬಂದವರೂ ಕೋವಿಡ್‌ 19 ಇದ್ದವರ ಸಂಪರ್ಕಕ್ಕೆ ಒಳಗಾದವರು. ಮುಂಬಯಿಯಿಂದ ಬಂದವರಲ್ಲಿ ಒಬ್ಬರು ಪುರುಷರು, ಒಂದು ಒಂದೂವರೆ ವರ್ಷದ ಗಂಡು ಮಗು, ಒಬ್ಬರು ಮಹಿಳೆ, ತೆಲಂಗಾ ಣದಿಂದ ಬಂದವರು ಪುರುಷರಾಗಿದ್ದಾರೆ.

ಒಟ್ಟಾರೆ ಈವರೆಗೆ ಜಿಲ್ಲೆಯಲ್ಲಿ 26 ಮಂದಿ ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ. ಶನಿವಾರ ರಾತ್ರಿಯಿಂದ ಶಿರೂರು ಮತ್ತು ಪಡುಬಿದ್ರಿ ಚೆಕ್‌ಪೋಸ್ಟ್‌ಬಳಿ ಸ್ಕ್ರೀನಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ.

ರವಿವಾರ ಒಟ್ಟು ನಿಗಾ ವಹಿಸಲು ನೋಂದಣಿಯಾದವರು 61, ಇದುವರೆಗೆ 509, ಒಟ್ಟು 28 ದಿನ ನಿಗಾ ಅವಧಿಯನ್ನು ಮುಗಿಸಿದವರು ರವಿವಾರ 26, ಒಟ್ಟು 161, ಹೋಮ್‌ ಕ್ವಾರೆಂಟೈನ್‌ನಲ್ಲಿರುವವರು ರವಿವಾರ 22, ಇದುವರೆಗೆ ಒಟ್ಟು 320, ಪ್ರತ್ಯೇಕ ವಾರ್ಡ್‌ನಲ್ಲಿರುವವರು ರವಿವಾರ 16, ಇದುವರೆಗೆ ಒಟ್ಟು 28.

Advertisement
Advertisement

Udayavani is now on Telegram. Click here to join our channel and stay updated with the latest news.

Next