ಮುಂಬೈ: ಮಹಾರಾಷ್ಟ್ರ ಸರ್ಕಾರಕ್ಕೆ ಎದುರಾದ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಿಎಂ ಅಧಿಕೃತ ನಿವಾಸ ತೊರೆದಿದ್ದಾರೆ.
ಬುಧವಾರ ರಾತ್ರಿ ಏಕನಾಥ್ ಶಿಂಧೆ ನೇತೃತ್ವದ ಬಂಡುಕೋರರಿಗೆ ಭಾವನಾತ್ಮಕ ಭಾಷಣ ಮಾಡಿದ ಸ್ವಲ್ಪ ಸಮಯದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸ “ವರ್ಷ” ದಿಂದ ಅವರ ಕುಟುಂಬದ ಮನೆ “ಮಾತೋಶ್ರೀ” ಗೆ ತೆರಳಿದರು.
ಅದಕ್ಕೂ ಮೊದಲು, ಫೇಸ್‌ಬುಕ್ ಲೈವ್ ನಲ್ಲಿ ಮಾತನಾಡುತ್ತಾ ತಮ್ಮ ಸರ್ಕಾರವನ್ನು ಆವರಿಸಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ನೀಡಿದರ. “ನನ್ನ ಸ್ವಂತ ಜನರಿಗೆ ನಾನು ಮುಖ್ಯಮಂತ್ರಿಯಾಗಲು ಇಷ್ಟವಿಲ್ಲದಿದ್ದರೆ, ಅವರು ನನ್ನ ಬಳಿಗೆ ಬಂದು ಹಾಗೆ ಹೇಳಲಿ. ನಾನು ರಾಜೀನಾಮೆ ಕೊಡಲು ಸಿದ್ಧ. ನಾನು ಬಾಳಾಸಾಹೇಬರ ಮಗ, ನಾನು ಸಿಎಂ ಹುದ್ದೆಯ ಹಿಂದೆ ಇಲ್ಲ. ನಾನು ರಾಜೀನಾಮೆ ನೀಡಿ ನನ್ನದನ್ನು ಮಾತೋಶ್ರೀಗೆ ತೆಗೆದುಕೊಂಡು ಹೋಗುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ:ಪಿಯು ಅತಿಥಿ ಉಪನ್ಯಾಸಕರಿಗಿಲ್ಲ ಗೌರವಧನ ಹೆಚ್ಚಳ ಭಾಗ್ಯ: ಇವರ ಮಾಸಿಕ ಸಂಭಾವನೆ ಈಗಲೂ 9 ಸಾವಿರ!
Related Articles
ಇಂದು ಮುಂಜಾನೆ, ಶಿಂಧೆ ಮತ್ತು ಅವರ ಅನುಯಾಯಿಗಳು ರಾಜ್ಯಪಾಲರು ಮತ್ತು ಡೆಪ್ಯುಟಿ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ನಾಲ್ವರು ಸ್ವತಂತ್ರ ಶಾಸಕರು ಸೇರಿ ಒಟ್ಟು 34 ಬಂಡಾಯ ಶಾಸಕರು ಪತ್ರದಲ್ಲಿ ಏಕನಾಥ ಶಿಂಧೆ ಅವರನ್ನು ತಮ್ಮ ನಾಯಕ ಎಂದು ಘೋಷಿಸಿದ್ದಾರೆ. ಬಂಡಾಯ ಬಣವು ಸೈದ್ಧಾಂತಿಕವಾಗಿ ವಿರೋಧಿಸಿದ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅಗಾಧ ಅಸಮಾಧಾನ ತಂದಿದೆ ಎಂದು ಹೇಳಿದೆ.