Advertisement

ನಾನೇನೂ ಟ್ರಂಪ್‌ ಅಲ್ಲ ಎಂದ ಉದ್ಧವ್‌

08:57 AM Jul 23, 2020 | mahesh |

ಮುಂಬಯಿ: “ನಾನೇನೂ ಡೊನಾಲ್ಡ್‌ ಟ್ರಂಪ್‌ ಅಲ್ಲ, ನನ್ನ ಜನರು ಕಷ್ಟಪಡುವುದನ್ನು ನನಗೆ ನೋಡಲು ಸಾಧ್ಯವಿಲ್ಲ’. ಹೀಗೆಂದು ಹೇಳಿರುವುದು ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ. ರಾಜ್ಯದಲ್ಲಿನ ಲಾಕ್‌ಡೌನ್‌ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಪಾಯಕಾರಿ ಕೊರೊನಾದಿಂದ ನನ್ನ ಜನ ನರಳುವುದನ್ನು ನೋಡಲು ನನ್ನಿಂದಾಗುವುದಿಲ್ಲ. ಹಾಗೆ ಮಾಡಲು ನಾನೇನೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಅಲ್ಲ ಎಂದಿದ್ದಾರೆ.

Advertisement

ಶಿವಸೇನೆ ಮುಖವಾಣಿ “ಸಾಮ್ನಾ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗಾಗಲೇ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿದ್ದೇವೆ. ಅಮೆರಿಕದಲ್ಲಿ ಸೋಂಕು ನಿಯಂತ್ರಿಸುವಲ್ಲಿ ವಿಫ‌ಲವಾಗಿದ್ದಕ್ಕೆ ಟ್ರಂಪ್‌ ಟೀಕೆ ಎದುರಿಸಬೇಕಾಗಿದೆ. ಅವರಂತೆ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷಿಸಲು ನಾನು ಸಿದ್ಧನಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next