Advertisement

‘ಉದಯವಾಣಿ-ಮಲೈಕಾ ವಿಶ್ವಕಪ್‌ ಧಮಾಕಾ’ರಸಪ್ರಶ್ನೆ ಅದೃಷ್ಟಶಾಲಿ ವಿಜೇತರ ಆಯ್ಕೆ

08:33 AM Aug 12, 2019 | mahesh |

ಮಂಗಳೂರು: ವಿಶ್ವಕಪ್‌ ಕ್ರಿಕೆಟ್ ಹಿನ್ನೆಲೆಯಲ್ಲಿ ಉದಯವಾಣಿ ಪತ್ರಿಕೆಯು ಮಲೈಕಾ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಉದಯವಾಣಿ ಮಲೈಕಾ ವಿಶ್ವಕಪ್‌ ಧಮಾಕಾ’ ರಸಪ್ರಶ್ನೆ ಸ್ಪರ್ಧೆಯ ವಿಜೇತರನ್ನು ಡ್ರಾ ಮೂಲಕ ಶುಕ್ರವಾರ ಬೆಂದೂರ್‌ವೆಲ್ನ ಮಲೈಕಾ ಶೋರೂಂನಲ್ಲಿ ಆಯ್ಕೆ ಮಾಡಲಾಯಿತು.

Advertisement

ಪ್ರಥಮ ಬಹುಮಾನ (25,000 ರೂ. ಮೌಲ್ಯ)ಸುಬ್ರಹ್ಮಣ್ಯ ಎನ್‌. ಪಣಂಬೂರು, ದ್ವಿತೀಯ ಬಹುಮಾನ (10,000 ರೂ. ಮೌಲ್ಯ) ಪುಷ್ಪಲತಾ ಬಿ., ಬಳ್ಪ, ಸುಳ್ಯ, ತೃತೀಯ (5,000 ರೂ.ಮೌಲ್ಯ) ಗುಣಪಾಲ್ ಜೈನ್‌, ಕಾರ್ಕಳ ಅವರಿಗೆ ಲಭಿಸಿದೆ. ಇದರೊಂದಿಗೆ 50 ಮಂದಿಯನ್ನು ಪ್ರೋತ್ಸಾಹಕ ಬಹುಮಾನಕ್ಕಾಗಿ ಆಯ್ಕೆ ಮಾಡಲಾಯಿತು.

‘ಉದಯವಾಣಿ’ ಪತ್ರಿಕೆ ಒಟ್ಟು 15 ದಿನ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು 8,758 ಮಂದಿ ಭಾಗವಹಿಸಿದ್ದು, ಇವರಲ್ಲಿ ಅತೀ ಹೆಚ್ಚು ಸರಿ ಉತ್ತರ ಬರೆದ 375 ಮಂದಿಯಲ್ಲಿ 53 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

ಮಣಿಪಾಲ ಮೀಡಿಯಾ ನೆಟ್ವರ್ಕ್‌ ಲಿ. ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನೋದ್‌ ಕುಮಾರ್‌ ಮಾತನಾಡಿ, ಸುವರ್ಣ ಸಂಭ್ರಮದಲ್ಲಿರುವ ‘ಉದಯವಾಣಿ’ ಓದುಗರ ಜತೆಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಎಂಬ ಇರಾದೆಯಿಂದ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಇದರ ಭಾಗವೆಂಬಂತೆ ವಿಶ್ವಕಪ್‌ ಕುರಿತಾದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿಷ್ಠಿತ ಮಲೈಕಾ ಸಂಸ್ಥೆಯು ಸಹಯೋಗ ನೀಡಿದ್ದು ಸಂತಸದಾಯಕ ಎಂದರು.

ಮಲೈಕಾ ಸಂಸ್ಥೆಯ ಮ್ಯಾನೆಜಿಂಗ್‌ ಡೈರೆಕ್ಟರ್‌ ಗಿಲ್ಬರ್ಟ್‌ ಬ್ಯಾಪ್ಟಿಸ್ಟ್‌ ಮಾತನಾಡಿ, ಹಲವು ವರ್ಷಗಳಿಂದ ಕರಾವಳಿ ಮತ್ತು ವಿವಿಧ ಭಾಗಗಳಲ್ಲಿ ಮಲೈಕಾ ಸಂಸ್ಥೆಯು ಗ್ರಾಹಕ ಸ್ನೇಹಿ ವಾತಾವರಣವನ್ನು ನಿರ್ಮಿಸಿದೆ. ಮಲೈಕಾ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಗ್ರಾಹಕರ ಸ್ಪಂದನೆ ಅತ್ಯುತ್ತಮವಾಗಿದೆ. ಈಗ ಪ್ರತಿಷ್ಠಿತ ‘ಉದಯವಾಣಿ’ಯು ಸ್ಪರ್ಧೆಗೆ ಸಹಯೋಗ ನೀಡಲು ಒಪ್ಪಿದ್ದು ನಮ್ಮೆಲ್ಲರಿಗೆ ಸಂತಸ ತಂದಿದೆ ಎಂದರು.

Advertisement

ಮಲೈಕಾದ ಆಪರೇಷನ್ಸ್‌ ಹೆಡ್‌ ರೀನಾ ಜೋಷ್‌, ‘ಉದಯವಾಣಿ’ ಸಂಪಾದಕ ಅರವಿಂದ ನಾವಡ ಉಪಸ್ಥಿತರಿದ್ದರು. ‘ಉದಯವಾಣಿ’ ಮಂಗಳೂರು ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಸ್ವಾಗತಿಸಿ ಡೆಪ್ಯುಟಿ ಮೆನೇಜರ್‌ ರವೀಶ್‌ ಕೆ. ವಂದಿಸಿದರು. ದಿನೇಶ್‌ ಇರಾ ನಿರೂಪಿಸಿದರು.

ಪ್ರೋತ್ಸಾಹಕರ ಬಹುಮಾನ ವಿಜೇತರು
ಪುಷ್ಪಾವತಿ ಕೆ.ವಿ. ಪೆರಾಜೆ ಮಡಿಕೇರಿ, ಗೀತಾ ಟಿ. ಮಾಧುರ್ಯಾ, ಬೊಳುವಾರು ಪುತ್ತೂರು, ರಾಜೇಶ್‌ ಪೂಜಾರಿ ಹೆಮ್ಮಾಡಿ ಕುಂದಾಪುರ, ಅಬ್ದುಲ್ ಸಲಾಂ ಸೂರಿಂಜೆ ಕಾಟಿಪಳ್ಳ, ಕೆ. ಮಂಜುನಾಥ ಭಂಡಾರಿ ಕುಂದಾಪುರ, ಕ್ಲೋಡಿ ಫೆರ್ನಾಂಡಿಸ್‌, ಸಂಪಿಗೆ, ಮೂಡಬಿದಿರೆ, ನಿಶಾಂತ್‌ರಾಜ್‌ ಕಾರ್ನಾಡು ಮೂಲ್ಕಿ, ದೇವರಾಜ್‌ ಶೆಟ್ಟಿ ವಾಮಂಜೂರು, ಶೈಲಜಾ ಪಿ. ಕಿಣಿ ಕೂಳೂರು, ನಳಿನಿ ಎ. ಕುಂದರ್‌ ಕೋಡಿಬೆಂಗ್ರೆ ಉಡುಪಿ, ರಾಮಚಂದ್ರ ಭಟ್ ಈದು ಕಾರ್ಕಳ, ನೋಯೆಲ್ ಅರಾನ್ಹ ಮೂಡುಬೆಳ್ಳೆ, ಶ್ಯಾಮ್‌ರಾಜ್‌ ಇಂದಿರಾನಗರ ಬ್ರಹ್ಮಾವರ, ರಮಾನಾಥ ಡಿ. ಪ್ರಭು ಉಡುಪಿ, ಫಾತಿಮಾ ತಫ್ರಿಜಾ ಮಂಚಿ ಕೈಯೂರು, ನವಾಜ್‌ ಶರೀಫ್‌ ಬದ್ಯಾರ್‌ ದೇರಳಕಟ್ಟೆ, ಜೀವನ್‌ ಎಸ್‌. ಮಚ್ಚಿನ, ಬೆಳ್ತಂಗಡಿ, ವಿಶ್ವನಾಥ ಎಸ್‌. ಬಂಗೇರ ಮಲ್ಲಕೋಡಿ ಕಟೀಲು, ಮನೋಜ್‌ ವಿಷ್ಣುಮೂರ್ತಿ ನಗರ ನಿಟ್ಟೂರು, ಎಸ್‌. ದೇವದಾಸ್‌ ಪದವು ಶಿರ್ವ, ಬಿ. ಪ್ರವೀಣ್‌ ಆನಂದ್‌ ಮೂಲ್ಕಿ, ಶಿವಪ್ರಸಾದ್‌ ಸಿ. ಎಚ್. ಬಡಗನ್ನೂರು ಪುತ್ತೂರು, ಚೇತನ್‌ ಜಿ. ಉಪ್ಪಿನಂಗಡಿ, ಸಮನ್ಯು ಎಂ. ಭಟ್ ಶೆಟ್ಟಿಬೆಟ್ಟು ಪರ್ಕಳ, ಸತೀಶ್‌ ಶೆಟ್ಟಿ ಬಾಲ್ಕಟ್ಟ ಉಡುಪಿ, ಫೈಝಲ್ ಬೋಳಿಯಾರ್‌ ಅಮ್ಮೆಂಬಳ, ಪ್ರಶಾಂತ್‌ ನಾಯಕ್‌ ಕಾರ್ಕಳ, ಶ್ರೀಲಕ್ಷ್ಮೀ ನಾಯಕ್‌ ಹೊಸೂರು ಹೆಬ್ರಿ, ಸುಷ್ಮಾ ಕೊಡಿಯಾಲ್ಬೈಲ್ ಮಂಗಳೂರು, ಹೃಷಿಕೇಶ್‌ ಕೋಮುಂಜೆಮನೆ ಮಾಣಿಲ, ಡಾ| ಎಂ. ಸದಾಶಿವ ಪೋಳ್ನಾಯ ಉಳ್ಳಾಲ, ಕೀರ್ತಿ ಎನ್‌. ಕೋಟ್ಯಾನ್‌ ಬಡಗಬೆಟ್ಟು ಬೈಲೂರು, ಗಣೇಶ್‌ ನಾಯಕ್‌ ಉಡುಪಿ, ಕುಶಾಲಪ್ಪ ಗೌಡ ಕುದ್ಮಾರು, ಗೌತಮ್‌ ಕೋಟೆಕಾರು, ಅಜುಮುದ್ದೀನ್‌ ಕೊಳಂಬೆ, ರೊನಾಲ್ಡ್ ಡಿ’ಸೋಜಾ ಕೋಡಕ್ಕಲ್, ಅಶೋಕ್‌ ಕರ್ಕೇರ ಅಶೋಕನಗರ ಕೋಡಿಕಲ್, ಲೋಕೇಶ್‌ ಸುವರ್ಣ ಹೊಸಬೆಟ್ಟು, ವೆನೆಸ್ಸಾ ನೇಹಾ ಕಾಡಬೆಟ್ಟು ಉಡುಪಿ, ಹರೀಶ್‌ ಪಳ್ಳಿ ಕಾರ್ಕಳ, ಹೇಮಾವತಿ ಎಂ. ಅನಂತನಗರ ಮಣಿಪಾಲ, ರಿತಿಕಾ ಎಸ್‌. ಶೇಟ್ ಕೊಡಿಯಾಲಗುತ್ತು ಮಂಗಳೂರು, ಐಶ್ವರ್ಯ ಪಿ. ರಾವ್‌ ಪಾಂಡೇಶ್ವರ, ಮುಸ್ಕಾನ್‌ ಕದ್ರಿಕಂಬಳ, ಲವೀನ ಪ್ರಶಾಂತ್‌ ಕುಂತಳನಗರ, ಭಾಸ್ಕರ ಮಲ್ಯ ಬಿ. ಮಣ್ಣಗುಡ್ಡ ಮಂಗಳೂರು, ಜನಾರ್ದನ ಪಿ. ಕುಂಭಾಸಿ, ಅಕ್ಷರ ಪ್ರಿಂಟರ್ ಬೆಳ್ತಂಗಡಿ, ಗಿರೀಶ್‌ ಮೊಗವೀರ ಶಿರೂರು.

Advertisement

Udayavani is now on Telegram. Click here to join our channel and stay updated with the latest news.

Next