ಮಂಜೇಶ್ವರ: ಉದ್ಯಾವರ ಗುಡ್ಡೆ ಸರಕಾರಿ ಪ್ರೌಢ ಶಾಲೆಗೆ ಕಾಸರ ಗೋಡು ಜಿ. ಪಂ. ವತಿಯಿಂದ ನೂತನವಾಗಿ ನಿರ್ಮಿಸಿದ ಹೆಣ್ಮಕ್ಕಳ ವಿಶ್ರಾಂತಿ ಕೊಠಡಿಯನ್ನು ಜಿ.ಪಂ. ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು.
2018-19ನೇ ಜಿಲ್ಲಾ ಪಂಚಾಯತ್ ವಾರ್ಷಿಕ ಯೋಜನೆಯ ಭಾಗವಾಗಿ ಶಾಲೆಯ ಹೆಣ್ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆಯನ್ನೊಳಗೊಂಡ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಜಿ.ಸಿ. ಬಶೀರ್ ಮಕ್ಕಳ ವಿದ್ಯಾ ಭ್ಯಾಸದ ಪ್ರಗತಿಗಾಗಿ ಭೌತಿಕ ಸೌಕರ್ಯ ಗಳನ್ನು ನೀಡುವ ಪ್ರಯತ್ನ ಮಾಡುವುದರ ಜತೆಗೆ ಜಿಲ್ಲಾ ಪಂಚಾಯತ್ ವತಿಯಿಂದ ಸೋಲಾರ್ ಪ್ಯಾನಲ್ ಅಳವಡಿಸುವುದಕ್ಕೆ ಅನುದಾನ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವಹಿಸಿದ್ದರು.
ಉದ್ಯಾವರ ಶಾಲೆಯಲ್ಲಿ ಮುಖ್ಯೋ ಪಾಧ್ಯಾಯರಾಗಿದ್ದು ಪ್ರಸ್ತುತ ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ., ಕಾಸರಗೋಡು ಜಿಲ್ಲಾ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರ್, ನಿವೃತ್ತ ಮುಖ್ಯೋಪಾಧ್ಯಾಯ ಪಾಂಡು ರಂಗ ಎಚ್. ಕಾರ್ಯಕ್ರಮಕ್ಕೆ ಶುಭ ಹಾರೈಸಿ ದರು. ಪಿ.ಇ.ಸಿ. ಕಾರ್ಯ ದರ್ಶಿ ಭಾಸ್ಕರ ಶೆಟ್ಟಿಗಾರ್, ಪಿಟಿಎ ಅಧ್ಯಕ್ಷ ಅಬ್ದುಲ್ ರಝಾಕ್, ಯುಸುಫ್ ಜಮಾಲ್, ಹಂಝ ಸಭೆಯಲ್ಲಿಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಉದಯಕುಮಾರಿ ಪ್ರಾಸ್ತಾವಿಕ ನುಡಿ ಗಳೊಂದಿಗೆ ಸ್ವಾಗತಿಸಿದರು. ಸ್ಟಾಫ್ ಸೆಕ್ರೆಟರಿ ರಾಜೇಶ್ ವಂದಿಸಿದರು. ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.