Advertisement

ಉದ್ಯಾವರ: ರಸ್ತೆಗೆ ಬಿದ್ದ ಸಮುದ್ರದ ಮರಳು ತೆರವು

10:52 AM Jun 20, 2019 | Team Udayavani |

ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಕರೆ, ಕನಕೋಡ ಭಾಗದಲ್ಲಿ ಕಳೆದ ಕೆಲ ದಿನಗಳಲ್ಲಿ ನಿರಂತರವಾಗಿದ್ದ ಕಡಲ ತೆರೆಗಳ ಅಬ್ಬರದಿಂದ ಸಮುದ್ರದ ಅಲೆಗಳೊಂದಿಗೆ ರಸ್ತೆಯು ಮರಳಿನಿಂದಾವ್ರತಗೊಂಡಿತ್ತು.

Advertisement

ಸದಾ ವಾಹನ ದಟ್ಟಣೆಯಿಂದ ಕೂಡಿರುವ ಕೈಪುಂಜಾಲು-ಮಟ್ಟು-ಮಲ್ಪೆ ಸಂಪರ್ಕದ ಪ್ರಮುಖ ರಸ್ತೆ ಇದಾಗಿದೆ. ನಿಗದಿತ ಸಮಯದ ಅಂತರದಲ್ಲಿ ಸರಕಾರಿ ಬಸ್ಸುಗಳ ಓಡಾಟವೂ ಈ ರಸ್ತೆಯಲ್ಲಿದೆ. ಮಲ್ಪೆಗೆ ಅತೀ ಹತ್ತಿರದ ಸಂಪರ್ಕ ರಸ್ತೆ ಇದಾಗಿದ್ದು ಸ್ಥಳೀಯವಾಗಿ ಹೆಚ್ಚಿನ ಮಂದಿ ಈ ರಸ್ತೆಯನ್ನೇ ಅವಲಂಬಿತರಾಗಿರುತ್ತಾರೆ.

ಅಂತಹ ಪ್ರಮುಖ ರಸ್ತೆಯು ಕಡಲಬ್ಬರದ ಸಂದರ್ಭ ಮರಳಿನಿಂದಾವೃತ ಗೊಂಡಿದ್ದು, ರಸ್ತೆಯಲ್ಲಿ ವಾಹನಗಳ ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ತುಸು ಕಷ್ಟ ಪಡಬೇಕಿತ್ತು.

ಇದನ್ನು ಮನಗಂಡ ಉದ್ಯಾವರ ಗ್ರಾಮ ಪಂಚಾಯತ್‌ ಸ್ಥಳೀಯರ ಕೋರಿಕೆಯ ಮೇರೆಗೆ ರಸ್ತೆಯ ಮೇಲೇರಿದ್ದ ಮರಳಿನ ರಾಶಿಯನ್ನು ತೆರವುಗೊಳಿಸುವ ಕೆಲಸವನ್ನು ನಡೆಸುತ್ತಿದೆ. ಆ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next