ಮಣಿಪಾಲ: ಉದಯವಾಣಿಯು ವಿದ್ಯಾರ್ಥಿಗಳಲ್ಲಿ ಪತ್ರಿಕೋದ್ಯಮದ ಬಗೆಗಿನ ಆಸಕ್ತಿ ಮತ್ತು ಕೌಶಲವನ್ನು ಹೆಚ್ಚಿಸಲು ಮಣಿಪಾಲ ಆವೃತ್ತಿಯಲ್ಲಿ ಈ ಹಿಂದೆ ಆರಂಭಿಸಿದ್ದ “ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆ -2022′ ಯನ್ನು ಕೋವಿಡ್ ಅನಂತರ ಪುನಾರರಂಭಿಸುತ್ತಿದೆ.
ಜನವರಿ ತಿಂಗಳ ಎರಡನೇ ವಾರದಲ್ಲಿ ಯೋಜನೆ ಕಾರ್ಯಾರಂಭ ಮಾಡಲಿದೆ. ಆಸಕ್ತ ಪದವಿ ಮೊದಲ, ದ್ವಿತೀಯ ಹಾಗೂ ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು.
ಪತ್ರಿಕೋದ್ಯಮದ ಕುರಿತು ಮಾಹಿತಿ, ಪುನರ್ ಮನನ ಶಿಬಿರ, ಪ್ರಾಯೋಗಿಕ ಕೌಶಲಗಳನ್ನು ರೆಗ್ಯುಲರ್ ಶಿಕ್ಷಣದೊಂದಿಗೆ ಕಲಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲದವರೂ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಉಳ್ಳವರೂ ಇದರಲ್ಲಿ ಭಾಗವಹಿಸಬಹುದು. ವಾರದಲ್ಲಿ ಕನಿಷ್ಠ ನಾಲ್ಕು ಗಂಟೆ ಇದಕ್ಕಾಗಿ ತೊಡಗಿಸುವುದು, ನಿತ್ಯದ ಘಟನೆಗಳನ್ನು ಅನುಸರಿಸುವ, ವರದಿ ಮಾಡಲು ಮತ್ತು ಓದಲು ಆಸಕ್ತಿ ಇರುವವರು ಇದಕ್ಕೆ ಡಿ. 31ರೊಳಗೆ ಅರ್ಜಿ ಸಲ್ಲಿಸಬಹುದು. ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಯಾದವರಿಗೆ ತರಬೇತಿ ಪ್ರಮಾಣ ಪತ್ರ ದೊರಕಲಿದೆ.
ನಿಮ್ಮ ಹೆಸರು, ಓದುತ್ತಿರುವ ಪದವಿ ಮತ್ತು ಕೋರ್ಸ್ ಹೆಸರು, ಕಾಲೇಜು ಹೆಸರು, ಸಂಪರ್ಕ ಸಂಖ್ಯೆಯನ್ನು 76187 74529ಗೆ ಕಳುಹಿಸಬಹುದು. ನಿಗದಿತ ದಿನಾಂಕದ ಬಳಿಕ ಅರ್ಜಿಗಳನ್ನು ಪರಿಶೀಲಿಸಿ, ನೀವು ಆಯ್ಕೆಯಾಗಿದ್ದರೆ ಮಾಹಿತಿ ತಿಳಿಸಲಾಗುವುದು.