Advertisement

Udayavani ವಿಶೇಷ ಪುರವಣಿ ಕಲ್ಯಾಣವಾಣಿ ಬಿಡುಗಡೆ

11:04 PM Sep 17, 2023 | Team Udayavani |

ಭಾಲ್ಕಿ: ಕಲ್ಯಾಣ ಕರ್ನಾಟಕದ ಇತಿಹಾಸವನ್ನು ಜನಮನಕ್ಕೆ ತಿಳಿಸುವ ನಿಟ್ಟಿನಲ್ಲಿ, ಪ್ರತಿವರ್ಷ ಉದಯವಾಣಿ ಪತ್ರಿಕೆಯೊಂದಿಗೆ ಕಲ್ಯಾಣವಾಣಿ ಪುಸ್ತಕ ಪ್ರಕಟಣೆ ಮಾಡಿ ಪತ್ರಿಕೆಯೊಂದಿಗೆ ಉಚಿತವಾಗಿ ಪುಸ್ತಕ ನೀಡುತ್ತಿರುವ ಉದಯವಾಣಿ ಪತ್ರಿಕೆಯ ಕಾಳಜಿ ಮೆಚ್ಚುವಂತಹದ್ದಾಗಿದೆ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರೆ ಹೇಳಿದರು.

Advertisement

ಪಟ್ಟಣದ ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ರವಿವಾರ ಸರ್ದಾರ ವಲ್ಲಭಭಾಯಿ ಪಟೇಲ ಮೂರ್ತಿ ಅನಾವರಣ ಸಮಿತಿಯ ವತಿಯಿಂದ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ, ಕಲ್ಯಾಣ ವಾಣಿ ವಿಶೇಷ ಪುರವಣಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪ್ರತಿವರ್ಷ ಕಲ್ಯಾಣವಾಣಿ ಪುರವಣಿಯು ತುಂಬಾ ಅಚ್ಚುಕಟ್ಟಾಗಿ ಮೂಡಿ ಬರುತ್ತಲಿದೆ. ಉದಯವಾಣಿ ಪತ್ರಿಕೆಯು ಒಂದೊಂದು ವರ್ಷ, ಒಂದೊಂದು ವಿಷಯವನ್ನು ಪ್ರಧಾನವಾಗಿಟ್ಟುಕೊಂಡು, ಕಲ್ಯಾಣವಾಣಿ ಎನ್ನುವ ಪುರವಣಿಯ ಮೂಲಕ ಈ ಭಾಗದ ಸಂಪೂರ್ಣ ಚಿತ್ರಣವನ್ನು ಜನಮನಕ್ಕೆ ತಿಳಿಸುವ ಕಾರ್ಯ ಮಾಡುತ್ತಲಿದೆ. ಪ್ರತಿ ಲೇಖನಗಳೂ ವಸ್ತುನಿಷ್ಠವಾದ ಲೇಖನಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಸರ್ದಾರಪಟೇಲ ಮೂರ್ತಿ ಅನಾವರಣ ಸಮಿತಿಯ ಓಂಪ್ರಕಾಶ ರೊಟ್ಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಜಯಮಾಲಾ ವಗ್ಗೆ, ಬಿಆರ್‍ಪಿ ಶಕುಂತಲಾ ಸಾಲಮನಿ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಸತೀಶಕುಮಾರ ಸಂಗನ್, ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿ ಶ್ರೀನಿವಾಸ ಬಾಲವಾಲೆ, ಕನ್ನಡಪರ ಸಂಘಟನೆಯ ಮಳಸಕಾಂತ ವಾಘೆ, ಸಂತೋಷ ಬಿಜಿಪಾಟೀಲ, ಉದ್ಯಮಿ ಸೋಮನಾಥಪ್ಪ ಅಷ್ಟೂರೆ, ಶರಣ ಸಾಹಿತ್ಯ ಪರಿಷತ್‍ನ ಗುಂಡಪ್ಪ ಸಂಗಮಕರ, ವಿಶ್ವನಾಥ ಬಳಕಟ್ಟೆ, ಪತ್ರಕರ್ತ ಜಯರಾಜ ದಾಬಶೆಟ್ಟಿ, ಐಜಿಕ ಬಂಗಾರೆ, ಓಂಕಾರ ಮಜಕೂರಿ, ಸಂಜೀವಕುಮಾರ ನಾವದಗಿ, ದೀಪಕ ಥಮಕೆ, ಭದ್ರೇಶ ಸ್ವಾಮಿ, ರಾಜಕುಮಾರ
ಬಾವುಗೆ, ಮುಖ್ಯಗುರು ಶಿವಕುಮಾರ ಮೇತ್ರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next