Advertisement

ಗಣೇಶ ಮೂರ್ತಿ ತಯಾರಕರ ಬದುಕು ಬೀದಿಗೆ

06:16 PM Sep 08, 2021 | Shreeraj Acharya |

ಶಿವಮೊಗ್ಗ : ಈ ಬಾರಿ ಗಣಪತಿ ಮೂರ್ತಿ ತಯಾರಿಸುವ ಕಲಾವಿದರ ಬಾಳು ಬೀದಿಗೆ ಬಿದ್ದಿದೆ. ಸರ್ಕಾರದ ವಿಳಂಬ ನೀತಿಯಿಂದಾಗಿ ಬೇಡಿಕೆ ಕುಗ್ಗಿದೆ ಎಂದು ಮೂರ್ತಿ ತಯಾರಕರು ಅಳಲು ತೋಡಿಕೊಂಡಿದ್ದಾರೆ. 2019 ರಲ್ಲಿ ಕೋವಿಡ್‌ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ರೂ. ನಷ್ಟವುಂಟಾಗಿತ್ತು.

Advertisement

ಮಹಾನಗರ ಪಾಲಿಕೆಯಿಂದ ಅಲ್ಪ ಸ್ವಲ್ಪ ನೆರವು ಬಿಟ್ಟರೆ ನಮಗೇನೂ ಪರಿಹಾರ ದೊರೆತಿಲ್ಲ.ಈಬಾರಿ ಸರ್ಕಾರ ವಿಳಂಬವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ದೊಡ್ಡ ಗಾತ್ರದ ಗಣಪತಿ ಬದಲಿಗೆ ಸಣ್ಣ ಗಾತ್ರದ ಗಣಪತಿ ಇಡಲು ಅವಕಾಶ ನೀಡಿದೆ. ಆದರೆ, ಸರ್ಕಾರದ ಷರತ್ತುಬದ್ಧ ಅನುಮತಿ ಗಣೇಶೋತ್ಸವ ಆಚರಣೆಗೆ ಹಿನ್ನಡೆಯಾಗಿದೆ.

ಸಣ್ಣ ಮೂರ್ತಿಗಳಿಗಷ್ಟೇ ಬೇಡಿಕೆ ಇದ್ದು ಗಣೇಶ ಹಬ್ಬದ ಉತ್ಸಾಹ ಕಂಡು ಬರುತ್ತಿಲ್ಲ. ಪ್ರತಿ ವರ್ಷ ಮೂರು ತಿಂಗಳ ಹಿಂದೆಯೇ ನಾವು ಮೂರ್ತಿ ರಚಿಸಲು ಸಿದ್ಧತೆ ನಡೆಸುತ್ತಿದ್ದೆವು. ಈ ಬಾರಿ ಸಣ್ಣ ಗಾತ್ರದ ಗಣಪತಿ ಕೂಡ ಕಡಿಮೆ ಸಂಖ್ಯೆಯಲ್ಲಿ ಮಾಡಿದ್ದರಿಂದ ತುಂಬಾ ನಷ್ಟವಾಗಿದೆ ಎಂದರು.

ಇದನ್ನೂ ಓದಿ : ಬೆಂಗಳೂರು ವಿಶೇಷ ಕೋರ್ಟ್ ಆದೇಶದಂತೆ ವಿಕೆ ಶಶಿಕಲಾ 100 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಸಾರ್ವಜನಿಕ ಪ್ರದೇಶದಲ್ಲಿ 4 ಅಡಿ, ಹಾಗೂ ಮನೆಯೊಳಗೆ 2 ಅಡಿ ಎತ್ತರ ಮೀರದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಸರ್ಕಾರ ನಿಬಂìಧ ಹೇರಿರುವುದರಿಂದ ಈಗಾಗಲೇ ನಾವು ಕಳೆದ ಎರಡು ತಿಂಗಳಿಂದಲೂ ಸಹ 4 ಅಡಿಗಿಂತಲೂ ಹೆಚ್ಚು ಎತ್ತರದ ಮೂರ್ತಿಗಳನ್ನು ತಯಾರಿಸಿದ್ದು, ಸರ್ಕಾರದ ನಿರ್ಬಂದದಿಂದಾಗಿ ಸಾಕಷ್ಟು ನಷ್ಟು ಉಂಟಾಗಲಿದೆ.

Advertisement

ಮಹಾರಾಷ್ಟ್ರ ಸರ್ಕಾರ ಕಳೆದ 4 ತಿಂಗಳ ಹಿಂದೆಯೇ ನಿಬಂìಧಗಳನ್ನು ಹೇರಿತ್ತು. ಆದರೆ ರಾಜ್ಯ ಸರ್ಕಾರ ಕೇವಲ 5 ದಿನಗಳ ಹಿಂದೆ ನಿರ್ಬಂಧ ಹೇರಿರುವುದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಮೂರ್ತಿ ತಯಾರಕರು ಅಸಮಾಧಾನ ವ್ಯಕ್ತಪಡಿಸಿದರು.  400 ರೂ.ಗಳಿಂದ 30 ಸಾವಿರ ರೂ. ವರೆಗಿನ ಗಣಪತಿ ನಿರ್ಮಾಣಕ್ಕೆ ಬೇಡಿಕೆ ಬರುತ್ತಿತ್ತು. ದೊಡ್ಡ ಮೂರ್ತಿಗಳು ಮಾರಾಟವಾದರೆ ಮಾತ್ರ ನಮಗೆ ಆದಾಯ. ಸಣ್ಣ ಗಣಪತಿ ಮೂರ್ತಿಗಳ ಮಾರಾಟದಿಂದ ಆದಾಯ ಕಡಿಮೆ. ಅದರಲ್ಲೂ ಹೊರ ಊರಿನ ವ್ಯಾಪಾರಿಗಳು ಲಗ್ಗೆ ಇಟ್ಟಿದ್ದು, ನಿಯಮ ಬಾಹಿರವಾದ ಪ್ಲಾಸ್ಟರ್ ಆಫ್‌ ಪ್ಯಾರಿಸ್‌ ಗಣಪತಿಯನ್ನು ಕಡಿಮೆ ದರದಲ್ಲಿ ಕೊಡುತ್ತಿದ್ದಾರೆ.

ಸರ್ಕಾರ ಕೂಡಲೇ ಗಮನಹರಿಸಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ಕಲಾವಿದರ ‌ ಬದುಕಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಕುಂಬಾರಗುಂಡಿಯ ಗಣೇಶ ಮೂರ್ತಿ ತಯಾರಕರಾದ ಮನೋಜ್‌, ಗಣೇಶ್ , ರಾಜಣ್ಣ, ಮಂಜುನಾಥ್‌, ಶಾಂತರಾಜ್‌ ಮತ್ತು ಅವರ ಕುಟುಂಬದವರು ಮನವಿ ಮಾಡಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ, ಮೆರವಣಿಗೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನಿರ್ಬಂಧ ಇರುವುದರಿಂದ ಡೊಳ್ಳು, ಆರ್ಕೆಸ್ಟ್ರಾ ಸೇರಿ ವಿವಿಧ ಕಲಾತಂಡಗಳು, ಪೆಂಡಾಲ್‌ ನಿರ್ಮಿಸುವವರು, ವಿದ್ಯುತ್ ‌ ದೀಪಾಲಂಕಾರ, ತಿಂಡಿ ತಿನಿಸು ಮಾರಾಟಗಾರರು ಮೊದಲಾದವರಿಗೆ ಸಂಕಷ್ಟದ ಹೊತ್ತಲ್ಲೇ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ : ರೈತರ ಹಿತಕಾಪಾಡುವುದೇ ನನ್ನಉದ್ದೇಶ: ಮಾಜಿ ಶಾಸಕ ಬಾಲಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next