Advertisement

ನಿರುದ್ಯೋಗಿ ಯುವಕರಿಗೆ ಅನ್ಯಾಯ- ಪ್ರತಿಭಟನೆ

06:37 PM Aug 31, 2021 | Shreeraj Acharya |

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಿಂದ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ವತಿಯಿಂದ 2018-19ನೇ ಸಾಲಿನಲ್ಲಿ ಕರೆದಿದ್ದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಅಭ್ಯರ್ಥಿಗಳಿಂದ ಪರಿಕ್ಷಾ  ಶುಲ್ಕ ಪಡೆದಿದ್ದರೂ,ಈವರೆಗೂ ಪರೀಕ್ಷೆ ನಡೆಸದೇ ನಿರುದ್ಯೋಗಿಗಳನ್ನು ಕಾಯಿಸುತ್ತಿರುವುದನ್ನು ಖಂಡಿಸಿದ್ದು, ಕೂಡಲೇ ನಿಗದಿತ ಹುದ್ದೆಗಳಿಗೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು.

Advertisement

ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಖಾಲಿ ಇದ್ದ ಕಿರಿಯ ಸಹಾಯಕರು,ಕ್ಷೇತ್ರಾಧಿಕಾರಿಗಳು, ನಗದು ಗುಮಾಸ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯಲ್ಲಿ ಸುಮಾರು 80 ರಿಂದ 100 ಹುದ್ದೆಗಳು ಖಾಲಿ ಇದ್ದು, ಸುಮಾರು 4 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪ್ರತಿ ಅಭ್ಯರ್ಥಿಯೂ ತಲಾ 924 ರೂ.ಗಳಂತೆ ಪರಿಕ್ಷಾ ಶುಲ್ಕ ಪಾವತಿಸಿದ್ದಾರೆ.

ಹೀಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ: ಆ. 11ರಂದು ಪರೀಕ್ಷೆ ನಡೆಸುವುದಾಗಿ ತಿಳಿಸಿ, ಪರಿಕ್ಷಾ ಪ್ರವೇಶ ಪತ್ರವನ್ನೂ ವಿತರಿಸಲಾಗಿತ್ತು. ಆದರೆ, ಏಕಾಏಕಿ ಕಾರಣಾಂತರದಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ. ಈವರೆಗೂ ಪರೀಕ್ಷೆ ನಡೆಸಿಲ್ಲ ಎಂದು ದೂರಿದರು.

ಇದರಿಂದಾಗಿ ಕಳೆದ 3 ವರ್ಷಗಳಿಂದ ಉದ್ಯೋಗಾಕಾಂಕ್ಷಿಗಳು ಪರಿಕ್ಷಾ ಶುಲ್ಕ ಕಟ್ಟಿದ್ದರೂ ಪರೀಕ್ಷೆ ಬರೆಯಲಾಗದೇ ಪರಿತಪಿಸುತ್ತಿದ್ದಾರೆ. ಈ ಹುದ್ದೆಗಳನೇಮಕಾತಿಯಿಂದಾಗಿಬ್ಯಾಂಕ್‌ಬೊಕ್ಕಸಕ್ಕೆ 46 ಲಕ್ಷಕ್ಕೂಅಧಿಕಹಣ ಬಂದಿದೆ.ಆದರೆ,ಪರೀಕ್ಷೆ ನಡೆಸದೇ ಇರುವುದರಿಂದಾಗಿ ಬಹಳಷ್ಟು ಜನ ವಯೋಮಿತಿ ಮೀರಿ ಪರೀಕ್ಷೆ ಬರೆಯಲು ಅನರ್ಹರಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಈ ಹಿಂದೆಯೂ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಈ ಹುದ್ದೆಗಳ ನೇಮಕಾತಿಯಲ್ಲೂ ಗೋಲ್ಮಾಲ್‌ ನಡೆಯುವ ಸಾಧ್ಯತೆ ಇದೆ. ಪರೀಕ್ಷೆ ನಡೆಸದೇ ಹಿಂಬಾಗಿಲ ಮೂಲಕ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡು, ಹುದ್ದೆಗಳನ್ನು ಮಾರಿಕೊಳ್ಳಲು ಬ್ಯಾಂಕ್‌ ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ ಎಂದು ಆರೋಪಿಸಿದರು. ಕೂಡಲೇ ಬ್ಯಾಂಕ್‌ಆಡಳಿತ ಮಂಡಳಿ ಪರಿಕ್ಷಾ ಶುಲ್ಕ ಪಾವತಿಎ ಲ್ಲಅಭ್ಯರ್ಥಿಗಳಿಗೂಪರೀಕ್ಷೆನಡೆಸಬೇಕು. ಎಲ್ಲ ಹುದ್ದೆಗಳ ನೇಮಕಾತಿಯನ್ನೂ ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿದರು.

Advertisement

.ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಚೇತನ್‌ ಕೆ., ಯುವ ಕಾಂಗ್ರೆಸ್‌ ಮುಖಂಡ ಮಧುಸೂದನ್‌, ಅಲ್ಪಸಂಖ್ಯಾತರ ಮುಖಂಡರಾದ ಮೊಹಮ್ಮದ್‌ ಆರಿಫುಲ್ಲಾ, ಮೊಹಮ್ಮದ್‌ ನಿಹಾಲ್‌, ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ್‌, ಗಿರೀಶ್‌, ಪ್ರಮುಖರಾದಚಿರಂಜೀವಿ ಬಾಬು, ಮುಜೀಬ್‌, ಅಕºರ್‌, ಸುರೇಶ್‌, ಇರ್ಫಾನ್‌ ಖಾನ್‌ ಹಾಗೂ ಬಾಲಾಜಿ, ರವಿ, ವಿಜಯ್‌, ಮಂಜು, ಅಬ್ದುಲ್‌, ಅಂಕುಶ್‌, ಪ್ರಸನ್ನ, ಚಂದ್ರೋಜಿರಾವ್‌, ವಿಕ್ರಂ, ಶಿವು ,ಅನಿಲ್‌ ಆಚಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next