ಶಿರ್ವ : ಇಲ್ಲಿನ ಗ್ರಾ.ಪಂ. ಬಸ್ಸು ತಂಗುದಾಣದಲ್ಲಿ ಸುಮಾರು 90ಸಾವಿರ ರೂ. ವೆಚ್ಚದಲ್ಲಿ ಸೂಡ ದಿ| ಹರಿಣಾಕ್ಷ ಹೆಗ್ಡೆ ಸ್ಮರಣಾರ್ಥ ಅವರ ಪತ್ನಿ ಕುಸುಮಾ ಹರಿಣಾಕ್ಷ ಹೆಗ್ಡೆ ಮತ್ತು ಮಕ್ಕಳು ನಿರ್ಮಿಸಿ ಗ್ರಾ.ಪಂ.ಗೆ ಕೊಡುಗೆಯಾಗಿ ನೀಡಿದ ಹೈಮಾಸ್ಟ್ ದೀಪವನ್ನು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ರವಿವಾರ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿ, ದಾನಿಗಳ ಕೊಡುಗೆಯಿಂದ ಬಸ್ಸು ತಂಗುದಾಣದ ಪರಿಸರ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವಂತೆ ದಾನಿಗಳ ಸಹಕಾರದೊಂದಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ನಡೆದು ಗ್ರಾಮವು ಅಭಿವೃದ್ಧಿ ಪಥದತ್ತ ಮುನ್ನಡೆಯಲಿ ಎಂದು ಹೇಳಿದರು.
ಇದನ್ನೂ ಓದಿ : 75 ನೇ ಸ್ವಾತಂತ್ರ್ಯ : ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ: ಮೋದಿ ಉವಾಚ..!
ಈ ಸಂದರ್ಭದಲ್ಲಿ ದಾನಿ ಕುಸುಮಾ ಹರಿಣಾಕ್ಷ ಹೆಗ್ಡೆ ಅವರನ್ನು ಶಿರ್ವ ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು. ಪಂಚಾಯತ್‌ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್,ಪಂ. ಉಪಾಧ್ಯಕ್ಷೆ ಗ್ರೇಸಿ ಕಾಡೋìಜಾ, ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಜನಾಬ್ ಸಿರಾಜುದ್ದೀನ್ ಝೈನಿ,ಗ್ರಾಮ ಪಂಚಾಯತ್ ಸದಸ್ಯರಾದ ರತನ್ ಶೆಟ್ಟಿ,ಹಸನಬ್ಬ ಶೇಖ್,ಸೂಡ ಮನೋಜ್ ಹೆಗ್ಡೆ,ಜಗದೀಶ ಅರಸ, ಬಬಿತಾ ಅರಸ, ಮಮತಾ ಶೆಟ್ಟಿ,ಶಿವರಾಮ ಶೆಟ್ಟಿ, ಸ್ಟಾನ್ಲಿ ಡಯಾಸ್,ಪರಿಸರದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು,ಶಿರ್ವ ಕಾರು ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು, ಶಿರ್ವ ಆಟೊ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಸಚಿವ ಶ್ರೀರಾಮುಲುರಿಂದ ಧ್ವಜಾರೋಹಣ