Advertisement
ತಾಲೂಕಿನ ಖಂಡಿಕಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸಿರಿವಂತೆ ಸಮೀಪದ ಕೋಗೋಡಿನ ಶ್ರೀಧರ ಭಟ್‌ರಿಗೆ ಆಗಸ್ಟ್ ಮೊದಲ ವಾರ 80,784 ರೂ. ವಿದ್ಯುತ್ ಬಿಲ್ ಬಂದಿತ್ತು. ತಿಂಗಳಿಗೆ ಕೇವಲ 32 ಯೂನಿಟ್ ಸರಾಸರಿ ವೆಚ್ಚ ಮಾಡುತ್ತಾರೆ ಎಂದು ಮೆಸ್ಕಾಂ ಖುದ್ದು ದಾಖಲೆಯಲ್ಲಿ ಹೇಳಿದ್ದರೂ ಮೀಟರ್ ರೀಡರ್‌ನ ಅಲಕ್ಷ್ಯದ ಕಾರಣದಿಂದ 9982 ಯೂನಿಟ್ ಬಳಕೆಯನ್ನು ಲೆಕ್ಕಿಸಿ 80,784 ರೂ. ಬಿಲ್ ಜನರೇಟ್ ಆಗಿತ್ತು.
Related Articles
Advertisement
ಈ ಪ್ರಕರಣದಲ್ಲಿ ಕಳೆದ ಆ. ಮೂರರಂದು ಬಿಲ್ ಜನರೇಟ್ ಆಗಿದೆ. ಆನಂತರದಲ್ಲಿ ಗ್ರಾಹಕನಿಗೆ ಆ. 4 ರಂದು ಗಮನಕ್ಕೆ ಬಂದಿದೆ. ಜನರೇಟ್ ಆಗಿ ಐದು ದಿನಗಳ ನಂತರ, ಮಂಗಳವಾರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರವೇ ಬಿಲ್ ಸರಿಪಡಿಸಲಾಗಿದೆ ಎಂಬ ಅಂಶದತ್ತ ಅವರು ಗಮನ ಸೆಳೆಯುತ್ತಾರೆ. 80 ಸಾವಿರದಷ್ಟು ದೊಡ್ಡ ಮೊತ್ತವಾದುದರಿಂದ ಪತ್ರಿಕೆಗಳಲ್ಲಿ ಇದು ಸುದ್ದಿಯಾಯಿತು.
ಒಂದೊಮ್ಮೆ ನೂರಿನ್ನೂರು ಬರುವ ಜಾಗದಲ್ಲಿ ಎರಡು ಸಾವಿರ ಬಿಲ್ ಆಗಿದ್ದರೆ ಯಾವ ಅಧಿಕಾರಿಯೂ ಬಂದು ಬಿಲ್ ಸರಿಪಡಿಸಿಕೊಡುತ್ತಿರಲಿಲ್ಲ. ನಾವೇ ಕಾರ್ಗಲ್‌ಗೆ ದಿನಗಟ್ಟಲೆ ಸಮಯ, ಹಣ ಖರ್ಚು ಮಾಡಿ ಬಿಲ್ ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕಾಗುತ್ತಿತ್ತು ಎಂದು ರಾಜೇಂದ್ರ ಹೊಸಳ್ಳಿ ಹೇಳುತ್ತಾರೆ.
ಖಂಡಿಕಾ, ಮರತ್ತೂರು ಮೊದಲಾದ ತಾಳಗುಪ್ಪ ಸುತ್ತಮುತ್ತಲಿನ ನೂರಾರು ಗ್ರಾಮಗಳನ್ನು ಮೆಸ್ಕಾಂ ಆಡಳಿತಾತ್ಮಕ ಕಾರಣದಿಂದ ಕಾರ್ಗಲ್ ಉಪವಿಭಾಗಕ್ಕೆ ಸೇರಿಸಿದೆ. ಇದರಿಂದ ಸಾಗರ ಪಟ್ಟಣದಿಂದ ಐದು ಕಿಮೀ ದೂರದ ಖಂಡಿಕಾ, ದೊಂಬೆ ಮೊದಲಾದ ಭಾಗದ ಜನ ಕೂಡ ಬಿಲ್‌ನ್ನು ಮೆಸ್ಕಾಂ ಕೌಂಟರ್‌ನಲ್ಲಿ ಪಾವತಿಸಬೇಕು ಎಂದರೆ 15 ಕಿಮೀ ದೂರದ ತಾಳಗುಪ್ಪಕ್ಕೆ ತೆರಳಬೇಕು. ಈ ಭಾಗದ ಎಲ್ಲ ಜನರು ಸಾಗರ ಪಟ್ಟಣದಲ್ಲಿಯೇ ತಮ್ಮ ಉಳಿದೆಲ್ಲ ವ್ಯವಹಾರ ಮಾಡುತ್ತಾರೆ. ಹೀಗಿರುವಾಗ ಒಂದೊಮ್ಮೆ ಬಿಲ್‌ನಲ್ಲಿ ಮೀಟರ್ ರೀಡರ್ ಅಥವಾ ಇನ್ನಾವುದೇ ಕಾರಣಕ್ಕೆ ಯಡವಟ್ಟು ಆದರೆ ಸುಮಾರು 35 ಕಿಮೀ ದೂರದ ಕಾರ್ಗಲ್‌ನ ಮೆಸ್ಕಾಂ ಕಚೇರಿಗೆ ತೆರಳಬೇಕು.
ಕೊನೆಪಕ್ಷ ಈ ಭಾಗದ ಮೆಸ್ಕಾಂ ಗ್ರಾಹಕರಿಗೆ ಸಮಸ್ಯೆಗಳ ಪರಿಹಾರಕ್ಕೆ ಸಾಗರ ಉಪವಿಭಾಗ ಕಚೇರಿ ವ್ಯಾಪ್ತಿಯಲ್ಲಿ ಒಂದು ಕೌಂಟರ್ ಒದಗಿಸಬೇಕು ಎಂದು ಈ ಭಾಗದ ಮೆಸ್ಕಾಂ ಗ್ರಾಹಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Dandeli: ಹತ್ತು ಹಲವು ಚರ್ಚೆಗೆ ಕಾರಣವಾದ ಅಮಿತ್ ಶಾ, ದೇಶಪಾಂಡೆ ಭೇಟಿ