Advertisement
ಬೋರ್‌ವೆಲ್ ಪಕ್ಕ ಎಂಟು ಅಡಿ ಆಳದ ಗುಂಡಿ ತೋಡಲಾಗಿದ್ದು, ಜಲ್ಲಿ, ಮರಳು, ಇದ್ದಿಲನ್ನು ಕ್ರಮವಾಗಿ ಗುಂಡಿಯಲ್ಲಿ ಹಾಕಲಾಗಿದೆ. ಚಾವಣಿ ನೀರನ್ನು ಒಂದೆಡೆ ಹಿಡಿದಿಟ್ಟು ಪೈಪ್ ಮುಖಾಂತರ ಈ ಗುಂಡಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ನಡುವೆ ನೀರು ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. “ಪ್ರಸ್ತುತ ನೀರಿನ ಅಭಾವ ಎಲ್ಲ ಕಡೆಯೂ ಬಹಳವಾಗಿಯೇ ಇದೆ. ಭವಿಷ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುವ ಮುನ್ನ ನಾವೆಲ್ಲರು ಎಚ್ಚೆತ್ತುಕೊಂಡು ಮಳೆ ನೀರಿಂಗಿಸುವ ವಿಧಾನಕ್ಕೆ ಮುಂದಾಗಬೇಕು. ತತ್‌ಕ್ಷಣಕ್ಕೇ ಅಲ್ಲದಿದ್ದರೂ ಭವಿಷ್ಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲು ಇದು ಕಾರಣವಾಗುತ್ತದೆ’ ಎನ್ನುವುದು ಸುನಿಲ್ ಕುಂದರ್ ಅವರ ಮಾತು.
“ಮನೆಮನೆಗೆ ಮಳೆಕೊಯ್ಲು’ ಅಭಿಯಾನದ ಮುಖಾಂತರ ಉದಯವಾಣಿಯು ಜನರಲ್ಲಿ ಜಲಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪತ್ರಿಕೆಯ ಈ ಅಭಿಯಾನಕ್ಕೆ ಸರಕಾರವೂ ಕೈ ಜೋಡಿಸಿ ಗ್ರಾಮ ಮಟ್ಟದಿಂದಲೇ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಮಳೆಕೊಯ್ಲು ಅಳವಡಿಸಲು ಉತ್ತೇಜನ ನೀಡಬೇಕು.
– ಆಲ್ವಿನ್ ಸೆರಾವೋ, ಪಾಲಡ್ಕ ಸುತ್ಯರ್ಹ ಕೆಲಸ
ಮನೆ ಮನೆಗೆ ಮಳೆ ಕೊಯ್ಲು ಅಭಿಯಾನ ನೀರಿನ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸವನ್ನು ಕರಾವಳಿ ಓದುಗರ ನಾಡಿಮಿಡಿತ ಉದಯವಾಣಿ ಶತದಿನೋತ್ಸವದತ್ತ ಮಾಡಿಕೊಂಡು ಬರುತ್ತಿದೆ. ಇದು ಅಭಿನಂದನೀಯ ಕಾರ್ಯ. ಮಳೆ ಕೊಯ್ಲು ಪ್ರತಿಯೊಂದು ಮನೆಗಳಲ್ಲಿ ಸರಕಾರದ ಇಲಾಖೆಗಳಲ್ಲಿ ಸಾರ್ವಜನಿಕವಾಗಿ ಕಡ್ಡಾಯ ಎಲ್ಲರೂ ತೆರೆದ ಮನಸ್ಸಿನಿಂದ ಜಾಗೃತಿ ಮೂಡಿಸುವ ಕೆಲಸ ಮಾಡ ಬೇಕಾಗಿದೆ. ಮಳೆಕೊಯ್ಲು ಮಾಹಿತಿ ಜನರಿಗೆ ಮನಮುಟ್ಟು ವಂತೆ ಮಾಡಲು ಹೊರಟಿರುವ ಉದಯವಾಣಿ ಇನ್ನೂ ಒಂದಷ್ಟು ಕಾಲ ಮುಂದುವರಿಸಿಕೊಂಡು ಹೋಗಲಿ ಅನ್ನುವುದೇ ಜನಸಾಮಾನ್ಯರ ಆಶಯ.
- ಚಂದ್ರಹಾಸ , ಕೋಟೆಕಾರ್
Related Articles
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ
ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ ಪರಿಸರದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
Advertisement