Advertisement

Udupi ನಗುವಿನೊಂದಿಗೆ ಜೀವನ ಸಂಭ್ರಮಿಸೋಣ : ಡಾ| ಚಿಂತನಾ ರಾಜೇಶ್‌

09:20 PM Nov 22, 2023 | Team Udayavani |

ಉಡುಪಿ: “ನಗು’ ಫೋಟೋ ತೆಗೆಸಿಕೊಳ್ಳಲಷ್ಟೇ ಸೀಮಿತವಾಗದೇ ಜೀವನದ ಪ್ರತಿ ಕ್ಷಣದಲ್ಲೂ ಅದನ್ನು ಅನುಭವಿಸಿ ಬಾಳಬೇಕು ಎಂದು ಕುಂದಾಪುರದ ಎಚ್‌ಎಂಎಂ ಮತ್ತು ವಿಕೆಆರ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಾ| ಚಿಂತನಾ ರಾಜೇಶ್‌ ಹೇಳಿದರು.

Advertisement

“ಉದಯವಾಣಿ’ ನವರಾತ್ರಿ ಸಂದರ್ಭ ಆಯೋಜಿಸಿದ್ದ ನವರೂಪ ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬುಧವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ನಗು ಹಾಗೂ ಸಂಭ್ರಮ ಜತೆಯಾಗಬೇಕು. ಹಿರಿಯರ ಸೂಚನೆಗಳನ್ನು ಪಾಲಿಸಬೇಕು. ಸ್ತ್ರೀ ಅನುಭವಕ್ಕೆ ಮೀರಿದ ವಿಚಾರಗಳನ್ನು ಹಿರಿಯರಿಂದ ಪಡೆದುಕೊಳ್ಳಬೇಕು. ನಗು ಎಂಬುವುದು ಮುಖಕ್ಕೆ ಚೆಂದ. ತಾಳ್ಮೆ, ಕರುಣೆ ನಮ್ಮಲ್ಲಿರಬೇಕು. ನಾವು ಚೆನ್ನಾಗಿದ್ದರಷ್ಟೇ ಇತರರನ್ನು ಚೆನ್ನಾಗಿರಿಸಲು ಸಾಧ್ಯ. ಪೋಷಕಾಂಶವುಳ್ಳ ಆಹಾರ, ಉತ್ತಮ ನಿದ್ದೆ, ಕುಟುಂಬದೊಂದಿಗೆ ಸಮಯ ಕಳೆಯುವುದು ಉತ್ತಮ ಲಕ್ಷಣವಾಗಿದೆ. ನಾವು ನಮ್ಮನ್ನು ಪ್ರೀತಿಸುವ ಜತೆಗೆ ಗೌರವಿಸಬೇಕು. ನಮ್ಮಿಂದ ನಮ್ಮ ಸುತ್ತಲಿನ ವಾತಾವರಣ ಚೆನ್ನಾಗಿರಬೇಕು ಎಂದರು.

ಇಂತಹ ಕಾರ್ಯಕ್ರಮದ ಮೂಲಕ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗುತ್ತದೆ. ಸರಳ ಆಚಾರ-ವಿಚಾರಗಳ ಮೂಲಕ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು. ಮಹಿಳೆ ಇಡೀ ಕುಟುಂಬಕ್ಕೆ ಮಾದರಿಯಾಗಬೇಕು. ಬದುಕನ್ನು ಸಂಭ್ರಮಿಸುವುದಕ್ಕೆ ಒಂದಿಷ್ಟು ಸಮಯಾವಕಾಶ ಮೀಸಲಿರಿಸಬೇಕು ಎಂದವರು ತಿಳಿಸಿದರು.

“ಉದಯವಾಣಿ’ ಉಪಾಧ್ಯಕ್ಷ(ಮ್ಯಾಗಜಿನ್‌ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌) ರಾಮಚಂದ್ರ ಮಿಜಾರು ಪ್ರಸ್ತಾವನೆಗೈದು, ನವರೂಪ ಕಾರ್ಯಕ್ರಮದ ಮೂಲಕ ಕುಟುಂಬ, ನೆರೆಮನೆ, ಜಾತಿ-ಮತ ಮೀರಿ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಇಂತಹ ಅವಕಾಶಗಳ ಮೂಲಕ ಮಹಿಳೆಯರು ಸಶಕ್ತೀಕರಣ ಹೊಂದುವಂತಾಗಬೇಕು. ಜೀವನದಲ್ಲಿ ವಿಭಿನ್ನತೆಗಳನ್ನು ಅಳವಡಿಸಿಕೊಳ್ಳಬೇಕು. ಮಹಿಳೆಯರು ಸಶಕ್ತೀಕರಣದ ಜತೆಗೆ ಮುನ್ನುಗ್ಗುವ ಛಲ ಬರಬೇಕು ಎಂಬ ಉದ್ದೇಶ ಈ ಕಾರ್ಯಕ್ರಮದ್ದು ಎಂದರು.

Advertisement

ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಭಟ್‌ ಕೊಡವೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಪಮುಖ್ಯ ವರದಿಗಾರ ರಾಜು ಖಾರ್ವಿ ಕೊಡೇರಿ ಸ್ವಾಗತಿಸಿದರು. ಹಿರಿಯ ವಾಣಿಜ್ಯ ವರದಿಗಾರ ಎಸ್‌.ಜಿ.ನಾಯ್ಕ್ ಸಿದ್ಧಾಪುರ ನಿರೂಪಿಸಿ, ವಂದಿಸಿದರು.

ಉದಯವಾಣಿ ಹಿರಿಯ ವರದಿಗಾರ ಪುನೀತ್‌ ಸಾಲ್ಯಾನ್‌, ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್‌, ಮಾರುಕಟ್ಟೆ ವಿಭಾಗದ ಎಕ್ಸಿಕ್ಯೂಟೀವ್ಸ್‌ಗಳಾದ ಸಂತೋಷ್‌ ಇಂದ್ರಾಳಿ, ರಾಘವೇಂದ್ರ ಪ್ರಭು, ಮನೀಶ್‌, ರಾಕೇಶ್‌, ಡಿಜಿಟಲ್‌ ಕಂಟೆಂಟ್‌ ವಿಭಾಗದ ಚೀಫ್ ಕಂಟೆಂಟ್‌ ಎಡಿಟರ್‌ ನಾಗೇಂದ್ರ ತ್ರಾಸಿ, ಡಿಜಿಟಲ್‌ ವೀಡಿಯೋ ಕಂಟೆಂಟ್‌ ಕೋ-ಆರ್ಡಿನೇಟರ್‌ ರವಿಕಿರಣ್‌, ಡಿಜಿಟಲ್‌ ಮಾರುಕಟ್ಟೆ ವಿಭಾಗದ ಶ್ರುತಿ ರಾಕೇಶ್‌, ವೀಡಿಯೋ ಕಂಟೆಂಟ್‌ ಡೆವಲಪರ್‌ಗಳಾದ ಆದರ್ಶ ಕೊಡಚಾದ್ರಿ, ಕಿಶನ್‌ ಅಮೀನ್‌ ಸಹಕರಿಸಿದ್ದರು.

ವಿಜೇತರಾದ ಉಡುಪಿಯ ಪ್ರಭಾ ವಿ. ಶೆಣೈ, ಕಾರ್ಕಳದ ಪೂರ್ಣಿಮಾ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಬಹುಮಾನ ವಿಜೇತರು
ಹಳದಿ-ಬೈಲೂರು ಕುಟುಂಬಸ್ಥರು ಉಡುಪಿ, ಬಿಳಿ-ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಭಾಶಿ, ಕೆಂಪು-ಪೂರ್ಣಿಮಾ ತಂಡ ಕಾರ್ಕಳ, ನೀಲಿ-ಪದ್ಮಾವತಿ ಭಜನಾ ಮಂಡಳಿ ಗೋಳಿಯಂಗಡಿ, ಕೇಸರಿ-ಸದಸ್ಯೆಯರು, ಸೋಮೇಶ್ವರ ಮಹಿಳಾ ವೇದಿಕೆ ಬಾರಕೂರು, ಹಸುರು-ಶ್ರೀ ದುರ್ಗಾ ಚೆಂಡೆ ಬಳಗ ಬಂಟಕಲ್ಲು, ಬೂದು-ಜಿಎಸ್‌ಬಿ ಮಹಿಳಾ ಬಳಗ ಎಸ್‌ಎಲ್‌ವಿಟಿ ಉಡುಪಿ, ಗುಲಾಬಿ-ಪಡುಕೇರಿ ಫ್ರೆಂಡ್ಸ್ ಕುಂದಾಪುರ, ನೇರಳೆ-ಸುಶ್ಮಿತಾ ಮತ್ತು ಫ್ರೆಂಡ್ಸ್ ಜೋಡುರಸ್ತೆ.

Advertisement

Udayavani is now on Telegram. Click here to join our channel and stay updated with the latest news.

Next