Advertisement

ಕಾಡಾನೆದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಸಿಬ್ಬಂದಿಗೆ ಗಾಯ

12:30 PM Aug 23, 2021 | Team Udayavani |

ಹುಣಸೂರು : ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸುವ ವೇಳೆ ಹಠಾತ್ ದಾಳಿ ನಡೆಸಲು ಮುಂದಾದ ಕಾಡಾನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕವಾಡಿಯೊಬ್ಬ ಆಯತಪ್ಪಿ ಬಿದ್ದು ಕೈ ಮೂಳೆ ಮುರಿದು ಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಾಗರಹೊಳೆ ಉದ್ಯಾನವನದ ವೀರನಹೊಸಹಳ್ಳಿ ವಲಯದಲ್ಲಿ ನಡೆದಿದೆ.

Advertisement

ಮತ್ತಿಗೋಡು ಆನೆ ಶಿಬಿರದ ಕವಾಡಿ ಇದಾಯತ್‌ ರವರ ಎಡಗೈ ಮೂಳೆ ಮುರಿದಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ :  ಶಿವಮೊಗ್ಗದಲ್ಲಿ ಆರತಿ ಬೆಳಗಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡ ಸಚಿವ ಕೆಎಸ್‌ ಈಶ್ವರಪ್ಪ

ಘಟನೆ ವಿವರ : ಮಾನವ ಮತ್ತು  ವನ್ಯಜೀವಿಗಳ ಸಂಘರ್ಷ ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆಯು ನಾಗರಹೊಳೆ ಉದ್ಯಾನವನದಂಚಿನಲ್ಲಿ ನಿತ್ಯ ಉಪಟಳ ನೀಡುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ನಿಗಾ ಇಡುವ ಸಂಬಂದ ಶನಿವಾರದಂದು ಮತ್ತಿಗೋಡು ಶಿಬಿರದ ಅರ್ಜುನ, ಗೋಪಾಲಸ್ವಾಮಿ, ಭೀಮ, ಶ್ರೀಕಂಠ, ಮಹೇಂದ್ರ, ಸಾಕಾನೆಗಳೊಂದಿಗೆ ಉದ್ಯಾನವನದವೀರನಹೊಸಹಳ್ಳಿ ವಲಯ ವ್ಯಾಪ್ತಿಯದ ಮಂಟಳ್ಳಿ-ತುಪ್ಪದಕೊಳ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಕಾಡಾನೆಯೊಂದು ಕಾಣಿಸಿದೆ.

ತಕ್ಷಣ ಸಾಕಾನೆಗಳ ಸಹಾಯದಿಂದ ಆನೆಗೆ ಅರವಳಿಕೆ ಮದ್ದು ನೀಡಲು ಮುಂದಾಗಿದ್ದ ವೇಳೆ ಕಾಡಾನೆಯು ತಪ್ಪಿಸಿಕೊಂಡು ಸಾಕಾನೆಯ ಕಾವಾಡಿ  ಇದಾಯತ್‌ರ ಮೇಲೆ ಒಮ್ಮೆಲೆ ದಾಳಿ ಮಾಡಲು ಯತ್ನಿಸಿದೆ. ಇದಾಯತ್ ತಪ್ಪಿಸಿಕೊಳ್ಳುವ ಭರದಲ್ಲಿ ಎಡವಿ ಬಿದ್ದು ಗಾಯಗೊಂಡು ಎಡಗೈನ ಮೂಳೆ ಮುರಿದುಕೊಂಡಿದ್ದಾರೆ.

Advertisement

ಸ್ಥಳದಲ್ಲಿದ್ದ ಸಿಬ್ಬಂದಿಗಳು ಜೋರಾಗಿ ಕೂಗಿಕೊಂಡ ಪರಿಣಾಮ ಕಾಡಾನೆ ಗಾಬರಿಗೊಂಡು ವಾಪಾಸ್ಸಾದ್ದರಿಂದ ಅನಾಹುತ ತಪ್ಪಿದೆ. ಗಾಯಗೊಂಡ ಕಾವಾಡಿ ಇದಾಯತ್‌ರನ್ನು ಸಿಬ್ಬಂದಿಗಳು ತಕ್ಷಣವೇ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದ  ವೇಳೆ ಆಕಸ್ಮಿಕವಾಗಿ ಈ ಘಟನೆ ನಡೆದಿದ್ದು,  ಕವಾಡಿ ಇನಾಯತ್‌ರ ಕೈ ಮುರಿದಿದೆ. ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆತಂಕಪಡುವಂತಿಲ್ಲಾ, ಕೊನೆಗೂ ಆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಸಸಿ ನೆಡುವ ಮೂಲಕ ಶಾಲೆ- ಕಾಲೇಜು ಭೌತಿಕ ತರಗತಿ ಪುನಾರಂಭಕ್ಕೆ ಚಾಲನೆ ನೀಡಿದ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next