Advertisement

Udayavani follow-up; ಶುಲ್ಕ ಪಡೆದೂ ಮುದ್ರಿತ ಪುಸ್ತಕ ನೀಡದ ಕರ್ನಾಟಕ ಮುಕ್ತ ವಿವಿ

11:05 PM Jan 03, 2025 | Team Udayavani |

ಉಡುಪಿ: ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಳೆದ ವರ್ಷ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಮುದ್ರಿತ ಪುಸ್ತಕವನ್ನೂ ನೀಡಿಲ್ಲ, ಅದಕ್ಕೆ ಪಡೆದಿದ್ದ ಶುಲ್ಕವನ್ನೂ ಮರಳಿಸಿಲ್ಲ. ಈಗ 2ನೇ ಸೆಮಿಸ್ಟರ್‌ನ ಇನ್ನೊಂದು ಬ್ಯಾಚ್‌ನ ವಿದ್ಯಾರ್ಥಿಗಳು ಜನವರಿ – ಫೆಬ್ರವರಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಅವರಿಗೂ ಮುದ್ರಿತ ಪುಸ್ತಕ ಪ್ರತಿಗಳನ್ನು ತಲುಪಿಸಿಲ್ಲ.

Advertisement

ಮುದ್ರಿತ ಪ್ರತಿಗೆ ಶುಲ್ಕ ಪಾವತಿಸಿ ಯೂ ಮುದ್ರಿತ ಪ್ರತಿ ತಲುಪದ ಅಥವಾ ಸಿಗದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ದಾಖಲಾತಿ ಸಂದ ರ್ಭದಲ್ಲಿ ಶೇ.10ರಷ್ಟು ರಿಯಾಯಿತಿ ನೀಡುವುದಾಗಿ ವಿವಿ ವಿವಿ ತಿಳಿಸಿತ್ತು. ಆದರೆ 2ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮುದ್ರಿತ ಪ್ರತಿ ಇಲ್ಲದೆ ಬರೆದು, ಮೂರನೇ ಸೆಮಿಸ್ಟರ್‌(2ನೇ ವರ್ಷಕ್ಕೆ)ಗೆ ಪ್ರವೇಶ ಪಡೆದಿರುವವರು ಪೂರ್ಣ ಶುಲ್ಕ ಪಾವತಿಸಬೇಕಾಗಿದೆ.

ಆದೇಶವೇ ಬಂದಿಲ್ಲ
ಮುದ್ರಿತ ಪ್ರತಿ ಸಿಗದವರಿಗೆ ದಾಖಲಾತಿ ಸಂದರ್ಭ ಶೇ.10ರಷ್ಟು ಶುಲ್ಕ ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆಯೇ ಹೊರತು ಅಧಿಕೃತ ಆದೇಶ ಪಾದೇಶಿಕ ಕೇಂದ್ರ ಗಳಿಗೆ ತಲುಪಿಲ್ಲ. ವಿದ್ಯಾರ್ಥಿ ಗಳು ಪ್ರಾದೇಶಿಕ ಕೇಂದ್ರದಲ್ಲಿ ವಿಚಾರಿಸಿದರೆ ನಮಗೆ ಯಾವುದೇ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.

ಝೆರಾಕ್ಸ್‌ ಪ್ರತಿಗಳೇ ಗತಿ
ಈಗಾಗಲೇ ಒಂದು ಬ್ಯಾಚ್‌ನ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪುಸ್ತಕ ಇಲ್ಲದೇ ಆ್ಯಪ್‌ ಮೂಲಕ ಪುಸ್ತಕ ಡೌನ್‌ಲೋಡ್‌ ಮಾಡಿ ಝೆರಾಕ್ಸ್‌ ತೆಗೆದು ಅಧ್ಯಯನ ಮಾಡಿದ್ದಾರೆ. ಪುಸ್ತಕದ ಝೆರಾಕ್ಸ್‌ಗೆ 1,000-1,500 ರೂ.ಗಳನ್ನು ಹೆಚ್ಚುವರಿ ಖರ್ಚು ಮಾಡಿದ್ದಾರೆ. ಈಗ ಅದೇ ವಿದ್ಯಾರ್ಥಿಗಳು ಮುಂದಿನ 3ನೇ ಸೆಮಿಸ್ಟರ್‌ಗೂ ಝೆರಾಕ್ಸ್‌ ಪ್ರತಿಯನ್ನೇ ಆಶ್ರಯಿಸಬೇಕಾಗಿದೆ. 2025ರ ಜನವರಿ-ಫೆಬ್ರವರಿಯಲ್ಲಿ 2ನೇ ಸೆಮಿಸ್ಟರ್‌ ಪರೀಕ್ಷೆ ಬರೆಯಲಿರುವವರಿಗೂ ಝೆರಾಕ್ಸ್‌ ಪ್ರತಿಯೇ ಗತಿ ಎಂಬಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next