Advertisement

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಪದಾಧಿಕಾರಿಗಳಿಗೆ ಉದಯವಾಣಿ ಸನ್ಮಾನ

02:21 PM Jun 01, 2022 | Team Udayavani |

ಕನ್ನಡ ಚಿತ್ರರಂಗಕ್ಕೂ “ಉದಯವಾಣಿ’ಗೂ ಅವಿನಾಭಾವ ಸಂಬಂಧ. ಕನ್ನಡ ಚಿತ್ರರಂಗದ ಆಗು-ಹೋಗುಗಳಿಗೆ ಕನ್ನಡಿಯಂತಿರುವ “ಉದಯವಾಣಿ’ ಚಿತ್ರರಂಗದ ಎಲ್ಲ ಸಂಘ-ಸಂಸ್ಥೆಗಳೊಂದಿಗೆ ಅನ್ಯೋನ್ಯವಾದ ಬಾಂಧವ್ಯ, ಒಡನಾಟವನ್ನು ಮೊದಲಿನಿಂದಲೂ ಹೊಂದಿದೆ. ಇದರ ಭಾಗವಾಗಿ, ಇತ್ತೀಚೆಗೆ “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ2022-23ನೇ ಸಾಲಿನ 64ನೇ ವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷ ಭಾ. ಮ ಹರೀಶ್‌ ಮತ್ತುಪದಾಧಿಕಾರಿಗಳನ್ನು “ಉದಯವಾಣಿ’ ಬಳಗದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

Advertisement

ಇದೇ ವೇಳೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್‌,”ಕನ್ನಡ ಚಿತ್ರರಂಗಕ್ಕೂ “ಉದಯವಾಣಿ’ಗೂ ದಶಕಗಳಿಂದಲೂಅವಿನಾಭಾವ ಸಂಬಂಧವಿದೆ. ಚಿತ್ರರಂಗದ ಬೆಳವಣಿಕೆಯಲ್ಲಿ “ಉದಯವಾಣಿ’ಯದ್ದು ಕೂಡಕೊಡುಗೆಯಿದೆ. ಇಂದಿಗೂ ಚಿತ್ರರಂಗವೆಂದರೆ,ಅದರ ಎಲ್ಲ ಆಗು-ಹೋಗುಗಳನ್ನುಪ್ರತಿಬಿಂಬಿಸುವ ಪತ್ರಿಕೆಯಾಗಿ ಚಿತ್ರರಂಗಸ್ನೇಹಿಯಾಗಿ ಗುರುತಿಸಿಕೊಂಡಿದೆ. ಮುಂದೆಯೂ ಈ ನಂಟು ಹೀಗೆ ಮುಂದುವರೆಯಲಿ’ ಎಂದು ಆಶಿಸಿದರು.

ಉಪಾಧ್ಯಕ್ಷ ಜೈ ಜಗದೀಶ್‌ (ನಿರ್ಮಾಪಕರ ವಲಯ) ಮಾತನಾಡಿ, “ಮೊದಲಿನಿಂದಲೂ “ಉದಯವಾಣಿ’ ವಿವಾದಗಳಿಂದ ಹೊರತಾದ ಪತ್ರಿಕೆ. ನೇರ ಸುದ್ದಿ, ನೈಜ ಸುದ್ದಿಗಳಿಂದ ಚಿತ್ರರಂಗಕ್ಕೆ ಅತ್ಯಂತ ಹತ್ತಿರವಾಗಿದೆ’ ಎಂದು ಪತ್ರಿಕೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಗೌರವಕಾರ್ಯದರ್ಶಿ ಸುಂದರ್‌ ರಾಜ್‌ (ನಿರ್ಮಾಪಕರವಲಯ) ಮಾತನಾಡಿ, “ಆರಂಭದಿಂದಲೂ “ಉದಯವಾಣಿ’ ಅದೇ ಗುಟ್ಟಮಟ್ಟ ಮತ್ತುವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡ ಪತ್ರಿಕೆ.ಸುದ್ದಿ, ಮುದ್ರಣ ಎಲ್ಲ ವಿಷಯದಲ್ಲೂ ಅದಕ್ಕೆಒಂದು ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಸಿನಿಮಾರಂಗದಲ್ಲಿ ಪ್ರೇಕ್ಷಕರು, ಚಿತ್ರರಂಗದವರನ್ನು ಸೇರಿಸುವ ಕೆಲಸ”ಉದಯವಾಣಿ’ ಮಾಡುತ್ತಿದೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್‌ (ವಿತರಕರ ವಲಯ), ಗೌರವ ಕಾರ್ಯದರ್ಶಿ ಎಲ್‌. ಸಿ ಕುಶಾಲ್‌ ಗೌಡ (ಪ್ರದರ್ಶಕರ ವಲಯ), ಟಿ. ಪಿ ಸಿದ್ಧರಾಜು (ಖಜಾಂಚಿ) ಚಿತ್ರರಂಗ ಮತ್ತು “ಉದಯವಾಣಿ’ ಒಡನಾಟ, ನಂಟಿನ ಬಗ್ಗೆ ಮಾತನಾಡಿದರು.ಈ ವೇಳೆ “ಉದಯವಾಣಿ’ ಸಿನಿಮಾಮಾರುಕಟ್ಟೆ ವಿಭಾಗದ ಮುಖ್ಯಸ್ಥ ಬಿ.ಕೆ.ಕೃಷ್ಣಪ್ಪ,ಸಿನಿಮಾ ವಿಭಾಗದ ಮುಖ್ಯಸ್ಥ ರವಿಪ್ರಕಾಶ್‌ ರೈ, ಜಿ.ಎಸ್‌.ಕಾರ್ತಿಕ ಸುಧನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next