Advertisement

ವಿಶ್ಲೇಷಣೆ: ಚಳಿಗಾಲದಲ್ಲಿ ಸೇನೆ ನಿಯೋಜನೆ ಪಕ್ಕಾ; ದುಪ್ಪಟ್ಟು ವ್ಯಯಿಸಬೇಕು ಭಾರತ

04:16 PM Sep 17, 2020 | Karthik A |

ಮಣಿಪಾಲ: ಲಡಾಖ್‌ನಲ್ಲಿನ ಉದ್ವಿಗ್ನತೆಯಿಂದ ಉಭಯ ದೇಶಗಳಿಗೂ ಸಂಕಷ್ಟ ಇವೆ. ಹವಾಮಾನಗಳು ಯೋಗ್ಯವಾಗದೇ ಇರುವ ಕಾರಣ ಭಾರತ ಮತ್ತು ಚೀನದ ಯೋಧರು ಗಡಿಯಲ್ಲಿ ಹಿಮದ ಜತೆ ಈ ವರ್ಷದ ಬಹುತೇಕ ಸಮಯಗಳನ್ನು ಕಳೆಯಬೇಕಾಗಿದೆ. ಪ್ರತಿ ವರ್ಷ ಚಳಿಗಾಲದ ಆರಂಭದಲ್ಲಿ ಲಡಾಖ್‌ ಪ್ರಾಂತ್ಯದಲ್ಲಿ ಸಾಮಾನ್ಯವಾಗಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತದೆ. ಆದರೆ ಈ ಬಾರಿ ಅಂತಹ ಯಾವುದೇ ತೀರ್ಮಾನಗಳನ್ನು ಸೇನೆ ಕೈಗೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದೆ.

Advertisement

ಲಡಾಖ್‌ನಲ್ಲಿನ ಹವಾಮಾನ ಸಾಮಾನ್ಯವಾಗಿ ಮೈನಸ್‌ 50 ಡಿಗ್ರಿ ಸೆ.ಗೆ ಇಳಿಯುತ್ತದೆ. ಕೆಲವು ಸಂದರ್ಭ -60ಕ್ಕೆ ಇಳಿದ ಉದಾಹರಣೆಗಳೂ ಸಾಕಷ್ಟು ಇವೆ. ಇಂತಹ ಸಂದರ್ಭ ಹಿಮಪಾತಗಳು ನಡೆಯುವ ಅಪಾಯ ಇರುವ ಕಾರಣ ಸೈನಿಕರನ್ನು ಹಿಂದಕ್ಕೆ ಕರೆದುಕೊಳ್ಳಲಾಗುತ್ತದೆ. ಇದು ಪ್ರತಿವರ್ಷ ನಡೆಯುತ್ತಲೇ ಬಂದಿದೆ. ಆದರೆ ಇದೀಗ 1962ರ ಬಳಿಕ ಇದೇ ಮೊದಲ ಬಾರಿಗೆ ಸೈನಿಕರನ್ನು ಅಲ್ಲೇ ನಿಯೋಜಿಸಲಾಗುವ ಸಾಧ್ಯತೆ ಇದೆ.

  • 19 ಸಾವಿರ ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೇನಾ ಹೊರಠಾಣೆಗಳಲ್ಲಿ ಸೈನಿಕನ ವಾರ್ಷಿಕ ಖರ್ಚು 17 ರಿಂದ 20 ಲಕ್ಷ ರೂ.
  • ಲಡಾಖ್‌ನಲ್ಲಿ ಪ್ರಸ್ತುತ ಇರುವ ಸೈನಿಕರ ಸಂಖ್ಯೆ 1 ಲಕ್ಷದ 10 ಸಾವಿರ
  • ಪ್ರತಿ ವರ್ಷ ಅಕ್ಟೋಬರ್‌ನಲ್ಲಿ 3 ಲಕ್ಷ ಟನ್‌ ಸರಕುಗಳನ್ನು ಲಡಾಖ್‌ಗೆ ತಲುಪಿಸಲಾಗುತ್ತದೆ.

ಕಳೆದ ವರ್ಷದವರೆಗೂ ಭಾರತ ಚಳಿಗಾಲದಲ್ಲಿ ಹೆಚ್ಚಿನ ಪೋಸ್ಟ್‌ಗಳನ್ನು ಖಾಲಿ ಮಾಡುತ್ತಿತ್ತು. ಅಕ್ಟೋಬರ್‌ ಅಂತ್ಯದಿಂದ ಪೋಸ್ಟ್‌ ಅನ್ನು ಖಾಲಿ ಮಾಡುವ ಕೆಲಸವು ಪ್ರಾರಂಭವಾಗುತ್ತಿತ್ತು. ಪ್ರಸ್ತುತ ಚಳಿಗಾಲದಲ್ಲಿ ಪೋಸ್ಟ್‌ಗಳ ನಿಯೋಜನೆಯು ಚೀನದ ಮುಂದಿನ ನಡೆಯ ಮೇಲೆ ನಿಂತಿದೆ. ಸದ್ಯದ ವಾತಾವರಣ ಹೀಗೆ ಮುಂದುವರೆದರೆ ವಿವಾದ ಸುಖಾಂತ್ಯ ಕಾಣುವುದು ಅಸಾಧ್ಯವೆಂದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಚಳಿಗಾಲ ಪೂರ್ತಿ ಸೈನಿಕರನ್ನು ಅಲ್ಲೇ ನಿಯೋಜನೆ ಮಾಡಲಾಗುತ್ತದೆ. ಇದಕ್ಕಾಗಿ ಸರಕಾರ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹೆಚ್ಚಿನ ಸೈನಿಕರನ್ನೂ ಅಲ್ಲಿ ನಿಯೋಜನೆ ಮಾಡಬೇಕಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯು ಸೇನೆ ಮುಂದಿನ ದಿನಗಳಿಗೆ ಬೇಕಾಗುವಷ್ಟು ಪಡಿತರವನ್ನು ಲಡಾಖ್‌ನಲ್ಲಿ ಸಂಗ್ರಹಿಸಿದೆ.

  • ಈ ಬಾರಿ ಯುದ್ಧದ ಕಾರ್ಮೋಡವಿರುವ ಕಾರಣ ಡಬಲ್‌ ಸ್ಟಾಕ್‌ ಅನಿವಾರ್ಯತೆ.
  • 150 ಲಾರಿಗಳಲ್ಲಿ ಪಡಿತರ, ವೈದ್ಯಕೀಯ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಬಟ್ಟೆ, ಬಂಡಿಗಳು ಮತ್ತು ಎಲೆಕ್ಟ್ರಾನಿಕ್‌ ಉಪಕರಣ.
  • ಚಳಿಗಾಲದಲ್ಲಿ ತಾಪಮಾನವು ಮೈನಸ್‌ 50 ಡಿಗ್ರಿಗಳಿಗೆ ತಲುಪುತ್ತದೆ.

ಒಂದು ಸೈನಿಕನಿಗೆ 20 ಲಕ್ಷ ರೂಪಾಯಿ
ಲಡಾಖ್‌ನ ಸೇನೆಯ 14ನೇ ದಳದಲ್ಲಿ 75 ಸಾವಿರ ಸೈನಿಕರಿದ್ದಾರೆ. ಈ ಬಾರಿ ಹೆಚ್ಚುವರಿಯಾಗಿ 35 ಸಾವಿರ ಸೈನಿಕರನ್ನು ಅಲ್ಲಿಗೆ ಕಳುಹಿಸಲಾಗಿದೆ. ಹೀಗಾಗಿ ಈಗ ಅಲ್ಲಿರುವ ಒಟ್ಟು ಸೈನಿಕರ ಸಂಖ್ಯೆ 1.10 ಲಕ್ಷ (ಒಂದು ಲಕ್ಷದ ಹತ್ತು ಸಾವಿರ). 15 ಸಾವಿರದಿಂದ 19 ಸಾವಿರ ಅಡಿಗಳ ವರೆಗೆ ನಿರ್ಮಿಸಲಾದ ಸೈನ್ಯದ ಚೆಕ್‌ಪಾಯಿಂಟ್‌ನಲ್ಲಿನ ಓರ್ವ ಸೈನಿಕನಿಗಾಗಿ ಸೇನೆ ವಾರ್ಷಿಕ 17ರಿಂದ 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿದೆ. ಇದರಲ್ಲಿ ಶಸ್ತ್ರಾಸ್ತ್ರಗಳ ಬೆಲೆ, ಮದ್ದುಗುಂಡುಗಳ ಮೌಲ್ಯವನ್ನು ಒಳಪಡಿಸಲಾಗಿಲ್ಲ. ಇದು ಕೇವಲ ಓರ್ವ ಸೈನಿಕನಿಗಾಗಿ ಖರ್ಚು ಮಾಡುವ ಹಣವಾಗಿದೆ. ನಿಮಗೆ ಮತ್ತೂಂದು ವಿಷಯ ನೆನೆಪಿರಲಿ ವಿಶ್ವದ ಯಾವುದೇ ಸೈನ್ಯವು ಈ ಪ್ರಮಾಣದ ಎತ್ತರದಲ್ಲಿ ಅಷ್ಟುದೊಡ್ಡ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸುವುದಿಲ್ಲ.

Advertisement

ಪ್ರತಿ ವರ್ಷ ಅಕ್ಟೋಬರ್‌ನಲ್ಲಿ 3 ಲಕ್ಷ ಟನ್‌ ಸರಕು
ಅಕ್ಟೋಬರ್‌ ತಿಂಗಳಲ್ಲಿ ಲಡಾಖ್‌ ಅನ್ನು ಸಂಪರ್ಕಿಸುವ ಎರಡೂ ಮಾರ್ಗಗಳಾದ ಜೊಜಿಲಾ ಮತ್ತು ರೋಹಾrಂಗ್‌ ಅನ್ನು ಮುಚ್ಚಲಾಗಿದೆ. ರಸ್ತೆ ಮುಚ್ಚುವ ಮೊದಲು ಪ್ರತಿವರ್ಷ 3 ಲಕ್ಷ ಟನ್‌ ಸರಕುಗಳನ್ನು ಸೈನ್ಯದ ಬಳಕೆಗಾಗಿ ಲಡಾಖ್‌ಗೆ ಸಾಗಿಸಲಾಗುತ್ತದೆ. ಚಳಿಗಾಲಕ್ಕೆ ಮುಂಗಡವಾಗಿ ದಾಸ್ತಾನಿರಿಸಲಾದ ಈ ಸರಕುಗಳಿಂದ ಆರು ತಿಂಗಳು ಸೈನ್ಯವು ಲಡಾಖ್‌ ಪ್ರದೇಶದಲ್ಲಿ ಯಾವುದೇ ಕೊರತೆಯಾಗದಂತೆ ವಾಸಿಸುತ್ತಿದೆ.
ಮಾರ್ಚ್‌ ಮತ್ತು ಅಕ್ಟೋಬರ್‌ ನಡುವೆ, ಸೈನ್ಯವು ಪ್ರತಿದಿನ 150 ಲಾರಿಗಳಲ್ಲಿ ಪಡಿತರ, ವೈದ್ಯಕೀಯ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಬಟ್ಟೆ, ಬಂಡಿಗಳು ಮತ್ತು ಎಲೆಕ್ಟ್ರಾನಿಕ್ಸ್‌ ಅನ್ನು ಲಡಾಖ್‌ಗೆ ಕಳುಹಿಸುತ್ತದೆ. ಇದು ಸೀಮೆಎಣ್ಣೆ, ಡೀಸೆಲ್‌ ಮತ್ತು ಪೆಟ್ರೋಲ್‌ ಅನ್ನು ಸಹ ಹೊಂದಿರುತ್ತದೆ. ಚಳಿಗಾಲದಲ್ಲಿ ಪ್ರತಿ ಜವಾನ್‌ಗೆ ವಿಶೇಷ ಬಟ್ಟೆ ಮತ್ತು ಡೇರೆಗಳಿಗೆ ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಮೂರು-ಪದರದ ಜಾಕೆಟ್‌ಗಳು, ಬೂಟುಗಳು, ಕನ್ನಡಕಗಳು, ಸುರಕ್ಷತೆಯ ಮುಖ ಕವಚಗಳು ಮತ್ತು ಡೇರೆಗಳು ಇದರಲ್ಲಿ ಸೇರಿವೆ.

ಈಗ ಡಬಲ್‌ ಸ್ಟಾಕ್‌ ಅಗತ್ಯ
ಈಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರುವ ಕಾರಣ ಎಲ್ಲ ದಾಸ್ತಾನುಗಳು ಎರಡು ಪಟ್ಟು ಹೆಚ್ಚು ಅಗತ್ಯವಿರುತ್ತದೆ. ಆಗ ಸೈನ್ಯಕ್ಕೆ ಸುಮಾರು ಎರಡು ಪಟ್ಟು ಸ್ಟಾಕ್‌ ಮತ್ತು ಪಡಿತರ ಅಗತ್ಯವಿರುತ್ತದೆ. ಕಾರ್ಗಿಲ್‌ ಬಳಿಯ ಡ್ರಾಸ್‌ ವಿಶ್ವದ ಎರಡನೇ ಅತ್ಯಂತ ಶೀತ ಪ್ರದೇಶವಾಗಿದೆ. ಸೈಬೀರಿಯಾ ಮೊದಲ ಸ್ಥಾನದಲ್ಲಿದೆ. ಚಳಿಗಾಲದಲ್ಲಿ ತಾಪಮಾನವು ಮೈನಸ್‌ 60 ಡಿಗ್ರಿಗಳಿಗೆ ಹೋಗುತ್ತದೆ. ಡ್ರಾಸ್‌ನ ಎತ್ತರ 11 ಸಾವಿರ ಅಡಿ, ಕಾರ್ಗಿಲ್‌ 9 ಸಾವಿರ ಅಡಿ, ಲೇಹ್‌ 11,400 ಅಡಿ ಎತ್ತರ ಹೊಂದಿದೆ. ಸಿಯಾಚಿನ್‌ನ ಎತ್ತರ 17 ಸಾವಿರದಿಂದ 21 ಸಾವಿರ ಅಡಿಗಳವರೆಗೆ ಇರುತ್ತದೆ. ಚೀನದೊಂದಿಗಿನ ನಿಯಂತ್ರಣ ರೇಖೆಯಲ್ಲಿರುವ ದೌಲತ್‌ ಬೇಗ್‌ ಓಲ್ಡಿ (ಡಿಬಿಒ) 17,700 ಅಡಿ ಮತ್ತು ಡೆಮಾcಕ್‌ 14 ಸಾವಿರ ಅಡಿಗಳ ಎತ್ತರದಲ್ಲಿದೆ.

ಕಾಶ್ಮೀರ ಸಂಘರ್ಷದ ಪಾಠ ಭಾರತದ ನೆರವಿಗೆ
ಚೀನ ಗಡಿಯಲ್ಲಿ ಚಳಿಗಾಲದ ಸಂದರ್ಭ ಸೈನಿಕರನ್ನು ಯಾವ ರೀತಿ ನಿಯೋಜನೆ ಮಾಡಲಾಗುತ್ತದೆ ಎಂಬುದು ಉಭಯ ದೇಶಗಳ ನಡುವೆ ನಡೆಯುವ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳ ಮೇಲೆ ನಿರ್ಧಾರವಾಗುತ್ತದೆ. ಹಾಗೆ ನೋಡಿದರೆ ಭಾರತಕ್ಕೆ ಚಳಿಗಾಲದಲ್ಲಿ ಅತೀ ಎತ್ತರದ ಪ್ರದೇಶದಲ್ಲಿ ಸೈನಿಕರನ್ನು ನಿಯೋಜನೆಗೊಳಿಸಿ ಹೆಚ್ಚಿನ ಅನುಭವವಿದೆ. ಪಾಕಿಸ್ಥಾನದೊಂದಿಗಿನ ನಿಯಂತ್ರಣ ರೇಖೆಯಲ್ಲಿ ವರ್ಷ ಪೂರ್ತಿ ಸೈನಿಕರನ್ನು ಭಾರತ ನಿಯೋಜನೆಗೊಳಿಸುತ್ತದೆ. ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿಯೂ ಚಳಿಗಾಲದ ಸಂದರ್ಭವು ತುಂಬಾ ಸವಾಲಿನದ್ದಾಗಿದೆ. ಕಾರ್ಗಿಲ್‌ ಯುದ್ಧ ನಡೆದಾಗ ಭಾರತ ಗಡಿಯನ್ನು ಖಾಲಿ ಮಾಡದೇ ಸೈನಿಕರನ್ನು ನಿಯೋಜಿಸಿತ್ತು. ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಚಳಿಯೂ ಹೆಚ್ಚಿತ್ತು.

ಗಾಲ್ವಾನ್‌ ಘಟನೆಯ ಬಳಿಕ ಎಲ್ಎ‌ಸಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಗಾಲ್ವಾನ್‌ನಲ್ಲಿ 20 ಸೈನಿಕರನ್ನು ಕಳೆದುಕೊಂಡ ಬಳಿಕ ಸೈನ್ಯವು ಚೀನದೊಂದಿಗೆ ‘ರೂಲ್ಸ್ ಆಫ್ ಎಂಗೇಜ್ಮೆಂಟ್‌’ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಮೊದಲು ಚೀನ ಮತ್ತು ಭಾರತದ ಸೈನಿಕರು ಮುಖಾಮುಖೀಯಾಗುತ್ತಿದ್ದರು. ಆದರೆ ಈಗ ಅದನ್ನು ನಿರ್ದಿಷ್ಟ ದೂರ ನಿಗದಿಪಡಿಸಲಾಗಿದೆ.

ವಿಶ್ವದ ಅತೀ ದೊಡ್ಡ ಯುದ್ಧಭೂಮಿ ಸಿಯಾಚಿನ್‌
ಸಿಯಾಚಿನ್‌ನಂತಹ ಎತ್ತರದ ಸ್ಥಳಗಳಲ್ಲಿ ಸೈನ್ಯವನ್ನು ನಿಯೋಜಿಸಿದ ಅನುಭವ ಹೊಂದಿರುವ ಏಕೈಕ ದೇಶ ಭಾರತ. ಚೀನ ಕೂಡ ಇಂತಹ ಅನುಭವ ಹೊಂದಿಲ್ಲ. ಸಿಯಾಚಿನ್‌ನಲ್ಲಿ 1987ರಲ್ಲಿ ದಾಳಿ ನಡೆದಿತ್ತು. ಪಾಕಿಸ್ಥಾನವು ಈ ಸ್ಥಳವನ್ನು ಹಲವು ಬಾರಿ ಆಕ್ರಮಿಸಿಕೊಳ್ಳಲು ಪ್ರಯತ್ನಿಸಿತ್ತು. ಇದರಿಂದ ಪಾಠಗಳನ್ನು ಕಲಿತ ಭಾರತ ಚಳಿಗಾಲದಲ್ಲಿಯೂ ಸಿಯಾಚಿನ್‌ ಪೋಸ್ಟ್‌ ಅನ್ನು ಖಾಲಿ ಮಾಡುವುದನ್ನು ನಿಲ್ಲಿಸಿದೆ. ಸದ್ಯ ಇದೇ ನಡೆ ಲಡಾಖ್‌ಗೆ ಅನ್ವಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next