Advertisement

ಮಕ್ಕಳಿಗೆ “ಉದಯವಾಣಿ’ಶಿಕ್ಷಣ ಮಾರ್ಗದರ್ಶಿ ಸಹಕಾರಿ

06:19 PM Sep 07, 2022 | Team Udayavani |

ರಾಣಿಬೆನ್ನೂರ: ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ 10ನೇ ತರಗತಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿರುವ “ಉದಯವಾಣಿ’ ದಿನಪತ್ರಿಕೆ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಪರೀಕ್ಷೆ ಮುಗಿಯುವವರೆಗೆ ಶಿಕ್ಷಣ ಮಾರ್ಗದರ್ಶಿ ಪ್ರಕಟಿಸುತ್ತಿರುವುದು ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಬಡ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ ಹೇಳಿದರು.

Advertisement

ಮಂಗಳವಾರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ “ಉದಯವಾಣಿ’ ದಿನಪತ್ರಿಕೆಯ ಶಿಕ್ಷಣ ಮಾರ್ಗದರ್ಶಿ ಪತ್ರಿಕೆಗಳನ್ನು 30 ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದಲ್ಲಿ “ಉದಯವಾಣಿ’ ಪತ್ರಿಕೆ ಮತ್ತು ಪತ್ರಿಕೆ ದಾನಿಗಗಳ ಶ್ರಮ ಸಾರ್ಥಕವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಪ್ರತಿದಿನ ಉದಯವಾಣಿ ಪತ್ರಿಕೆಯ ಶಿಕ್ಷಣ ಮಾರ್ಗದರ್ಶಿಯಲ್ಲಿ ಬರುವ ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರವಿರುವುದರಿಂದ ಶಿಕ್ಷಕರು ಕಲಿಸಿದ ಪ್ರತಿ ವಿಷಯಗಳ ಪಠ್ಯ ಪುಸ್ತಕ ಕೈಗನ್ನಡಿಯಂತಾಗುತ್ತದೆ. ಇದರಿಂದ ಸಾಮಾನ್ಯ ಜ್ಞಾನವುಳ್ಳ ವಿದ್ಯಾರ್ಥಿಗೂ ಸರಳವಾಗಿ ಅರ್ಥವಾಗಲಿದೆ. ಪ್ರತಿದಿನದ ಪತ್ರಿಕೆಯನ್ನು ಸಂಗ್ರಹ ಮಾಡಿಕೊಂಡು ಅಧ್ಯಯನ ಮಾಡಿದಲ್ಲಿ ಜ್ಞಾನ ಭಂಡಾರವೇ ನಿಮ್ಮದಾಗಲಿದೆ ಎಂದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ಹೊರತಂದಿದೆ. ಅವರ ಶ್ರಮ ಸಾರ್ಥಕವಾಗಲು ನಿಮ್ಮ ಅಭ್ಯಾಸದಿಂದ ಮಾತ್ರ ಸಾಧ್ಯ. ಆದಕಾರಣ ಮೊಬೈಲ್‌ ಕೈಬಿಟ್ಟು ಪಠ್ಯಪುಸ್ತಕ ಹಾಗೂ ಉದಯವಾಣಿ ಪತ್ರಿಕೆ ಕೈಯಲ್ಲಿರಲಿ. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಉದಯವಾಣಿ ಪತ್ರಿಕೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

Advertisement

ಉದಯವಾಣಿ ದಿನಪತ್ರಿಕೆಯ ದಾನಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜೆ.ಎಂ. ಮಠದ ಮಾತನಾಡಿ, ಇಂದು ಒತ್ತಡದ ಜೀವನದಲ್ಲಿ ಪಾಲಕರೂ ಸಹ ಮಕ್ಕಳ ಕಡೆಗೆ ಹಚ್ಚಿನ ಗಮನ ಹರಿಸುತ್ತಿಲ್ಲ. ಇದರಿಂದ ಮಕ್ಕಳು ಸಹ ಪಾಲಕರ ಭಯವಿಲ್ಲದೆ ದೂರದರ್ಶನ ಅಥವಾ ಮೊಬೈಲ್‌ನಲ್ಲಿ ಕಾಲಹರಣ ಮಾಡಿ ಅಭ್ಯಾಸದಿಂದ ದೂರ ಉಳಿಯುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯವಿಲ್ಲ. ಶಿಕ್ಷಕರು ಆದಷ್ಟು ಪ್ರತಿದಿನ ನೀತಿ ಪಾಠಗಳ ಮೂಲಕ ಅವರಿಗೆ ನೈತಿಕ ಶಿಕ್ಷಣದ ಜೊತೆಗೆ ಸಂಸ್ಕಾರದ ಶಿಕ್ಷಣ ನೀಡಲು ಮುಂದಾಗಬೇಕೆಂದರು.

ಇದೇ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆ ದಾನಿ ಜೆ.ಎಂ. ಮಠದ, ಎಸ್‌ಡಿಎಂಸಿ ಅಧ್ಯಕ್ಷ ಗೋಣೆಪ್ಪ ದೀಪಾವಳಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ ಅವರನ್ನು ಪಾಲಕರು ಮತ್ತು ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ಲಕ್ಷ ¾ಣ ದೀಪಾವಳಿ, ಶಿಕ್ಷಣ ಪ್ರೇಮಿ ಅಪ್ಪಾಜಿ ಒಡೆಯರ, ಶಂಭುಲಿಂಗಪ್ಪ ಬತ್ತದ, ಮುಖ್ಯೋಪಾಧ್ಯಾಯ ವಿಜಯ ಪೂಜಾರ, ಶಿಕ್ಷಕರ ರವಿ ಪಾಟೀಲ, ಐ.ಎಚ್‌. ಮೈದೂರ, ಪಾಲಕರು ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next