ಮಣಿಪಾಲ: ಉದಯವಾಣಿ ಶಿಕ್ಷಣ ಮಾರ್ಗದರ್ಶಿಯ ವಾರ್ಷಿಕ ವಿದ್ಯಾರ್ಥಿ ವೇತನಕ್ಕೆ 2022-23ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮಂಗಳೂರಿನ ಕೆನರಾ ಪ್ರೌಢಶಾಲೆಯ ಸಿಂಚನಾ (617), ಆವರ್ಸೆ ಸರಕಾರಿ ಪ್ರೌಢಶಾಲೆಯ ಧರಿತ್ರಿ ಕಾಮತ್ (615), ಉಡುಪಿ ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾ ನಾಯಕ್ (618), ಶಕ್ತಿನಗರದ ನಾಲ್ಯಪದವು ಸರಕಾರಿ ಪ್ರೌಢಶಾಲೆಯ ದೀಪಶ್ರೀ (614 ಅಂಕ), ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆಯ ಅನುಕ್ಷಿತಾ (611), ಜಾನುವಾರುಕಟ್ಟೆ ಸರಕಾರಿ ಪ್ರೌಢಶಾಲೆಯ ಚರಿಶ್ಮಾ (610), ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯ ಪೂಜಾ (606), ಉಡುಪಿ ಅನಂತೇಶ್ವರ ಪ್ರೌಢ ಶಾಲೆಯ ವಫಾ (604), ಪುಣಚ ಶ್ರೀದೇವಿ ಪ್ರೌಢಶಾಲೆಯ ಗುರುದೀಪ್ ಎನ್. (590) ಮತ್ತು ಸೂಡ ಸರಕಾರಿ ಪ್ರೌಢಶಾಲೆಯ ನಿರೀಕ್ಷಾ (573) ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿ ವೇತನಕ್ಕೆ 250ಕ್ಕೂ ಅಧಿಕ ಮಂದಿ ಅರ್ಹ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರವೇಶಪತ್ರಗಳನ್ನು ಕಳುಹಿಸಿದ್ದರು. ವಿದ್ಯಾರ್ಥಿ ವೇತನವು ತಲಾ ರೂ. 2,500 ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಉದಯವಾಣಿ ಶಿಕ್ಷಣ ಮಾರ್ಗದರ್ಶಿಯ ಎಲ್ಲ ಪುರವಣಿಗಳನ್ನು ಅಧ್ಯಯನ ಮಾಡಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ, ಶಿಕ್ಷಣ ಮಾರ್ಗದರ್ಶಿಯ ಪುರವಣಿ ಸಂಖ್ಯೆಗಳನ್ನು ಸಂಗ್ರಹಿಸಿ ಕಳುಹಿಸುವ ಹತ್ತು ಮಂದಿ ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.