Advertisement

ಜನೋಪಯೋಗಿ ಕಾರ್ಯ ನಿತ್ಯ ನಿರಂತರವಾಗಿರಲಿ

05:15 PM Sep 08, 2021 | Team Udayavani |

ಚಿತ್ರದುರ್ಗ : ಕಲ್ಯಾಣದ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಸತ್ಕಾರ್ಯಗಳು, ಜನೋಪಯೋಗಿ ಕಾರ್ಯಗಳು ನಿತ್ಯವೂ ಸಾಗಬೇಕು. ಧಾರ್ಮಿಕ ಕೇಂದ್ರಗಳು ಇರುವುದು ಜನಸಾಮಾನ್ಯರಿಗಾಗಿ. ಕಲ್ಯಾಣವನ್ನು ಬಿಟ್ಟು ನಾವು ಇರಬಾರದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರ ಸಮೀಪದ ವಿಶ್ವಮಾನವ ಸಾಂಸ್ಕೃತಿಕ ಹಾಗೂ ಶೆ„ಕ್ಷಣಿಕ ಸಂಸ್ಥೆಯ ವಸತಿ ಶಾಲಾ ಆವರಣದಲ್ಲಿ ನಡೆದ 2021ರ ಶ್ರಾವಣಮಾಸದ “ನಿತ್ಯಕಲ್ಯಾಣ’ ವಿಶೇಷ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು. ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ : 1666 ದೈಹಿಕ ಶಿಕ್ಷಕರಿಗೆ ಕ್ರೀಡಾ ಇಲಾಖೆಯಿಂದ ವೈಜ್ಞಾನಿಕ ತರಬೇತಿ : ಸಚಿವ ಡಾ‌.ನಾರಾಯಣಗೌಡ

ಅದು ಅವರನ್ನು ಖನ್ನತೆಗೆಕರೆದುಕೊಂಡು ಹೋಗಿದೆ. ಪ್ರಪಂಚದಾದ್ಯಂತ 24 ಲಕ್ಷ ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ. ಇದಕ್ಕೆ ಯಾರು ಹೊಣೆಯಲ್ಲ.ಕೊರೋನಾ ಇಂತಹ ಸಂದರ್ಭ ಸೃಷ್ಟಿ ಮಾಡಿದೆ ಎಂದರು.

ಮಕ್ಕಳ ಚಲನವಲನದ ಮೇಲೆ ಗಮನ ಹರಿಸಬೇಕು. ಮಕ್ಕಳ ಭವಿಷ್ಯವನ್ನು ನಾವು ರೂಪಿಸಿಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಬೇಕು. ಅದರಿಂದ ಅವರು ಭವಿಷ್ಯ ಕಟ್ಟಿಕೊಳ್ಳುತ್ತಾರೆ. ಆದರೆ ಅವರಿಗೆ ಅಪಾರವಾದ ಆಸ್ತಿಯನ್ನು ಮಾಡಬಾರದು.

Advertisement

ಧಾರ್ಮಿಕ ಮುಖಂಡರು, ಸಮಾಜ ಸುಧಾರಕರು ಕೈಕಟ್ಟಿ ಕುಳಿತರೆ ಅಲ್ಲಿ ಗೂಂಡಾ ರಾಜ್ಯ ನಿರ್ಮಾಣವಾಗುತ್ತದೆ. ಹಾಗಾಗಿ ಕಲ್ಯಾಣ ರಾಜ್ಯದ ಪರಿಕಲ್ಪನೆ ಕೊಡಬೇಕಿದೆ. ಹಾಗಾಗಿ ನಾವು ಎಂದೂ ಸುಮ್ಮನೆ ಕೂರುವವರಲ್ಲ. ಹಾಗಾಗಿ ಅಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ಮಾತನಾಡಿ, ಮುರುಘಾ ಶರಣರು ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಮುರಿಗೆ ಶಾಂತವೀರ ಶ್ರೀಗಳಿಂದ ಜಯವದೇವ ಶ್ರೀಗಳವರೆಗೆ ಅನೇಕ ಪವಾಡಗಳು ನಡೆದಿವೆ. ಜಯದೇವ ಜಗದ್ಗುರುಗಳು ಅನೇಕ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ್ದಾರೆ.

ಯಾರೂ ಸಹ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ನಾನು ನಿಜವಾಗಿ ವಿರಕ್ತ ಪರಂಪರೆಯವನು. ಬಸವ ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡು ಸಮಾಜವನ್ನು ಕಟ್ಟುತ್ತಿದ್ದೇನೆ. ಅಭಿವೈದ್ಧಿ ನಿಗಮದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದರು.

ಎಚ್‌. ಜಲೀಲ್‌ ಸಾಬ್‌, ವೀರಶೈವ ಸಮಾಜದ ಅಧ್ಯಕ್ಷ ಎಲ್‌. ಬಿ. ರಾಜಶೇಖರಪ್ಪ ಮಾತನಾಡಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌, ಪ್ರಸನ್ನಕುಮಾರ್‌, ಮರುಳಾರಾಧ್ಯ ವೇದಿಕೆಯಲ್ಲಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಮೋಕ್ಷಾ ರುದ್ರಸ್ವಾಮಿ ಸ್ವಾಗತಿಸಿದರು.

ಇದನ್ನೂ ಓದಿ : ಕೋವಿಡ್ : ಮನೆಮನೆಗೆ ತೆರಳಿ ಲಸಿಕೆ ನೀಡಿಯೆಂದು ಆದೇಶಿಸಲು ಸಾಧ್ಯವಿಲ್ಲ : ಸುಪ್ರೀಂ ಅಭಿಪ್ರಾಯ

Advertisement

Udayavani is now on Telegram. Click here to join our channel and stay updated with the latest news.

Next