Advertisement

ಸರ್ಕಾರಿ ಸಾಲ- ಸೌಲಭ್ಯ ಸದುಪಯೋಗವಾಗಲಿ

12:38 PM Aug 27, 2021 | Team Udayavani |

ಚಿಕ್ಕಮಗಳೂರು: ಮಹಿಳಾ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸಾಲ- ಸೌಲಭ್ಯಗಳನ್ನು ಒದಗಿಸುತ್ತಿದ್ದು, ಈ ಸೌಲಭ್ಯಗಳ ‌ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌ ತಿಳಿಸಿದರು. ಗ ‌ುರುವಾರ ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಡೇ ನಲ್ಮ್ ಯೋಜನೆಯಡಿ ಸ್ವ- ಸಹಾಯ ಸಂಘಗಳ ಹಾಗೂ ಪ್ರದೇಶ ಮಟ್ಟದ ಒಕ್ಕೂಟಗಳ ಸದಸ್ಯರಿಗೆ ಪುಸಕ್ತ ನಿರ್ವಹಣೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ‌ ಕುರಿತು ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ನಗರ ವ್ಯಾಪ್ತಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಬೆಳವಣಿಗೆ ನಿಟ್ಟಿನಲ್ಲಿ ಸರ್ಕಾರವು ಲೀಡ್‌ ಬ್ಯಾಂಕ್‌ ಮೂಲಕ ‌ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿದೆ. ಮಹಿಳಾ ಸಂಘ ಗಳು ಇದರ ಸದುಪಯೋಗಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

ಲೀಡ್‌ಬ್ಯಾಂಕ್‌ವತಿಯಿಂದನಗರವ್ಯಾಪ್ತಿಯ ಸ್ವ-ಸಹಾಯ ಸಂಘಗಳಿಗಳ ನೆರವು ನೀಡಲು ಶ್ರಮಿಸಲಿದೆ. ಸಾಲ ಸೌಲಭ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನು ° ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಉತ್ತಮವಾಗಿ ಸಂಘಗಳನ್ನು ನಿರ್ವಹಣೆ ಮಾಡಿಕೊಂಡು ಗೃಹ ಸಾಲ, ವೈಯಕ್ತಿಕ ಸಾಲ ಒಳಗೊಂಡಂತೆ ಸಂಘಕ್ಕೆ ಒಂದು ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯ ಲಿದೆ ಎಂದರು.

ಸ್ವಯಂ ಉದ್ದಿಮೆಗಳು, ಆರ್ಥಿಕ ಜೀವನೋಪಾಯ ಚಟುವಟಿಕೆಗಳಿಗೆ ಸಾಲ ದೊರೆಯಲಿದೆ. ಡೇ ನಲ್ಮ್ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೂ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸ್ವಯಂ ಪ್ರೇರಿತವಾಗಿ ಜನತೆ ಸಹಕರಿಸಬೇಕು. ಹಸಿ ಹಾಗೂ ಒಣಕಸವನ್ನು ವಿಂಗಡಿಸಿ ನೀಡಬೇಕು. ಮುಂದಿನ ‌ ಒಂದೂವರೆ ತಿಂಗಳಲ್ಲಿ ನಗರದಲ್ಲಿ ಅಮೃತ್‌ ಯೋಜನೆ ತಾಂತ್ರಿಕ ಕಾಮಗಾರಿ ಪೂರ್ಣಗೊಳ್ಳಲಿದ್ದು, ದಿನಪೂರ್ತಿ ಮನೆ- ಮನೆಗೆ ಕುಡಿಯುವ ನೀರು ಸಿಗಲಿದೆ ಎಂದು ಹೇಳಿದರು. ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ‌ ಸುರೇಶ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವ-ಸಹಾಯ ಸಂಘಗಳ Ó ‌ದಸ್ಯರು ಸಮನ್ವಯದಿಂದ ಸಂಘದ ಚಟುವಟಿಕೆ ಪಾಲ್ಗೊಳ್ಳಬೇಕು. ಕಾಲ- ಕಾಲಕ್ಕೆ ಸಭೆ ನಡೆಸಬೇಕು. ಮುಖ್ಯವಾಗಿ ಪುಸ್ತಕ ನಿರ್ವಹO ೆ ಉತ್ತಮವಾಗಿಬೇಕು. ಸಾಮಾ ಜಿಕ ಭದ್ರತಾ ಯೋಜನೆಗಳ ‌ಬಗ್ಗೆಮಾಹಿತಿಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರಸಭೆ ಸಮುದಾಯ ಸ ‌ಂಘಟನಾಧಿಕಾರಿ ಚಂದ್ರಶೇಖರ್‌ ಮಾತನಾಡಿ, ಸರ್ಕಾರದಿಂದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಹಲವು ರೀತಿಯ ಸಾಲಸೌಲಭ್ಯ ನೀಡಲಿದೆ.

ಉದ್ಯಮ ಚಟುವಟಿಕೆಗಳಿಗೆ, ಗೃಹಸಾಲ, ವ್ಯಾಪಾರ ಮತ್ತಿತರ ‌ ಸೌಲಭ್ಯ ನೀಡಲಿದ್ದು, ಆ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ ಎಂದರು. ನಗರ ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಡವಸ್ಥಾಪಕರಾದ ಹರ್ಷ, ಕೌಶಲ್ಯಾಭಿವೃದ್ಧಿ ಇಲಾಖೆ ಶಿವಲಿಂಗಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಸುದರ್ಶನ್‌, ಕೃಷ್ಣಮೂರ್ತಿ ಇತ‌ರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next