Advertisement

ಪುಣ್ಯಕ್ಷೇತ್ರ ಪೆಟ್ರೋಲ್‌ ಬಂಕ್‌ ಇದ್ದಂತೆ : ರಂಭಾಪುರಿ ಶ್ರೀ

03:06 PM Aug 30, 2021 | Team Udayavani |

ಬಾಳೆಹೊನ್ನೂರು : ಜೀವನದ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಪುಣ್ಯ ಕ್ಷೇತ್ರಗಳು ಪೆಟ್ರೋಲ್‌ ಬಂಕ್‌ಗಳಿದ್ದಂತೆ ಎಂದು ಶ್ರೀ ರಂಭಾಪುರಿ ಡಾ| ಪ್ರಸನ್ನ ವೀರಸೋಮೇಶ್ವರ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ 30ನೇ ವರ್ಷದ ಇಷ್ಟಲಿಂಗ ಪೂಜಾನುಷ್ಠಾನದ ರವಿವಾರದ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವಾಹನಗಳ ಇಂಧನ ಖಾಲಿಯಾದಾಗ ಪೆಟ್ರೋಲ್‌ ಬಂಕ್‌ಗಳಿಗೆ ಬಂದು ಇಂಧನ ತುಂಬಿಸಿಕೊಳ್ಳುವ ಹಾಗೆ ಶಾಂತಿ, ನೆಮ್ಮದಿ ಮತ್ತು ಉತ್ಕರ್ಷತೆ ಹೊಂದಲು ಧರ್ಮ ಪೀಠಗಳಿಗೆ ಬಂದು ಪುಣ್ಯ ಸಂಪಾದಿಸಿಕೊಳ್ಳಬೇಕು.

ಸೂರ್ಯ ಬೆಳಗದೇ ಇದ್ದರೆ, ಗಾಳಿ ಬೀಸದೇ ಇದ್ದರೆ, ಮಳೆ ಬೀಳದೇ ಇದ್ದರೆ ಜನರ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ಪ್ರತಿಯೊಂದಕ್ಕೂ ಧರ್ಮವಿದೆ. ಧರ್ಮದ ತಳಹದಿಯ ಮೇಲೆ ಮನುಷ್ಯನ ಬದುಕು ನಿಂತುಕೊಂಡಿದೆ.

ಅಜ್ಞಾನದಿಂದ ಮುಗ್ಗರಿಸಿದ ಜನತೆಯನ್ನು ಸನ್ಮಾರ್ಗಕ್ಕೆ ಕರೆ ತರುವ ಮತ್ತು ಉದ್ಧರಿಸುವ ಶಕ್ತಿ ಗುರುವಿಗೆ ಇದೆ. ಮನುಷ್ಯನಲ್ಲಿ ಉದಾರತೆ, ಸಹೋದರತೆ, ಸಹಾನುಭೂತಿ, ಕರ್ತವ್ಯಶೀಲತೆ,ಶಿಸ್ತುಶ್ರದ್ಧೆಹಾಗೂಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಬಂಕಾಪುರ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಇದ್ದರು.

ಶ್ರೀ ರಂಭಾಪುರಿ ಪೀಠಕ್ಕೆ ಶಿಕ್ಷಣ ಸಚಿವರ ಭೇಟಿ :  ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ರಂಭಾಪುರಿಡಾ|ವೀರಸೋಮೇಶ್ವರ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವ ಕೇಂದ್ರಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ದೊರಕಿಸಿಕೊಡುವ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next