Advertisement
ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಅ ಧಿಕಾರಿ ವರ್ಗವು ತಮ್ಮ ಕಚೇರಿಗೆ ಬರುವ ಜನರನ್ನು ಪ್ರೀತಿ- ವಿಶ್ವಾಸಗಳಿಂದ ಮಾತನಾಡಿಸಿ ಅವರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡಲು ಮುಂದಾಗಬೇಕು. ಈ ವಿಷಯದಲ್ಲಿ ತಾವು ಯಾರೊಂದಿಗೂ ರಾಜಿ ಇಲ್ಲವೆಂದು ಖಡಕ್ಕಾಗಿ ಅ ಧಿಕಾರಿಗಳಿಗೆ ಎಚ್ಚರಿಸಿದರು.
Related Articles
Advertisement
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿ ಅಂಬೇಡ್ಕರ್ ಭವನ ಪೂರ್ಣವಾಗಿದ್ದರೆ ಲೋಕಾರ್ಪಣೆ ಮಾಡಲು ಅಧಿ ಕಾರಿ ಶಂಕರಮೂರ್ತಿಗೆ ತಿಳಿಸಿದರು. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಚೌಳಹಿರಿಯೂರು ಗ್ರಾಮದ ಭಾಗ್ಯಲಕ್ಷಿ ¾ ಬ್ರಾ0ಡ್ ವಿತರಣೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸಿ ವಿಶೇಷ ಪ್ರಕರಣ ಎಂದು ನ್ಯಾಯ ನೀಡಲು ಶಾಸಕ ಬೆಳ್ಳಿಪ್ರಕಾಶ್ ಅಧಿಕಾರಿ ಆಶಾ ಅವರಿಗೆ ಸೂಚಿಸಿದರು.
ಶಿಕ್ಷಣ ಇಲಾಖೆ: ಕಡೂರು ಹೊಸಹಳ್ಳಿಯಲ್ಲಿರುವ ಬೀರೂರು ವಲಯದ ಮುಚ್ಚಿರುವ ಶಾಲೆಯನ್ನು ಕಡೂರು ವಲಯಕ್ಕೆ ವರ್ಗಾವಣೆ ಮಾಡಲು ಅ ಧಿಕಾರಿಗಳು ಮುಂದಾಗಬೇಕೆಂದು ಆದೇಶಿಸಿದರು. ಕಾರ್ಮಿಕ ಇಲಾಖೆಯ ಅ ಧಿಕಾರಿ ಶಶಿಕಲಾ ಅವರು ಕೊರೊನಾ ಕಿಟ್‌ಗಳನ್ನು ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹಾಗೂ ಶಾಸಕರಿಂದ ಬಿಡುಗಡೆ ಮಾಡಿಸಿದರು. ಕಂದಾಯ ಇಲಾಖೆಯಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಬರುವ ಅರ್ಜಿಗಳನ್ನು ಅವರ ವಿಳಾಸಕ್ಕೆ ತೆರಳಿ ನೈಜ ಮಾಹಿತಿ ಪಡೆದು ಪರಿಶೀಲಿಸಿ ಜಾತಿ ಪ್ರಮಾಣ ಪತ್ರ ನೀಡಲು ತಹಶೀಲ್ದಾರ್‌ರಿಗೆ ಶಾಸಕರು ಸೂಚಿಸಿದರು.
ಕಡೂರು ಪುರಸಭೆ ವ್ಯಾಪ್ತಿಯಲ್ಲಿನ ಪಾದಚಾರಿ ರಸ್ತೆಗಳಲ್ಲಿ ವ್ಯಾಪಾರಿಗಳು ಹೆಚ್ಚಿದ್ದು ಸಾರ್ವಜನಿಕರು ರಸ್ತೆಯ ಮೇಲೆಯೇ ಓಡಾಡುವಂತಾಗಿದೆ. ಇದಕ್ಕೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಶಾಸಕರು ಪ್ರಶ್ನಿಸಿದರು. ತಂಗಲಿ ಗ್ರಾಪಂ ವ್ಯಾಪ್ತಿಗೆ ಸೇರುವ ಲೇಔಟ್ ಗಳಿಗೆ ಪುರಸಭೆ ಖಾತೆ ಮಾಡುತ್ತಿದೆ ಇದು ಹೇಗೆ ಎಂದು ಪ್ರಶ್ನಿಸಿದರು.
ಪಂಪ್‌ಹೌಸ್ ಹತ್ತಿರ ನಿರ್ಮಿಸುತ್ತಿರುವ ಉದ್ಯಾನವನ ನಿರ್ಮಾಣಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ತಂಗಲಿ ಪಂಚಾಯ್ತಿಗೆ ಸೇರುತ್ತದೆ ಎಂಬ ಅಂಶವನ್ನು ಪ್ರಸ್ತಾಪಿಸಿದರು. ಮೆಸ್ಕಾಂ, ಲೋಕೊಪಯೋಗಿ, ಜಿಪಂ, ಎಂಜಿನಿಯರ್ ವಿಭಾಗ, ಆಹಾರ, ಅರಣ್ಯ, ಅಗ್ನಿ, ಪೊಲೀಸ್ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಯ ಪ್ರಗತಿ ಪರಿಶೀಲಿಸಿದರು. ತಹಶೀಲ್ದಾರ್ ಜೆ. ಉಮೇಶ್, ಇಒ ಡಾ| ದೇವರಾಜ ನಾಯ್ಕ, ತಾಪಂ ಆಡಳಿತಾ ಧಿಕಾರಿ ಸತೀಶ್ ಇತರರು ಇದ್ದರು.