ಉಡುಪಿ: ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಪ್ರಧಾನ ಪ್ರಾಯೋಜಕತ್ವದಲ್ಲಿ, ಆರ್ಟಿಸ್ಟ್ ಫೋರಂ ಉಡುಪಿ ಸಹಯೋಗದಲ್ಲಿ “ಉದಯ ವಾಣಿ’ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ -2019′ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ಅ.19ರಿಂದ ಆರಂಭಗೊಳ್ಳಲಿದೆ.
ಅ.19ರಂದು ಅಪರಾಹ್ನ 2ರಿಂದ 4ರ ವರೆಗೆ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣ, ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪ, ಬೆಳ್ತಂಗಡಿ ಸಂತೆಕಟ್ಟೆಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ದಲ್ಲಿ ನಡೆಯಲಿದೆ.
ಅ. 20ರಂದು ಪೂರ್ವಾಹ್ನ 10.30ರಿಂದ 12.30ರ ವರೆಗೆ ಸುಳ್ಯದ ಕೆ.ವಿ.ಜಿ. ಕಾನೂನು ಮಹಾ ವಿದ್ಯಾಲಯ ಮತ್ತು ಅಪರಾಹ್ನ 2ರಿಂದ 4ರ ವರೆಗೆ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕೆ. ದಾಮೋದರ ಕಿಣಿ ಮೆಮೋರಿಯಲ್ ಇಂಡೋರ್ ಗೇಮ್ಸ್, ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಲಿದೆ.
ಅ. 26ರಂದು ಅಪರಾಹ್ನ 2ರಿಂದ 4ರ ವರೆಗೆ ಮಂಗಳೂರು ಉರ್ವ ಕೆನರಾ ಹೈಸ್ಕೂಲ್, ಉಡುಪಿಯ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.
1ರಿಂದ 3ನೇ ತರಗತಿ ಮತ್ತು 4ರಿಂದ 7ನೇ ತರಗತಿಯ ವಿದ್ಯಾರ್ಥಿ ಗಳಿಗೆ ಸ್ಪರ್ಧೆಯಲ್ಲಿ ವಿಷಯ ಐಚ್ಛಿಕವಾಗಿರುತ್ತದೆ. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ವಿಷಯ ತಿಳಿಸಲಾಗು ತ್ತದೆ.
ಡ್ರಾಯಿಂಗ್ ಶೀಟ್‌ಗಳನ್ನು ಒದಗಿಸಲಾಗುತ್ತದೆ. ಚಿತ್ರಕಲೆಗೆ ಸಂಬಂ ಧಿಸಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ದೊಂದಿಗೆ ಗಿಫ್ಟ್, ಹ್ಯಾಂಪರ್ ನೀಡ ಲಾಗುವುದು. ಪ್ರತೀ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ, ತೃತೀಯ ಮತ್ತು ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ. ಬಹುಮಾನವು ನಗದು, ಫಲಕ ಮತ್ತು ಪ್ರಶಸ್ತಿ ಫಲಕಗಳನ್ನು ಒಳ ಗೊಂಡಿರುತ್ತದೆ. ತಾಲೂಕು ಮಟ್ಟದ ಸ್ಪರ್ಧೆಗಳ ಫಲಿತಾಂಶ ಮತ್ತು ಬಹುಮಾನ ವಿಜೇತರ ಚಿತ್ರಗಳನ್ನು “ಉದಯವಾಣಿ’ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.