Advertisement

Udayavani Campaign: ಪುತ್ತೂರು- ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

01:36 PM Jun 25, 2024 | Team Udayavani |

ಪುತ್ತೂರು: ಪುತ್ತೂರು ಶಾಸಕ ಅಶೋಕ್‌ ರೈ ಅವರು ಸೋಮವಾರ ಪುತ್ತೂರಿನ ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿ ಅಲ್ಲಿದ್ದ ವಿದ್ಯಾ ರ್ಥಿಗಳ ಜತೆ ಅವರು ಎದುರಿಸುತ್ತಿರುವ  ಬಸ್‌ ಪ್ರಯಾಣದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಅಲ್ಲಿದ್ದ ನೂರಾರು ವಿದ್ಯಾರ್ಥಿಗಳು ತಮ್ಮೂರಿನ ರೂಟ್‌ಗಳಲ್ಲಿನ ಬಸ್‌ ಓಡಾಟದ ಹತ್ತಾರು ಸಮಸ್ಯೆಗಳನ್ನು ಮುಂದಿಟ್ಟರು.

Advertisement

“ಉದಯವಾಣಿ ಅಭಿಯಾನ’ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಅಧಿಕಾರಿಗಳಿಗೆ ಮಾಹಿತಿ ನೀಡದೆ
ದಿಢೀರ್‌ ಆಗಿ ಸೋಮವಾರ ಸಂಜೆ 4.15ರ ಹೊತ್ತಿಗೆ ಪುತ್ತೂರು ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಅದಾಗಲೇ ಸಾವಿರಕ್ಕೂ ಮಿಕ್ಕಿ
ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತಿದ್ದರು. ವಿದ್ಯಾರ್ಥಿಗಳ ಓಡಾಟದ ಸಂಕಟವನ್ನು ಸ್ವತಃ ಗಮನಿಸಿದ ಶಾಸಕರು, ವಿದ್ಯಾರ್ಥಿಗಳ ಸಂಕಷ್ಟವನ್ನು ಆಲಿಸಿ ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಕೆಎಸ್‌ ಆರ್‌ ಟಿಸಿ ಅಧಿಕಾರಿಗಳ ಜತೆಗೂ ಮಾತನಾಡಿದರು.

ಸಮಸ್ಯೆ ಬಿಚ್ಚಿಟ್ಟ ಮಕ್ಕಳು..!
*ನಗರ, ಗ್ರಾಮಾಂತರ, ಗಡಿಭಾಗದ ವಿದ್ಯಾರ್ಥಿಗಳು ಸಂಜೆ ಮತ್ತುಬೆಳಗ್ಗಿನ ಹೊತ್ತು ಬಸ್‌ ಗಾಗಿ ನಡೆಸುವ ಪರದಾಟ ವಿವರಿಸಿದರು.

*ಸಮಯ ಪರಿಪಾಲನೆ ಇಲ್ಲದೆ ಬೆಳಗ್ಗಿನ ಅವಧಿಗೆ ತರಗತಿ ಪ್ರವೇಶಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ವಿದ್ಯಾರ್ಥಿ ಝೈನುದ್ದೀನ್‌
ಹೇಳಿದರು.

*ಗಡಿಭಾಗದ ಸಂಚಾರದ ತೊಂದರೆಗಳನ್ನು ವಿದ್ಯಾರ್ಥಿನಿ ಆರಾಧಿತಾ ವಿವರಿಸಿದರು.

Advertisement

*ಕೆದಿಲ, ಬೆಟ್ಟಂಪಾಡಿ, ಶಾಂತಿಮೊಗರು ಮೊದಲಾದೆಡೆಯ ವಿದ್ಯಾರ್ಥಿಗಳು ಶಾಸಕರ ಮುಂದೆ ಅಳಲು ತೋಡಿಕೊಂಡರು.

ಅಧಿಕಾರಿಗಳಿಗೆ ತರಾಟೆ
*ಬೇರೆ ಬೇರೆ ರೂಟ್‌ಗಳಲ್ಲಿನ ಸಮಸ್ಯೆ ದಾಖಲಿಸಿಕೊಂಡ ಶಾಸಕರು ಮತ್ತೊಮ್ಮೆ ನಿಲ್ದಾಣಕ್ಕೆ ಭೇಟಿ ನೀಡುವ ಹೊತ್ತಿಗೆ ಸಮಸ್ಯೆ
ಬಗೆಹರಿದಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

*ಬಸ್‌ ಕೊರತೆ, ಚಾಲಕ ನಿರ್ವಾಹಕರ ಕೊರತೆ ಒಂದು ಭಾಗವಾದರೆ, ಇರುವ ರೂಟ್‌ ಗಳಲ್ಲಿ ಬಸ್‌ ಅನ್ನು ಏಕೆ ಸಮರ್ಪಕವಾಗಿ ಓಡಿಸುತ್ತಿಲ್ಲ ಎಂದು ಕೇಳಿದರು.

*ಸಮಯ ಪಾಲನೆ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

ಶಾಸಕರ ಊರಲ್ಲೇ ಬಸ್‌ ನಿಲ್ಲಲ್ಲ!
ನೆಕ್ಕಿಲಾಡಿ ಬಳಿ ಬಸ್‌ ನಿಲ್ಲಿಸದೆ ಇರುವ ಬಗ್ಗೆ ಮಹಿಳಾ ಪ್ರಯಾಣಿಕೆ ಶಾಸಕರ ಗಮನಕ್ಕೆ ತಂದರು. ನನ್ನ ಊರಿನಲ್ಲೇ ಬಸ್‌ ನಿಲ್ಲಿಸದೆ
ಇರುವ ಸಮಸ್ಯೆ ಇದೆ ಅಂದರೆ ಏನರ್ಥ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಇಂತಹ ದೂರು ಮತ್ತೆ ಬಾರದಂತೆ
ಎಚ್ಚರವಹಿಸುವಂತೆ ಸೂಚಿಸಿದರು.

ಬಸ್‌ ಪುಲ್‌;ಇನ್ನೊಂದನ್ನು ಏರಿದ ರೈ
ಪುತ್ತೂರು ಬಸ್‌ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳ ಅಭಿಪ್ರಾಯ ಆಲಿಸಿದ ಶಾಸಕರು, ಖುದ್ದು ಬಸ್‌ ಏರಿ ವಿದ್ಯಾರ್ಥಿಗಳ ಸಂಕಷ್ಟ ಗಮನಿಸಿದರು. ಒಂದು ಬಸ್‌ ನ ಡೋರ್‌ನಲ್ಲೇ ವಿದ್ಯಾರ್ಥಿಗಳ ನೇತಾಡುತ್ತಿದ್ದ ಕಾರಣ ಇನ್ನೊಂದಕ್ಕೆ ಏರಿದರು. ಕೆದಿಲ, ಕಾಣಿಯೂರು ರೂಟ್‌ನ ಬಸ್‌ ಏರಿದ ಶಾಸಕರ ಮುಂದೆ ಬಸ್‌ ವಿಳಂಬವಾಗಿ ಬರುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next