Advertisement
“ಉದಯವಾಣಿ ಅಭಿಯಾನ’ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಅಧಿಕಾರಿಗಳಿಗೆ ಮಾಹಿತಿ ನೀಡದೆದಿಢೀರ್ ಆಗಿ ಸೋಮವಾರ ಸಂಜೆ 4.15ರ ಹೊತ್ತಿಗೆ ಪುತ್ತೂರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಅದಾಗಲೇ ಸಾವಿರಕ್ಕೂ ಮಿಕ್ಕಿ
ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತಿದ್ದರು. ವಿದ್ಯಾರ್ಥಿಗಳ ಓಡಾಟದ ಸಂಕಟವನ್ನು ಸ್ವತಃ ಗಮನಿಸಿದ ಶಾಸಕರು, ವಿದ್ಯಾರ್ಥಿಗಳ ಸಂಕಷ್ಟವನ್ನು ಆಲಿಸಿ ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಕೆಎಸ್ ಆರ್ ಟಿಸಿ ಅಧಿಕಾರಿಗಳ ಜತೆಗೂ ಮಾತನಾಡಿದರು.
*ನಗರ, ಗ್ರಾಮಾಂತರ, ಗಡಿಭಾಗದ ವಿದ್ಯಾರ್ಥಿಗಳು ಸಂಜೆ ಮತ್ತುಬೆಳಗ್ಗಿನ ಹೊತ್ತು ಬಸ್ ಗಾಗಿ ನಡೆಸುವ ಪರದಾಟ ವಿವರಿಸಿದರು. *ಸಮಯ ಪರಿಪಾಲನೆ ಇಲ್ಲದೆ ಬೆಳಗ್ಗಿನ ಅವಧಿಗೆ ತರಗತಿ ಪ್ರವೇಶಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ವಿದ್ಯಾರ್ಥಿ ಝೈನುದ್ದೀನ್
ಹೇಳಿದರು.
Related Articles
Advertisement
*ಕೆದಿಲ, ಬೆಟ್ಟಂಪಾಡಿ, ಶಾಂತಿಮೊಗರು ಮೊದಲಾದೆಡೆಯ ವಿದ್ಯಾರ್ಥಿಗಳು ಶಾಸಕರ ಮುಂದೆ ಅಳಲು ತೋಡಿಕೊಂಡರು.
ಅಧಿಕಾರಿಗಳಿಗೆ ತರಾಟೆ*ಬೇರೆ ಬೇರೆ ರೂಟ್‌ಗಳಲ್ಲಿನ ಸಮಸ್ಯೆ ದಾಖಲಿಸಿಕೊಂಡ ಶಾಸಕರು ಮತ್ತೊಮ್ಮೆ ನಿಲ್ದಾಣಕ್ಕೆ ಭೇಟಿ ನೀಡುವ ಹೊತ್ತಿಗೆ ಸಮಸ್ಯೆ
ಬಗೆಹರಿದಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. *ಬಸ್ ಕೊರತೆ, ಚಾಲಕ ನಿರ್ವಾಹಕರ ಕೊರತೆ ಒಂದು ಭಾಗವಾದರೆ, ಇರುವ ರೂಟ್ ಗಳಲ್ಲಿ ಬಸ್ ಅನ್ನು ಏಕೆ ಸಮರ್ಪಕವಾಗಿ ಓಡಿಸುತ್ತಿಲ್ಲ ಎಂದು ಕೇಳಿದರು. *ಸಮಯ ಪಾಲನೆ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು. ಶಾಸಕರ ಊರಲ್ಲೇ ಬಸ್ ನಿಲ್ಲಲ್ಲ!
ನೆಕ್ಕಿಲಾಡಿ ಬಳಿ ಬಸ್ ನಿಲ್ಲಿಸದೆ ಇರುವ ಬಗ್ಗೆ ಮಹಿಳಾ ಪ್ರಯಾಣಿಕೆ ಶಾಸಕರ ಗಮನಕ್ಕೆ ತಂದರು. ನನ್ನ ಊರಿನಲ್ಲೇ ಬಸ್ ನಿಲ್ಲಿಸದೆ
ಇರುವ ಸಮಸ್ಯೆ ಇದೆ ಅಂದರೆ ಏನರ್ಥ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಇಂತಹ ದೂರು ಮತ್ತೆ ಬಾರದಂತೆ
ಎಚ್ಚರವಹಿಸುವಂತೆ ಸೂಚಿಸಿದರು. ಬಸ್ ಪುಲ್;ಇನ್ನೊಂದನ್ನು ಏರಿದ ರೈ
ಪುತ್ತೂರು ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳ ಅಭಿಪ್ರಾಯ ಆಲಿಸಿದ ಶಾಸಕರು, ಖುದ್ದು ಬಸ್ ಏರಿ ವಿದ್ಯಾರ್ಥಿಗಳ ಸಂಕಷ್ಟ ಗಮನಿಸಿದರು. ಒಂದು ಬಸ್ ನ ಡೋರ್‌ನಲ್ಲೇ ವಿದ್ಯಾರ್ಥಿಗಳ ನೇತಾಡುತ್ತಿದ್ದ ಕಾರಣ ಇನ್ನೊಂದಕ್ಕೆ ಏರಿದರು. ಕೆದಿಲ, ಕಾಣಿಯೂರು ರೂಟ್‌ನ ಬಸ್ ಏರಿದ ಶಾಸಕರ ಮುಂದೆ ಬಸ್ ವಿಳಂಬವಾಗಿ ಬರುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.