ಬಸವರೆಡ್ಡಿ ಕರೂರು
ಸಿರುಗುಪ್ಪ: ತಾಲೂಕಿನಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆಯನ್ನು ಮೊದಲ ಬೆಳೆಯಾಗಿ ಬೆಳೆದ ರೈತರಿಗೆ ಉತ್ತಮವಾದ ಯೋಗ್ಯಬೆಲೆ ದೊರೆತಿದ್ದು, ಸೂರ್ಯಕಾಂತಿ ಬೆಳೆದ ರೈತರರ ಮೊಗದಲ್ಲಿ ಮಂದಹಾಸ ಮೂಡಿದೆ.
ತಾಲೂಕಿನ ಬಲಕುಂದಿ, ಅರಳಿಗನೂರು, ಪೊಪ್ಪನಾಳು, ಗೋಸಬಾಳು, ಸಿರಿಗೇರಿ, ಹಾವಿನಾಳು, ಚನ್ನಪಟ್ಟಣ, ಗುಂಡಿಗನೂರು ಸೇರಿ ದಂತೆಇತರೆ ಗ್ರಾಮಗಳಲ್ಲಿ ಮುಂಗಾರುಆರಂಭದ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಳೆಯಾಶ್ರಿತ ಮತ್ತು ನೀರಾವರಿಯಾಶ್ರಿತ ಜಮೀನಿನಲ್ಲಿ ರೈತರು ಸೂರ್ಯಕಾಂತಿ ಬೆಳೆಯನ್ನು ಬಿñನೆ ¤ ಮಾಡಿದ್ದರು. ಸಾಮಾನ್ಯವಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಲು ಆಗಸ್ಟ್ ತಿಂಗಳವರೆಗೆ ಕಾಯಬೇಕಾಗುತ್ತದೆ ಎನ್ನುವ ಉದ್ದೇಶದಿಂದ ನೀರಾವರಿ ಆಶ್ರಿತ ಪ್ರದೇಶದ ರೈತರೂ ಸೂರ್ಯಕಾಂತಿ ಬೆಳೆಯನ್ನು ಬೆಳದಿದ್ದು, ತಾಲೂಕಿನಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ 700 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆ ಬಿತ್ತನೆಯಾಗಿದ್ದು, ಈಗಾಗಲೇ ರೈತರು ಬೆಳೆ ಕಟಾವು ಮಾಡಿ 2ನೇ ಬೆಳೆಯನ್ನು ನೀರಾವರಿಯಾಶ್ರಿತ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ.
ಉತ್ತಮ ಬೆಳೆ: ಪ್ರತಿ ವರ್ಷ ಮುಂಗಾರಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ ರೈತರಿಗೆ ನಂತರ ಉತ್ತಮ ಮಳೆಯಾಗದೆ ಹಳ್ಳ, ಹಗರಿ ನದಿಗೆ ನೀರಿಲ್ಲದೆ ಬೆಳೆ ನಷ್ಟ ಅನುಭವಿಸುತ್ತಿದ್ದರು. ಈ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಉತ್ತಮ ಮುಂಗಾರು ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆ ಉತ್ತಮ ಫಸಲು ನೀಡಿದೆ.
ಉತ್ತಮ ಬೆಲೆ: ಪ್ರಸಕ್ತ ವರ್ಷ ಅಡುಗೆ ಎಣ್ಣೆ ಬೆಲೆ ಹೆಚ್ಚಾಗಿದ್ದು, ರೈತರು ಬೆಳೆದ ಸೂರ್ಯಕಾಂತಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ಬೆಲೆಯು ದೊರೆತಿದ್ದು,ಒಂದುಕ್ವಿಂಟಲ್‌ಸೂರ್ಯಕಾಂತಿಯು ರೂ. 7000ಗಳ ಅಧಿಕ ಬೆಲೆಗೆ ಮಾರಾಟವಾಗಿದ್ದು, ಸೂರ್ಯಕಾಂತಿ ಬೆಳೆ ಬೆಳೆಯಲು ಒಂದು ಎಕರೆಗೆ ರೂ. 5ರಿಂದ7ಸಾವಿರ ವೆಚ್ಚವಾಗಿದೆ. ಆದರೆ ಒಂದು ಎಕರೆಗೆ5ರಿಂದ 10 ಕ್ವಿಂಟಲ್ ಇಳುವರಿ ಬಂದಿದ್ದು ರೈತರಿಗೆ ಬಂಪರ್ ಲಾಭ ಬಂದಿದೆ.
ಭತ್ತ ನಾಟಿಗೂ ಮುನ್ನ ಕೈಸೇರಿದ ಹಣ: ಸಾಮಾನ್ಯವಾಗಿಇಲ್ಲಿನ ರೈತರಿಗೆಬೇಸಿಗೆಬೆಳೆನಂತರ ಕೃಷಿ ಕೆಲಸ ಇರುವುದಿಲ್ಲ. ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದಂತೆ ಕೃಷಿ ವೆಚcದ ಹಣಕ್ಕಾಗಿ ಪರದಾಡುತ್ತಿದ್ದ ರೈತರಿಗೆ ಮುಂಗಾರಿನಲ್ಲಿ ಬೆಳೆದ ಸೂರ್ಯಕಾಂತಿಯಿಂದ ಬಂದಉತ್ತಮಆದಾಯ ಭತ್ತ ನಾಟಿ ಮಾಡಲು ಅನುಕೂಲ ಮಾಡಿಕೊಟ್ಟಿದೆ.