Advertisement

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

03:52 PM Jun 21, 2021 | Team Udayavani |

ರಾಯಚೂರು:ವೀಕೆಂಡ್ ಕಫ್ಯೂ ವೇಳೆ ಬೀದಿಬದಿಯಲ್ಲಿ ತರಕಾರಿ ಮಾರುತ್ತಿರುವ ಕಾರಣಕ್ಕೆ ಬೂಟು ಕಾಲಲ್ಲಿ ತರಕಾರಿಗಳನ್ನು ಒದ್ದು ಚೆಲ್ಲಾಪಿಲ್ಲಿ ಮಾಡಿ ದರ್ಪ ಪ್ರದರ್ಶಿಸಿದ್ದ ನಗರದ ಸದರ ಬಜಾರ್ ಠಾಣೆ ಪಿಎಸ್ ಐ ಅಜಂ ಅವರನ್ನು ಅಮಾನತು ಮಾಡಲಾಗಿದೆ.

Advertisement

ಇದನ್ನೂ ಓದಿ:2024ರ ಸಾರ್ವತ್ರಿಕ ಚುನಾವಣೆ ಗುರಿ: ಎರಡನೇ ಬಾರಿ ಶರದ್ ಪವಾರ್, ಪ್ರಶಾಂತ್ ಕಿಶೋರ್ ಚರ್ಚೆ

ಕೋವಿಡ್ ವೀಕೆಂಡ್ ಕರ್ಫ್ಯೂ ಜಾರಿ ನಿಟ್ಟಿನಲ್ಲಿ ವ್ಯಾಪಾರ, ವಹಿವಾಟು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಆದರೆ ರಾಯಚೂರು ನಗರದ ತರಕಾರಿ ಮಾರುಕಟ್ಟೆ, ಭಂಗಿಕುಂಟಾ, ಚಂದ್ರಮೌಳೇಶ್ವರ ವೃತ್ತದಿಂದ ಪಟೇಲ್ ರಸ್ತೆ ಮಾರ್ಗದಲ್ಲಿ ರೈತರು, ವರ್ತಕರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಪಿಎಸ್ ಐ ತರಕಾರಿಯನ್ನೆಲ್ಲಾ ಒದ್ದು ಚಲ್ಲಾಪಿಲ್ಲಿ ಮಾಡಿದ್ದರು. ಪಿಎಸ್ ಐ ಅಜಂ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ರೈತರ ಮೇಲೆ ದರ್ಪ ಎಸಗಿದ್ದ ಪಿಎಸ್ ಐ ಅಜಂ ಕುರಿತ ವಿಡಿಯೋ ಉದಯವಾಣಿ ಡಾಟ್ ಕಾಮ್ ನಲ್ಲಿ ಪ್ರಕಟವಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಇದೀಗ ವರದಿಯ ಫಲಶ್ರುತಿ ಎಂಬಂತೆ ಪಿಎಸ್ ಐ ಅಜಂ ಅವರನ್ನು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್ ಅವರು ಅಮಾನತುಗೊಳಿಸಿ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಪಿಎಸ್ ಐ ದರ್ಪದ ಉದಯವಾಣಿ ವಿಡಿಯೋ ವೈರಲ್ ಆಗಿತ್ತು:
ವೀಕೆಂಡ್ ಕರ್ಫ್ಯೂ ವೇಳೆ ಬೀದಿಬದಿ ತರಕಾರಿ ಮಾರುತ್ತಿದ್ದ ರೈತರ ತರಕಾರಿಗಳನ್ನು ಕಾಲಿನಿಂದ ಒದ್ದು ಚಲ್ಲಾಪಿಲ್ಲಿ ಮಾಡಿ ದರ್ಪ ಪ್ರದರ್ಶಿಸಿದ್ದ ಪಿಎಸ್ ಐ ಅಜಂ ವಿಡಿಯೋ ಉದಯವಾಣಿ ಡಾಟ್ ಕಾಮ್ ನ ಫೇಸ್ ಬುಕ್ ನಲ್ಲಿ ಪ್ರಕಟವಾಗಿತ್ತು. ಪಿಎಸ್ ಐ ದರ್ಪದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೇ ಒಂದು ಸಾವಿರಕ್ಕೂ ಅಧಿಕ ಮಂದಿ ವಿಡಿಯೋವನ್ನು ಶೇರ್ ಮಾಡಿದ್ದರು. 800ಕ್ಕೂ ಅಧಿಕ ಓದುಗರು ಕಮೆಂಟ್ ಮಾಡುವ ಮೂಲಕ ಅಸಮಧಾನವ್ಯಕ್ತಪಡಿಸಿದ್ದರು.

ವೀಕೆಂಡ್, ಕೋವಿಡ್ ಲಾಕ್ ಡೌನ್ ಎಲ್ಲಾ ಬಡಜನರ ಮೇಲೆ ಮಾತ್ರ ಜಾರಿ, ಆದರೆ ರಾಜಕಾರಣಿಗಳು, ಶ್ರೀಮಂತರು ಬೇಕಾದ ಹಾಗೆ ತಿರುಗಾಡುತ್ತಾರೆ. ಇಂತಹ ದರ್ಪದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಓದುಗರು ಅಭಿಪ್ರಾಯವ್ಯಕ್ತಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next