ಬಿಎಸ್‌ಪಿ ಖಂಡಿತವಾಗಿಯೂ ಪ್ರಮುಖ ಪಕ್ಷಗಳಿಗೆ ಸ್ಪರ್ಧೆ ನೀಡಲಿದೆ. 2008ರಲ್ಲಿ ಬಿಎಸ್‌ಪಿ ಮೂರನೇ ಸ್ಥಾನದಲ್ಲಿತ್ತು. ಜೆಡಿಎಸ್, ಸಿಪಿಎಂ ಪಕ್ಷಗಳಿಗಿಂತಲೂ ಹೆಚ್ಚು ಮತ ಪಡೆದಿತ್ತು. ಯಾವ ಪಕ್ಷ ಗೆಲ್ಲಬೇಕು, ಯಾವ ಪಕ್ಷ ಸೋಲಬೇಕು ಎನ್ನುವ ತೀರ್ಮಾನವನ್ನು ನಮ್ಮ ಪಕ್ಷ ಮಾಡಲಿದೆ.
Advertisement
ಅಭ್ಯರ್ಥಿ ಅಂತಿಮವಾಗಿದೆಯೇ? ಎಲ್ಲೆಲ್ಲಿ ಸ್ಪರ್ಧೆ?ಮಾ. 28ರಂದು ಅಭ್ಯರ್ಥಿ ಅಂತಿಮವಾಗುವ ಸಾಧ್ಯತೆ ಇದೆ. ಜೆಡಿಎಸ್ ಜತೆಗೆ ಮೈತ್ರಿಯಾಗಿ ಕಾರ್ಕಳ ಕ್ಷೇತ್ರದಲ್ಲಿ ಮಾತ್ರ ಬಿಎಸ್‌ಪಿ ಸ್ಪರ್ಧಿಸಲಿದೆ. ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಪೂರ್ಣ ಬೆಂಬಲ ನೀಡಲಿದೆ. ಕಾರ್ಕಳದಲ್ಲಿ ಜೆಡಿಎಸ್ ಬಿಎಸ್‌ಪಿಗೆ ಬೆಂಬಲ ನೀಡಲಿದೆ.
ಚುನಾವಣೆ ತಯಾರಿ ಭರದಿಂದ ಸಾಗುತ್ತಿದೆ. ಗ್ರಾಮ, ಬೂತ್ ಮಟ್ಟದಿಂದ ಸಂಘಟನೆ ನಡೆಯುತ್ತಿದೆ. ಹೆಬ್ರಿ ಮತ್ತು ಕಾರ್ಕಳ ತಾಲೂಕನ್ನು ವಿಭಾಗ ಮಾಡಿಕೊಂಡು ಸಿದ್ಧತೆ ನಡೆಸಲಾಗುತ್ತಿದೆ. ಹಿಂದುಳಿದವರು, ಅಲ್ಪಸಂಖ್ಯಾಕರು, ಮುಸ್ಲಿಂ ವರ್ಗದವರನ್ನು ಗುರಿಯಾಗಿರಿಸಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಜೆಡಿಎಸ್ ಜತೆಗೆ ದಲಿತ ಸಂಘರ್ಷ ಸಮಿತಿ, ಸಿಪಿಎಂ, ಎಸ್‌ಡಿಪಿಐ, ಅಲ್ಪಸಂಖ್ಯಾಕ ಒಕ್ಕೂಟವೂ ಬಿಎಸ್‌ಪಿಗೆ ಸಹಕಾರ ನೀಡುವ ಭರವಸೆಯಿತ್ತಿದೆ. ಯಾವ ವಿಚಾರ ಮುಂದಿಟ್ಟುಕೊಂಡು ಮತಯಾಚನೆ?
ಭ್ರಷ್ಟಾಚಾರ ವಿರುದ್ಧ ಹೋರಾಟ, ಎಲ್ಲರಿಗೂ ಸಮ ಪಾಲು- ಸಮಬಾಳು ದೊರೆಯಬೇಕು. ಹಿಂದುಳಿದ ವರ್ಗಗಳ ಏಳಿಗೆ ಆಗಿ ಅವರು ಮುಖ್ಯವಾಹಿನಿಗೆ ಬರಬೇಕು. ಸಿಗಬೇಕಾದ ಸೌಲಭ್ಯಗಳು ಕಾಲ ಕಾಲಕ್ಕೆ ದೊರೆಯಬೇಕು. ರಾಜ್ಯ ಸರಕಾರ 1 ಲಕ್ಷ ಉದ್ಯೋಗ ಜಾರಿ ಮಾಡಬೇಕಿತ್ತು, ಅದನ್ನು ಮಾಡಿಲ್ಲ. ಯುವ ಜನತೆಗೆ ಉದ್ಯೋಗ ನೀಡುವಲ್ಲಿ ಸರಕಾರ ಧ್ವನಿ ಎತ್ತುತ್ತಿಲ್ಲ. ಶಿಕ್ಷಣ ವ್ಯಾಪಾರೀಕರಣವಾಗಿದೆ. ಉಚಿತ ಶಿಕ್ಷಣ ನೀಡುತ್ತಿಲ್ಲ. ಇವೆಲ್ಲ ನಮ್ಮ ಮುಖ್ಯ ವಿಚಾರ.
Related Articles
ಬಡವರಿಗೆ 94ಸಿಯಲ್ಲಿ ಭೂಮಿ ಹಕ್ಕು ನೀಡಬೇಕು, ಅರಣ್ಯ ಭೂಮಿ ಸಮಿತಿಯಲ್ಲಿ ಹೋರಾಟ ನಡೆಸಿದ್ದೇವೆ. ಬಡವರಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಹೋರಾಟ ನಡೆಸಿದ್ದೇವೆ.
Advertisement
ಪಕ್ಷದ ಕಾರ್ಯಕ್ರಮ ಏನೂ ನಡೆದಿಲ್ಲ? ಪ್ರಮುಖರ ಭೇಟಿ?ಗ್ರಾಮ ಮಟ್ಟದಲ್ಲಿ ನಡೆಯಬೇಕಾಗಿರುವುದು ನಡೆಯು ತ್ತಿದೆ. ಸಮಸ್ಯೆಗಳು ಬಗೆಹರಿಯಬೇಕು ಎನ್ನುವುದು ಪಕ್ಷದ ಉದ್ದೇಶ. ಬೈಕ್‌ಗಳ ಮೂಲಕ ಪ್ರತೀ ಗ್ರಾಮೀಣ ಪ್ರದೇಶಕ್ಕೆ ತೆರಳಲಾಗುತ್ತಿದೆ. ಆ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿತುಕೊಳ್ಳಲಾಗುತ್ತಿದೆ. ಉಡುಪಿ ಅಥವಾ ಕಾರ್ಕಳದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿ ಅವರೂ ಆಗಮಿಸಲಿದ್ದಾರೆ. – ಜಿವೇಂದ್ರ ಶೆಟ್ಟಿ ಗರ್ಡಾಡಿ